ಮಣಿಪಾಲ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಪ್ರತಿಭಟನೆ.
ಜೂನ್ ೨೦ನೇ ತಾರೀಖು ಉಡುಪಿ ಜಿಲ್ಲೆಯ ಮಣಿಪಾಲ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ಖಂಡಿಸಿ, ಅತ್ಯಾಚಾರಿಗಳನ್ನು ಬಂಧಿಸಬೇಕೆಂದು ರಾಜ್ಯವ್ಯಾಪಿ ಪ್ರತಿಭಟನೆಗಳನ್ನು ನಡೆಸಿತ್ತು. ಅತ್ಯಾಚಾರಿಗಳ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಇಲಾಖೆಗೆ ಎಸ್.ಎಫ್.ಐ ಅಭಿನಂದನೆಗಳನ್ನು ಸಲ್ಲಿಸಿದೆ
ನೈತಿಕ ಪೊಲೀಸ್‌ಗಿರಿ, ಹೋಂಸ್ಟೇ ದಾಳಿ, ಕೋಮು ಸಂಘರ್ಷಗಳು ಮರೆಯುವಷ್ಟರಲ್ಲಿ ಮತ್ತೆ ಸಂಘಪರಿವಾರದ ಭಜರಂಗದಳದ ಮುಖಂಡ ಯೋಗಿಶ್, ಹರೀಶ್ ಮತ್ತು ಆನಂದ್ ಎಂಬುವರು ಮಣಿಪಾಲ ವಿದ್ಯಾರ್ಥಿನೀಯರ ಮೇಲೆ ಅತ್ಯಾಚಾರವೆಸಗಿದ ಕಾರಣಕ್ಕಾಗಿ ಬಂಧಿತರಾಗಿದ್ದಾರೆ. ಇದು ಕರಾವಳಿಯಲ್ಲಿ ಸಂಘಪರಿವಾರದವರ ಕರಾಳ ಮುಖವಾಡವನ್ನು ಮತ್ತೆ ಬಹಿರಂಗಪಡಿಸಿದೆ.
ಅತ್ಯಾಚಾರ, ಅಪರಾಧಗಳಲ್ಲಿ ಭಾಗಿಯಾಗಿರುವ ಸಂಘಪರಿವಾರದ ಸಂಘಟನೆಗಳು, ಇನ್ನೊಂದೆಡೆ ಅವರುಗಳೇ ಪ್ರತಿಭಟಿಸುತ್ತಿರುವುದು ಅವರ ದ್ವಿಮುಖವನ್ನು ತೋರಿಸುತ್ತದೆ. ನಿರಂತರವಾಗಿ ಅತ್ಯಾಚಾರ, ದೌರ್ಜನ್ಯ, ಅಶ್ಲೀಲಚಿತ್ರ ವೀಕ್ಷಣೆ, ಗೂಂಡಾಗಿರಿಯಲ್ಲಿಯೇ ಮುಳುಗುತ್ತಿರುವ ಸಂಘಪರಿವಾರದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎ.ಬಿ.ವಿ.ಪಿ), ಹಿಂದೂ ಜಾಗರಣಾ ವೇದಿಕೆ, ರಾಷ್ಟ್ರೀಯ ಸ್ವಯಂ ಸೇವಾ(ಆರ್.ಎಸ್.ಎಸ್), ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸಂಘಟನೆಗಳಿಗೆ ಪ್ರತಿಭಟಿಸುವ ನೈತಿಕತೆಯನ್ನು ಕಳೆದುಕೊಂಡಿವೆ. ಹೀಗಾಗಿ ಭಜರಂಗದಳವನ್ನು ನಿಷೇಧಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ತಕ್ಷಣ ರಾಜ್ಯ ಸರ್ಕಾರ ಈ ಅತ್ಯಾಚಾರ ಪ್ರಕರಣವನ್ನು ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಿ ಅತ್ಯಾಚಾರಿಗೆ ಶಿಕ್ಷೆ ವಿಧಿಸಲು ಮುಂದಾಗಬೇಕಿದೆ.
ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರದ ಪ್ರಕರಣಕ್ಕೆ ಮಣಿಪಾಲ ಸಂಸ್ಥೆಯ ಬೇಜವಾಬ್ದಾರಿತನವೂ ಕೂಡ ಕಾರಣವಾಗಿದೆ. ಹೊರ ರಾಜ್ಯ, ದೇಶದಿಂದ ವಿದ್ಯಾರ್ಥಿಗಳನ್ನು ಸೆಳೆಯಲು ಮತ್ತು ಹಣ ಸುಲಿಗೆ ಮಾಡಲು ಸಂಸ್ಥೆ ನೀಡುವ ಗಮನ ಆ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವಲ್ಲಿ ಸಾಧ್ಯವಾಗುತ್ತಿಲ್ಲ. ಬೆದರಿಕೆ, ಕಿರುಕುಳ, ದೌರ್ಜನ್ಯ, ಅಕ್ರಮ ಹಣ ವಸೂಲಿ, ಕಾನೂನು ಬಾಹಿರ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ನಲುಗುತ್ತಿದ್ದಾರೆ. ಸಂಸ್ಥೆಯಲ್ಲಿ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ, ಕೊಲೆ ನಡೆದಿರುವ ಸಾಧ್ಯತೆಗಳು ಇವೆ. ಈ ಪ್ರಕರಣಗಳು ಯಾವುದೇ ಮಾಧ್ಯಮ, ಪೊಲೀಸ್ ಇಲಾಖೆ ಮತ್ತು ಇತರ ಹೊರಜಗತ್ತಿಗೆ ಗೊತ್ತಾಗುತ್ತಿಲ್ಲ ಎಂಬುದು ಆ ಪ್ರದೇಶದಲ್ಲಿ ಜನಜನಿತ ಚರ್ಚೆಗಳು ನಡೆಯುತ್ತಿವೆ. ಮಣಿಪಾಲ ಸಂಸ್ಥೆಯ ಆಡಳಿತ ಕಾರ್ಯಗಳನ್ನು ತಪಾಸಣೆ, ನಿಯಂತ್ರಣಾ ಕೆಲಸವನ್ನು ಸರ್ಕಾರ ನಡೆಸಬೇಕಿದೆ. ಅಭ್ಯಾಸ ನಿರತ ವಿದ್ಯಾರ್ಥಿಗಳು ರಾತ್ರಿ ಸುಗಮವಾಗಿ ಮನೆ ಅಥವಾ ಹಾಸ್ಟೆಲ್‌ಗಳನ್ನು ತಲುಪಲು ಅಗತ್ಯವಾಗಿರುವ ವಾಹನ, ಆಟೋಗಳಿಗೆ ದಾಖಲಾತಿ ಇನ್ನಿತರ ಕ್ರಮ ಕೈಗೊಳ್ಳದೆ ಇರುವ ಕಾರಣ ಈ ಅತ್ಯಾಚಾರ ನಡೆದಿದೆ.
ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಸಂಸ್ಥೆಗೆ ಕಪ್ಪು ಚುಕ್ಕೆ ಎಂಬುದನ್ನು ಪ್ರಚಾರ ಪಡಿಸುತ್ತಾ ವಿದ್ಯಾರ್ಥಿನಿ, ಪೋಷಕರು, ಮಾಧ್ಯಮ, ಪೊಲೀಸ್, ಜನಸಂಘಟನೆಗಳ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳದಂತೆ ಬೆದರಿಕೆ ಒಡ್ಡಲಾಗಿದೆ. ರಾಜ್ಯ ಗೃಹಸಚಿವರು, ಕೇರಳದ ಸಂಸದರು ಇನ್ನಿತರರಿಗೆ ವಿದ್ಯಾರ್ಥಿನಿ ಅಥವಾ ಪೋಷಕರ ಭೇಟಿಗೆ ಅವಕಾಶ ನೀಡದೆ ಶಿಕ್ಷಣ ಸಂಸ್ಥೆ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದನ್ನು ನೋಡಿದಾಗ ಈ ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿರುವಂತಿದೆ. ಈ ಪ್ರಕರಣದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು ಎಂಬ ಕಾರಣಕ್ಕಾಗಿ ಪ್ರತ್ಯಕ್ಷದರ್ಶಿ, ಸೆಕ್ಯೂರಿಟಿ (ಭದ್ರತಾ ಸಿಬ್ಬಂಧಿ) ಕೆಲಸದಲ್ಲಿ ನಿರತರಾಗಿದ್ದ ಇಬ್ಬರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಲಾಗಿದೆ. ಇದು ಸಾಕ್ಷಿಗಳನ್ನು ನಾಶಗೊಳಿಸುವಂತಹ ಪ್ರಯತ್ನವಾಗಿದೆ.
ಈಗಾಗಲೇ ವೈದ್ಯಕೀಯ ವರದಿಯಲ್ಲೂ ಸಾಮೂಹಿಕ ಅತ್ಯಾಚಾರ ನಡೆದಿರುವುದು ಖಚಿತವಾಗಿರುವುದರಿಂದ ವಿದ್ಯಾರ್ಥಿನಿಯ, ಪೋಷಕರ ಹೇಳಿಕೆಗಳನ್ನು ನಿರೀಕ್ಷಿಸುವುದರ ಬದಲಾಗಿ ವೈದ್ಯಕೀಯ ಸಾಕ್ಷ್ಯದ ಆಧಾರದಲ್ಲಿಯೇ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ರೀತಿಯಲ್ಲಿ ಪೊಲೀಸ್ ಇಲಾಖೆ ಮುಂದಾಗಬೇಕೆಂದು ಎಸ್.ಎಫ್.ಐ ಒತ್ತಾಯಿಸುತ್ತದೆ. ತಕ್ಷಣ ರಾಜ್ಯಸರ್ಕಾರ ತ್ವರಿತ ನ್ಯಾಯಾಲಯದ ಪ್ರಕ್ರಿಯೆಯ ಮೂಲಕ ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸಬೇಕು. ಅತ್ಯಾಚಾರ, ದೌರ್ಜನ್ಯ, ಸಮಾಜ ಘಾತಕ ಶಕ್ತಿಗಳಿಗೆ ಆಶ್ರಯವಾಗುತ್ತಿರುವ ಭಜರಂಗದಳವನ್ನು ನಿಷೇಧೀಸಬೇಕು. ವಿದ್ಯಾರ್ಥಿಗಳ ಹಿತರಕ್ಷಣೆ ಮರೆತು ಕೇವಲ ಹಣ ಮಾಡುವ ದಂಧೆಯಲ್ಲಿ ಮುಳುಗಿರುವ ಮಣಿಪಾಲ ಶಿಕ್ಷಣ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಎಸ್.ಎಫ್.ಐ ಒತ್ತಾಯಿಸುತ್ತದೆ.
ಕಳೆದ ೫ವರ್ಷಗಳಲ್ಲಿ ನಡೆದ ಅತ್ಯಾಚಾರ, ದೌರ್ಜನ್ಯ, ಕೋಮುವಾದ, ಭ್ರಷ್ಠಚಾರ ಇನ್ನಿತರ ಕಾರಣಗಳಿಗಾಗಿ ಕರ್ನಾಟಕದ ಜನತೆ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಇದನ್ನು ಅರಿತು ಇಂದಿನ ಸರ್ಕಾರ ಇಂತಹ ಪ್ರಕರಣಗಳು ಮತ್ತೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಮತ್ತು ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯದ ಎಲ್ಲಾ ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯನ್ನು ರಚಿಸಬೇಕೆಂದು ರಾಜ್ಯ ಸರ್ಕಾರವನ್ನು ಎಸ್.ಎಫ್.ಐ ಒತ್ತಾಯಿಸುತ್ತದೆ.
ಅಜಯ, ಶಿವಕುಮಾರ, ಬಸವರಾಜ, ಸುಮಾ, ಅಶ್ವಿನಿ, ಪಲ್ಲವಿ, ಸುಪ್ರೀಯಾ, ರೇಖಾ, ಅನು, ವಿರೇಶ, ಶ್ರೀನಿವಾಸ, ಪ್ರತಿಭಟನೆಯಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಿ.ಎನ್.ಆರ್.ಕೆ ಪಿಯು ಕಾಲೇಜಿಂದ ಮೆರವಣಿಗೆ ಮೂಲಕ ಭೀವರಾಯ್ ವೃತ್ತದಲ್ಲಿ ಭಜರಂಗದಳದ ಪ್ರತಿಕೃತಿ ಧಹನ ಮಾಡಿ ತಹಶಿಲ್ದಾರ ಮುಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
(ಅಮರೇಶ ಕಡಗದ) (ಬಾಳಪ್ಪ ಹುಲಿಹೈದರ್) (ಸುಬಾನ್ ಸೈಯದ್) (ಪರಶುರಾಮ ರಾಠೋಡ ) s
ಜಿಲ್ಲಾಧ್ಯಕ್ಷರು ಜಿಲ್ಲಾ ಕಾರ್ಯದರ್ಶಿ ತಾಲೂಕ ಕಾಂiiದರ್ಶಿ ಜಿಲ್ಲಾ ಮುಖಂಡ
0 comments:
Post a Comment