PLEASE LOGIN TO KANNADANET.COM FOR REGULAR NEWS-UPDATES

  ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಮಂಗಳವಾರ ನಡೆದ ಕನ್ನಡ ವಿಷಯದ ಪರೀಕ್ಷೆಗೆ ಜಿಲ್ಲೆಯ ೧೮೬೬ ವಿದ್ಯಾರ್ಥಿಗಳು ಹಾಜರಾಗಿದ್ದು, ೧೩೭ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
  ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಕನ್ನಡ ವಿಷಯಕ್ಕೆ ಬಾಲಕರು- ೧೩೪೯, ಬಾಲಕಿಯರು- ೬೫೪ ಸೇರಿದಂತೆ ಒಟ್ಟು ೨೦೦೩ ವಿದ್ಯಾರ್ಥಿಗಳು ದಾಖಲಾಗಿದ್ದರು. ಇದರಲ್ಲಿ ಬಾಲಕರು- ೧೨೭೪, ಬಾಲಕಿಯರು- ೫೯೨ ಸೇರಿದಂತೆ ಒಟ್ಟು ೧೮೬೬ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು, ೭೫-ಬಾಲಕರು, ೬೨- ಬಾಲಕಿಯರು ಗೈರು ಹಾಜರಾಗಿದ್ದಾರೆ. 
ಕೊಪ್ಪಳ ತಾಲೂಕಿನಲ್ಲಿ ೯೨೦ ವಿದ್ಯಾರ್ಥಿಗಳ ಪೈಕಿ ೮೬೮ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೬೧೪ ವಿದ್ಯಾರ್ಥಿಗಳ ಪೈಕಿ ೫೬೫, ಕುಷ್ಟಗಿ ತಾಲೂಕಿನಲ್ಲಿ ೨೩೪ ವಿದ್ಯಾರ್ಥಿಗಳ ಪೈಕಿ ೨೦೯, ಯಲಬುರ್ಗಾ ತಾಲೂಕಿನಲ್ಲಿ ೨೩೫ ವಿದ್ಯಾರ್ಥಿಗಳ ಪೈಕಿ ೨೨೪ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ೫೨, ಗಂಗಾವತಿ- ೪೯, ಕುಷ್ಟಗಿ-೨೫ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೧೧ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Advertisement

0 comments:

Post a Comment

 
Top