PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜೂನ ೧೨: ದಿನಾಂಕ ೧೨  ರಂದು ತಾಲುಕಿನ ಚಿಲವಾಡಗಿ ಗ್ರಾಮದ ಸರಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಹಾಗೂ ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜಯ ಸಮುದಾಯ ಸಂಘಟಕರ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಜಾಗೃತಿ ಜಾಥಾವನ್ನು ತಾಲೂಕ ಪಂಚಾಯತ ಸದಸ್ಯರಾದ ರಮೇಶ ಚೌಡ್ಕಿ ಉದ್ಘಾಟಿಸಿದರು. 
ಚಿಲವಾಡಗಿ ಶಾಲಾ ಮಕ್ಕಳೊಂದಿಗೆ ಬಾಲ ಕಾರ್ಮಿಕ ಪದ್ದತಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗ್ರತಿ ಕರಪತ್ರಗಳನ್ನು ಹಂಚಿ  ಪಾಲಕ ಪೋಷಕರಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ತಪ್ಪದೆ ದಾಖಲಿಸುವಂತೆ ತಿಳಿ ಹೇಳಲಾಯಿತು. 
ಶಾಲಾ ಮುಖ್ಯ ಶಿಕ್ಷಕಿಯರಾದ ಶ್ರಿಮತಿ ಅಂಬುಜಾ ಪಿ ಹಾಗೂ ಯುನಿಸೆಫ್‌ನ ಆನಂದ ಹಳ್ಳಿಗುಡಿ, ಮಹೇಶ ನಿಂಗಪ್ಪ ಹಂಚಿ ಪ್ರವೀಣ ಬಸವರಾಜ ಆಕಾಶ ಹನಮಪ್ಪ ಬನ್ನಿಕೊಪ್ಪ, ಎಂಬ ಶಾಲೆ ಬಿಟ್ಟ ಮಕ್ಕಳ ಮನೆಗೆ ಬೇಟಿನೀಡಿ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕಾರ್ಯ ಮಾಡಲಾಯಿತು. 
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸಿ ಸದಸ್ಯರಾದ ಅಕ್ಕಮ್ಮ, ಸೀತಮ್ಮ, ರಾಮಣ್ಣ ನಾಯಕ ಭಾಗವಹಿಸಿ ಪಾಲಕರಿಗೆ ೬ ವರ್ಷದೊಳಗಿನ ಮಕ್ಕಳನ್ನು ೧ ನೇ ತರಗತಿಗೆ ಧಾಖಲಿಸುವಂತೆ ತಿಳಿಸಿದರು. ದಾಖಲಾತಿ ಆಂದೋಲನದಲ್ಲಿ ಶಾಲಾ ಸಿಬ್ಬಂದಿಯವರಾದ ಸುವರ್ಣ, ಜ್ಯೋತಿ, ರತ್ನಾ, ಶ್ಯಾಮಲಾದೇವಿ, ಸರೋಜಾ, ವೆಂಕಟೇಶ ಚಿತ್ರಗಾರ, ಮೆಹಬೂಬ್ ಎಂ, ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.  

Advertisement

0 comments:

Post a Comment

 
Top