PLEASE LOGIN TO KANNADANET.COM FOR REGULAR NEWS-UPDATES

 : ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರಿಗೆ ಅಗತ್ಯವಿರುವ ವಿವಿಧ ರಸಗೊಬ್ಬರಗಳ ಗರಿಷ್ಟ ಮಾರಾಟ ದರವನ್ನು ನಿಗದಿಪಡಿಸಲಾಗಿದೆ ಎಂದು ಜಂಟಿಕೃಷಿ ನಿರ್ದೇಶಕ ಪದ್ಮಯ್ಯನಾಯಕ್ ಅವರು ತಿಳಿಸಿದ್ದಾರೆ.
  ಜಿಲ್ಲೆಯಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು, ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಬೇಕಾದ ಅತಿ ಮುಖ್ಯ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಅಗತ್ಯ ಸಸ್ಯ ಸಂರಕ್ಷಣಾ ಔಷದಿಗಳನ್ನು ಪೂರೈಸಲು ಸಕಲ ಸಿದ್ದತೆ ಮಾಡಲಾಗಿದೆ. ಅದರಲ್ಲೂ ಮುಖ್ಯವಾಗಿ ರೈತರಿಗೆ ಅಗತ್ಯವಾಗಿ ಬೇಕಾದ ರಸಗೊಬ್ಬರ ಪೂರೈಕೆಗೆ ವ್ಯಾಪಕ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಮೂಲಕ ಜಿಲ್ಲೆಗೆ ಬೇಕಾದ ರಸಗೊಬ್ಬರಗಳನ್ನು ದಾಸ್ತಾನು ಮಾಡಲಾಗಿದೆ. ಅಗತ್ಯವೆನಿಸಿದಾಗ ಕಾಪು ದಾಸ್ತಾನಿನಡಿ ರಸಗೊಬ್ಬರಗಳನ್ನು ಬಿಡುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ.  ವಿವಿಧ ರಸಗೊಬ್ಬರಗಳ ನಿಗದಿಪಡಿಸಿದ ಮಾರಾಟದ ಗರಿಷ್ಠ ದರ (೫೦ ಕೆ.ಜಿ. ಚೀಲಕ್ಕೆ) ವಿವರಗಳು ಇಂತಿದೆ.
ಯೂರಿಯಾ : ಎಲ್ಲಾ ಸಂಸ್ಥೆಗಳಿಗೂ ಅನ್ವಯಿಸುವಂತೆ ರೂ.೨೮೨.೭೪ ರಿಂದ ರೂ.೨೮೬.೦. ಎಂ.ಓ.ಪಿ. : ಐ.ಪಿ.ಎಲ್. ರೂ.೮೪೪, ಜುವಾರಿ ರೂ.೮೪೬.೫, ಸಿ.ಎಫ್.ಎಲ್. ರೂ.೮೪೪, ಎಂ.ಸಿ.ಎಫ್. ರೂ.೮೪೩, ಆರ್.ಸಿ.ಎಫ್ ರೂ.೮೪೪, ಫ್ಯಾಕ್ಟ್ ರೂ.೮೨೮.೨, ಡಿ.ಎ.ಪಿ. : ಸಿ.ಎಫ್.ಎಲ್. ರೂ.೧೧೮೭, ಜಿ.ಎಸ್.ಎಫ್.ಸಿ ರೂ. ೧೧೮೬.೮೪, ಐ.ಪಿ.ಎಲ್. ರೂ.೧೧೮೬.೮೮, ಇಫ್ಕೋ ರೂ.೧೧೮೬.೫, ಎಂ.ಸಿ.ಎಫ್. ರೂ.೧೧೯೨, ಜುವಾರಿ ರೂ.೧೧೮೯.೫, ಆರ್.ಸಿ.ಎಫ್. ರೂ.೧೧೮೬.೫, ಕ್ರಬ್ಕೋ ರೂ.೧೧೮೬.೫, ಅಗ್ರಿಗೋಲ್ಡ್ ರೂ.೧೨೧೦.೨೮, ಸ್ಪೈಸ ರೂ.೧೧೯೯, ಡಿ.ಎ.ಪಿ. ಲೈಟ್ : ಸಿ.ಎಫ್.ಎಲ್. ರೂ.೯೪೫, ೨೦:೨೦:೦:೧೩ : ಸಿ.ಎಫ್.ಎಲ್. ರೂ. ೯೪೭, ಫ್ಯಾಕ್ಟ್ ರೂ.೯೩೬.೩೫, ಜಿ.ಎಸ್.ಎಫ್.ಸಿ. ರೂ.೭೫೪.೧, ಇಫ್ಕೋ ೯೪೯.೫, ಎಂ.ಸಿ.ಎಫ್. ರೂ.೯೩೫, ಜುವಾರಿ ರೂ.೮೮೪, ಅಗ್ರಿಗೋಲ್ಡ್ ರೂ.೯೯೯.೯೩, ಸ್ಪೈಸ ರೂ. ೯೫೯, ೧೦:೨೬:೨೬ : ಸಿ.ಎಫ್.ಎಲ್. ರೂ.೧೦೮೮, ಇಫ್ಕೋ ರೂ.೧೧೦೨, ಜುವಾರಿ ರೂ.೧೧೦೬, ಎಂ.ಸಿ.ಎಫ್. ರೂ. ೧೧೦೨, ೧೨:೩೨:೧೬ : ಇಫ್ಕೋ ೧೧೦೭.೫, ಸಿ.ಎಫ್.ಎಲ್. ರೂ.೧೧೧೮, ಜುವಾರಿ ರೂ.೧೧೦೫, ೨೦:೨೦:೦:೧೩:೦.೩ : ಫ್ಯಾಕ್ಟ್ ರೂ.೯೬೩, ಅಮೋನಿಯಂ ಸಲ್ಫೇಟ್ : ಫ್ಯಾಕ್ಟ್ ರೂ.೫೫೫.೩, ಜಿ.ಎಸ್.ಎಫ್.ಸಿ. ರೂ.೪೫೨.೯೯, ೧೫:೧೫:೧೫ : ಆರ್.ಸಿ.ಎಫ್. ರೂ.೭೮೦.೫, ೧೫:೧೫:೧೫:೦.೦೨ : ಆರ್.ಸಿ.ಎಫ್. ರೂ.೮೦೭, ೨೦:೨೦:೦ : ಜಿ.ಎನ್.ವಿ.ಎಫ್.ಸಿ. ರೂ.೭೬೨.೭೩, ಆರ್.ಸಿ.ಎಫ್. ೮೧೩, ೧೪:೩೫:೧೪ : ಸಿ.ಎಫ್.ಎಲ್. ರೂ.೧೧೫೬, ೧೬:೨೦:೦:೧೩ : ಸಿ.ಎಫ್.ಎಲ್. ರೂ.೯೧೧, ಐ.ಪಿ.ಎಲ್. ರೂ.೯೬೦, ೨೮:೨೮:೦ : ಸಿ.ಎಫ್.ಎಲ್. ರೂ.೧೧೮೨, ೧೪:೨೮:೧೪ : ಸಿ.ಎಫ್.ಎಲ್. ರೂ.೧೧೨೮, ೧೯:೧೯:೧೯ : ಜುವಾರಿ ರೂ.೧೧೧೦, ಎಸ್.ಎಸ್.ಪಿ. : ಸಿ.ಎಫ್.ಎಲ್. ರೂ.೩೮೨, ಟಿ.ಎಫ್.ಸಿ.ಎಲ್. ರೂ.೩೮೧.೨೫, ಕೊತ್ತಾರಿ ರೂ.೩೯೭.೨೫, ಎಸ್.ಎಸ್.ಪಿ. : ಟಿ.ಎಫ್.ಸಿ.ಎಲ್. ರೂ.೪೧೧.೨೫, ೨೪:೨೪:೦ ಸಿ.ಎಫ್.ಎಲ್. ರೂ.೯೩೫ ಹಾಗೂ ೧೭:೧೭:೧೭ : ಎಂ.ಎಫ್.ಎಲ್. ರೂ.೯೮೦ ಗಳ ಗರಿಷ್ಠ ಬೆಲೆಯನ್ನು ನಿಗದಿಪಡಿಸಲಾಗಿದೆ. 
ರಸಗೊಬ್ಬರ ತಯಾರಕರು ಇಲಾಖೆಗೆ ನೀಡಿರುವಂತೆ ಏ.೦೧ ರಿಂದ ಜಾರಿ ಇರುವ ಪರಿಷ್ಕೃತ ದರವನ್ನು ಜಿಲ್ಲಾ ವ್ಯಾಪ್ತಿಯಲ್ಲಿರುವ ಖಾಸಗಿ ಮತ್ತು ಸಹಕಾರ ಸಂಘದ ಸಗಟು/ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಪರಿಷೃತ ದರದಲ್ಲಿಯೇ ರೈತರಿಗೆ ಮಾರಾಟ ಮಾಡುವಂತೆ ಹಾಗೂ ಯಾವುದೇ ಮಾರಾಟಗಾರರು ಪರಿಷ್ಕೃತ ದರದಲ್ಲಿ ಮಾರಾಟ ಮಾಡಲು ನಿರಾಕರಿಸಿದರೆ ರಸಗೊಬ್ಬರ ನಿಯಂತ್ರಣ ಆದೇಶ ೧೯೮೫ ರನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಜಂಟಿ ಕೃಷಿ ನಿರ್ದೇಶಕರು  ತಿಳಿಸಿದ್ದಾರೆ. 

Advertisement

0 comments:

Post a Comment

 
Top