PLEASE LOGIN TO KANNADANET.COM FOR REGULAR NEWS-UPDATES




 ದಿ: ೨೫ ಮತ್ತು ೨೬ ಎರಡು ದಿನಗಳ ಅಖಿಲ ಭಾರತ ವಿದ್ಯಾರ್ಥಿ ಸಂಘದ ಸದಸ್ಯರ ಉತ್ತರಾಖಂಡ ನೆರೆ ಸಂತ್ರಸ್ಥರ ನೆರವಿಗೆ ನಡೆದ ದೇಣಿಗೆ ಸಂಗ್ರಹ ಚಳುವಳಿಗೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ದಿನಾಂಕ:೨೫ ರಂದು ನಡೆದ ದೇಣಿಗೆ ಸಂಗ್ರಹಣೆ ರೂ.೬೦೩೦/- ಮತ್ತು ದಿ: ೨೬ರ ಸಂಗ್ರಹಣೆ ೮೨೪೦/- ರೂಪಾಯಿಗಳಾಗಿದ್ದು ಸಾಮಾಜಿಕ ಕಳಕಳಿಯಿರುವ ವಿದ್ಯಾರ್ಥಿಗಳಿಗೆ ಸಾರ್ವಜನಿಕರು ನೈತಿಕ ಬೆಂಬಲವನ್ನು ನೀಡಿದ್ದಾರೆ ಎಂದು ಕ್ರಾಂತಿಕಾರಿ ಯುವಜನ ಸಂಘದ ಜಿಲ್ಲಾ ಸಂಚಾಲಕ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಕಳೆದ ಎರಡು ದಿನಗಳಿಂದ ಅಖಿಲ ಭಾರತ ವಿದ್ಯಾರ್ಥಿ ಸಂಘದ ಗಂಗಾವತಿ ಎಂ.ಎನ್.ಎಂ. ಬಾಲಕಿಯರ ಸ.ಪ.ಪೂ. ಕಾಲೇಜ್, ಬಾಲಕರ ಸ.ಪ.ಪೂ. ಕಾಲೇಜ್, ಶ್ರೀ ಕೊಟ್ಟುರೇಶ್ವರ ಸಂಯುಕ್ತ ಪ.ಪೂ.ಕಾಲೇಜ್, ಹೆಚ್.ಆರ್. ಸರೋಜಮ್ಮ ಪ.ಪೂ.ಕಾಲೇಜ್, ಕಲ್ಮಠ ಶಿಕ್ಷಕರ ತರಬೇತಿ ಕೇಂದ್ರ ಮತ್ತು ಐಟಿಐ ಕಾಲೇಜ್‌ಗಳ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಣೆ ಮಾಡಲಾಯಿತು. 
ಬಸ್ ನಿಲ್ದಾಣದಿಂದ ಗಾಂಧೀ ವೃತ್ತದ ಮೂಲಕ ದುರ್ಗಮ್ಮ ಗುಡಿಯಿಂದ ಮರಳಿ ಬಸ್ಟ್ಯಾಂಡ್‌ವರೆಗೆ ಸಾರ್ವಜನಿಕ ರಿಂದ ದೇಣಿಗೆ ಸಂಗ್ರಹಿಸಲಾಯಿತು. ಸಂಗ್ರಹಣೆಯಾದ ಒಟ್ಟು ಮೊತ್ತ ೧೪,೨೭೦/- ರೂ. ಆಗಿದ್ದು, ಇನ್ನೆರಡು ದಿನಗಳ ಕಾಲ ದೇಣಿಗೆ ಸಂಗ್ರಹಣೆ ನಡೆಯಲಿದ್ದು ಒಟ್ಟು ೨೫ ಸಾವಿರ ರೂಗಳ ಗುರಿ ತಲುಪಿದ ನಂತರ ರಾಜ್ಯ ಸಂಘಟನೆಯ ಮೂಲಕ ಉತ್ತರಾಖಂಡದ ನೆರೆ ಸಂತ್ರಸ್ಥರ ನೆರವಿನಲ್ಲಿರುವ ಐಸಾ, ಆರ್‌ವೈಎ ಹಾಗೂ ಪ್ರಗತಿಪರ ಮಹಿಳಾ ಸಂಘಟನೆಗಳಿಗೆ ತಲುಪಿ ಸಲಾಗುವುದು.
ನೆರೆ ಸಂತ್ರಸ್ಥರ ದೇಣಿಗೆ ಸಂಗ್ರಹಣಾ ಚಳುವಳಿಯಲ್ಲಿ ಐಸಾದ ತಾಲೂಕ ಸಮಿತಿ ಅಧ್ಯಕ್ಷ ಹೆಚ್.ಪರಮೇಶ್ವರ, ಉಪಾಧ್ಯಕ್ಷ ಪಂಪಾಪತಿ, ಕಾರ್ಯದರ್ಶಿ ಚಂದ್ರಶೇಖರ, ಖಜಾಂಚಿ ಮಲ್ಲಯ್ಯ, ಪದಾಧಿಕಾರಿಗಳಾದ ಸೈದಪ್ಪ, ರುದ್ರೇಶ, ಶಿವಮೂರ್ತಿ, ಭೀಮೇಶ, ಗಣೇಶ, ರಾಜಾಸಾಬ್, ನಾಗರಾಜ್, ವೀರೇಶ, ವಿದ್ಯಾಧರ, ದಾವೂದ್, ರಾಜು, ವೀರೇಶ ಮತ್ತು ಅರ್‌ವೈಎ ನ ಕೆಂಚನಗೌಡ ಹಾಗೂ ರಾಘವೇಂದ್ರ ಪಾಲ್ಗೊಂಡಿದ್ದರು.  

Advertisement

0 comments:

Post a Comment

 
Top