PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜೂ. ೨೪ : ಭಾವನೆಗಳನ್ನು ಗೌರವಿಸದಿರುವ ಸಮಾಜದಲ್ಲಿ ಬದುಕುವ ಹಿಜ್ಡಾಗಳು ಭಿಕ್ಷೆ ಬೇಡುವುದನ್ನು, ಮದುವೆ ಮಾಡಿಕೊಳ್ಳುವುದನ್ನು ತಪ್ಪು ಎಂದು ಈ ಸಮಾಜ ಪರಿಗಣಿಸುತ್ತಿರುವ ಈ ಸಂದರ್ಭದಲ್ಲಿ ಹಿಜ್ಡಾಗಳ ಬದುಕು ಪ್ರತಿ ಕ್ಷಣದ ಸಮರವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಸೌಭಾಗ್ಯ ಹೇಳಿದರು.
ಅವರು ಇಲ್ಲಿಗೆ ಸಮೀಪದ ಭಾಗ್ಯನಗರದ ಸರಕಾರಿ ಪ.ಪೂ. ಕಾಜೇಜು ಆವರಣದಲ್ಲಿ 'ರಂಗಯಾನ' ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಹೆಗ್ಗೋಡಿನ ಜನಮನದಾಟ ಕಲಾವಿದರು ಅಭಿನಯಿಸಿದ 'ಬದುಕು ಬಯಲು' ನಾಟಕವನ್ನು ಉದ್ಘಾಟಿಸಿ ಮಾತನಾಡಿ, 

ಇಂಥವರಿಗೆ ಪ್ರೀತಿ ತೋರಿಸುವವರು, ಗೌರವ ಕೊಡುವವರು ಯಾರು. ಬೀದಿ ಬೀದಿ ಸುತ್ತಿಕೊಂಡು ಭಿಕ್ಷೆ ಎತ್ತಿಕೊಂಡು ಸೆಕ್ಷ್ ವರ್ಕ ಮಾಡಿಕೊಂಡಿರಬೇಕೆ ಎಂದು ಅವರು ಪ್ರಶ್ನಿಸಿದರು. ಸರಕಾರ ಇವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.
ಟಣಕಕಲ್ ಶ್ರೀ ಶರಣಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿರು. ಹಿರಿಯ ನ್ಯಾಯವಾದಿ ರಾಘವೇಂದ್ರ ಪಾನಘಂಟಿ ಮಾತನಾಡಿ, ಹಿಜ್ಡಾಗಳ ಬದುಕು ಅಸ್ಪೃಶ್ಯರಿಗಿಂತ ಕಡೆಯಾಗಿದ್ದು, ಗಂಡು ಅಥವಾ ಹೆಣ್ಣಾಗಿ ಹುಟ್ಟಿದ ಯಾರಿಗೇ ಆಗಲಿ ಸಮಾಜದಲ್ಲಿ ಒಂದು ಅಸ್ಥಿತ್ವ ಇರುತ್ತದೆ. ಆದರೆ ಗಂಡಾಗಿ ಹುಟ್ಟಿ ಹೆಣ್ಣುಗಳ ಬಯಕೆಗಳನ್ನು ಹೊತ್ತು ಪರಿವರ್ತನೆಯಾದ ಹಿಜ್ಡಾಗಳ ಬದುಕು ಯಾತನಾಮಯವಾದದ್ದು. ಸಮಾಜ ಅವರನ್ನು ಕಡೆಗಣಿಸಿದ್ದರಿಂದಾಗಿ





ಅವರು ಒರಟರಂತೆ ಕಾಣುತ್ತಾರೆ. ಇಂಥವರನ್ನು ಸರಕಾರ ಗುರುತಿಸಬೇಕಿದೆ ಎಂದರು. ಹೊಂಗಿರಣ ಸಮಾಜಸೇವಾ ಸಂಸ್ಥೆಯ ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆಯ ಅಧ್ಯಕ್ಷ ತ್ರಿಮೂರ್ತಿ ಯಡ್ಡೋಣಿ ಹಿಜ್ಡಾಗಳ ಬದುಕಿನ ಒಳ ನೋಟವನ್ನು ತೆರೆದಿಟ್ಟರು.
ಸ.ಪ.ಪೂ. ಕಾಲೇಜು ಅರ್ಥಶಾಸ್ತ್ರ ಉಪನ್ಯಾಸಕ ರಾಜಶೇಖರಗೌಡ ಅವರು ಅಧ್ಯಕ್ಷತೆವಹಿಸಿದ್ದರು. ತಾ.ಪಂ. ಸದಸ್ಯ ಶ್ರೀನಿವಾಸ ಹ್ಯಾಟಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಮನಪ್ಪ ಕಬ್ಬೇರ, ಯುವ ಮುಖಂಡ ಪರಶುರಾಮ ನಾಯಕ, ಹೆಗ್ಗೋಡಿನ ಜನಮನದಾಟ ತಂಡದ ವ್ಯವಸ್ಥಾಪಕ ಜಯರಾಮ್ ಕೆ.ಎನ್. ವೇದಿಕೆಯಲ್ಲಿದ್ದರು. ಜಾನಪದ ಕಲಾವಿದ ಹಾಗೂ ಪತ್ರಕರ್ತ ವೈ. ಬಿ. ಜೂಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಉದಯಸಿಂಗ್ ಕಾರ್ಯಕ್ರಮ ನಿರ್ವಹಿಸಿದರು.

Advertisement

0 comments:

Post a Comment

 
Top