ಗಂಗಾವತಿ೨೪: ದೇಶದ ಉತ್ತರಾಖಂಡದಲ್ಲಿ ಜರುಗಿದ ಭಾರೀ ಪ್ರಾಕೃತಿಕ ವಿಕೋಪದಲ್ಲಿ ಬೀದಿಪಾಲಾದ ಲಕ್ಷಾಂತರ ಜನರ ಬದುಕಿನ ದುರಂತಕ್ಕೆ ಗಂಗಾವತಿ ತಾಲ್ಲೂಕಿನ ಅಖಿಲ ಭಾರತ ವಿದ್ಯಾರ್ಥಿ ಸಂಘದಿಂದ ಒಂದು ವಾರ ಕಾಲ ನೆರೆ ಸಂತ್ರಸ್ಥರ ದೇಣಿಗೆ ಸಂಗ್ರಹ ಇಂದು ಬಸ್‌ನಿಲ್ದಾಣದಿಂದ ಚಾಲನೆ ನೀಡಲಾಯಿತು.
ಈಗಾಗಲೇ ಉತ್ತರಾಖಂಡದ ಪ್ರಾಕೃತಿಕ ವಿಕೋಪದ ಸ್ಥಳದಲ್ಲಿ ಐಸಾ, ಆರ್‌ವೈಎ, ಐ
ಪಾ ಸಂಘಟನೆಗಳ ರಾಷ್ಟ್ರೀಯ ನಾಯಕರು, ಬೀದಿಪಾಲಾದ ಜನರ ಸೇವೆ ಮಾಡಲು ಮತ್ತು ಸಾಂತ್ವನ ನೀಡಲು ಉತ್ತರಾಖಂಡದಲ್ಲಿದ್ದಾರೆ. ಅಲ್ಲಿಯ ವಾಸ್ತವ ವರದಿಗಳನ್ನು ರಾಷ್ಟ್ರ ಮಟ್ಟದ ಸಂಘಟನೆಗಳಿಗೆ ತಿಳಿಸುವುದರ ಜೊತೆಗೆ ನೆರೆ ಸಂತ್ರಸ್ಥರಿಗೆ ದೇಣಿಗೆ ಸಂಗ್ರಹದ ಮೂಲಕ ಕಳುಹಿಸಲು ಆದೇಶ ನೀಡಿದ್ದು, ಅದರಂತೆ ಸ್ಥಳೀಯ ಘಟಕ ಇಂದು ನಗರದ ಬಸ್ಟ್ಯಾಂಡ್‌ನಲ್ಲಿ ಪ್ರಯಾಣಿಕರಿಂದ ಮತ್ತು ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡಲಾಯಿತು. ಈ ಸಂದರ್ಭದಲ್ಲಿ ಎಐಸಿಸಿಟಿಯುನ ಭಾರದ್ವಾಜ್, ಸಾಹಿತಿ ಅಲ್ಲಾಗಿರಿರಾಜ್, ಎಐಸಿಸಿಟಿಯು ಜಿಲ್ಲಾ ಸಂಚಾಲಕ ಬಸನಗೌಡ, ಕೆಜಿಎಲ್‌ಯುನ ವಿರುಪಾಕ್ಷಪ್ಪ, ಆರ್‌ವೈಎ ಟಿ. ರಾಘವೇಂದ್ರ, ಐಸಾ ಸಂಘಟನೆಯ ಪದಾಧಿಕಾರಿಗಳಾದ ಪರಮೇಶ್ವರ, ಮಲ್ಲಯ್ಯ, ಸೈದಪ್ಪ, ಶಿವಮೂರ್ತಿ, ಚಂದ್ರು, ರುದ್ರೇಶ, ಬಸವರಾಜ್ ಮತ್ತಿತರರು ದೇಣಿಗೆ ಸಂಗ್ರಹದಲ್ಲಿ ಹಾಜರಿದ್ದರು.
0 comments:
Post a Comment