PLEASE LOGIN TO KANNADANET.COM FOR REGULAR NEWS-UPDATES

ಭ್ರಷ್ಟಾಚಾರ ಮುಕ್ತ ಆಡಳಿತ: ಭಾರಧ್ವಜ್‌

ಬೆಂಗಳೂರು, ಜೂ. 3: ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಎಚ್‌.ಆರ್‌.ಭಾರಧ್ವಜ್‌ ಹೊಸದಾಗಿ ಆಯ್ಕೆಯಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಬಳಿಕ, ಕರ್ನಾಟಕದಲ್ಲಿ ಜನತೆ ಬದಲಾವಣೆ ಬಯಸಿದ್ದರು. ಅಂತೆಯೇ ಸ್ಥಿರ ಸರಕಾರಕ್ಕೆ ಮತ ನೀಡಿದ್ದಾರೆ ಅಂದ ಅವರು, ಐದು ವರ್ಷಗಳಲ್ಲಿ ಸರಕಾರ ಮಾಡಬೇಕಾದ ಜನಪರ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದರು. ಹಾಗೂ  ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಜನಪರ ಆಡಳಿತ ನೀಡುವಂತೆ ಕರೆ ನೀಡಿದರು.
ರಾಜ್ಯ ಪಾಲರ ಭಾಷಣದ ಪ್ರಮುಖ ಅಂಶಗಳು:
*ಸಂವಿಧಾನದ ಕಾನೂನು ಚೌಕಟ್ಟಿನಲ್ಲಿ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ಹಾಗೂ ದುರ್ಬಲರಿಗೆ ರಕ್ಷಣೆ. ಹಾಗೂ ಮೂಲ ಸೌಕರ್ಯಗಳನ್ನು ನೀಡಿ ಅಭಿವೃದ್ಧಿಗೆ ಆದ್ಯತೆ.
*ರೈತರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿ, ಕೃಷಿ ಕ್ಷೇತ್ರ, ಹೂಡಿಕೆ ವಲಯಕ್ಕೆ ಮನ್ನಣೆ.
*ಇನ್ನೆರಡು ವರ್ಷಗಳಲ್ಲಿ ಬ್ಯಾಕ್‌ ಲಾಗ್‌ ಹುದ್ದೆಗಳಿಗೆ ನೇರ ನೇಮಕ.
*ವಿದ್ಯಾರ್ಥಿ ವೇತನ ಪಾವತಿಗೆ ಏಕ ರೂಪದ ನೀತಿ ಜಾರಿ. ಅಲ್ಲದೆ  ವೃದ್ಧಾಪ್ಯ ವೇತನ ಪಿಂಚಣಿ ಸೇರಿದಂತೆ ಸಮರ್ಪಕ ವಿತರಣೆಗೆ ಹಾಗೂ ವಿದ್ಯಾರ್ಥಿಗಳ ಖಾತೆಗೆ ನೇರ ಜಮಾಣೆಗೆ ಕ್ರಮ.
*ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳ ಮೇಲಿನದೌರ್ಜನ್ಯ ತಡೆಗೆ ಕ್ರಮ .
*ರಾಜ್ಯದಲ್ಲಿ ಹೊಸ ಜವಳಿ ನೀತಿ ಜಾರಿಗೆಗೆ ಕ್ರಮ
* ನ್ಯಾ. ರಂಗನಾಥ್‌ ಮಿಶ್ರಾ ಆಯೋಗ, ನ್ಯಾ. ಸಾಚಾರ ಸಮಿತಿ ವರದಿ ಜಾರಿಗೆ ಕ್ರಮ
*ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು.
*ಶಿಕ್ಷಣ ಹಕ್ಕು ಕಾಯ್ದೆಗೆ ಕಟ್ಟುನಿಟ್ಟಿನ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಸುಧಾರಣೆಗೆ ಕ್ರಮ.
*ವಿವಿಧ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳನ್ನು ಭರ್ತಿಗೆ ಕ್ರಮ.
*ಕೊಳಗೇರಿ ಮುಕ್ತ ಗುಡಿಸಲು ಮುಕ್ತ ರಾಜ್ಯವಾನ್ನಾಗಿಸಲು ಕ್ರಮ.
*1ಕೆ.ಜಿ.ಗೆ 1ರೂ.ನಂತೆ 30ಕೆ.ಜಿ.ಅಕ್ಕಿ ವಿತರಣೆಗೆ ಕ್ರಮ.  ಜುಲೈ 1ರಿಂದ ಈ ಯೋಜನೆ ಜಾರಿ.
*ತೋಟಗಾರಿಕಾ ಅಭಿವೃದ್ಧಿಗೆ ವಿಶೇಷ ಒತ್ತು.
*2014ರ ಜನವರಿಯಲ್ಲಿ ಗದಗ್‌ ಜಿಲ್ಲೆಯ ಮಾದರಿಯಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ.
*ನಿರ್ಮಲ ಭಾರತ ಅಭಿವೃದ್ಧಿಯಡಿ 60ಲಕ್ಷ ಶೌಚಾಲಯ ನಿರ್ಮಾಣಕ್ಕೆ ಕ್ರಮ.
* 371(ಜೆ)ನೇ ವಿಧಿ ಅನುಷ್ಠಾನಕ್ಕೆ ಕ್ರಮ. ಮೂರು ತಿಂಗಳಲ್ಲಿ ಅಗತ್ಯ ನೀತಿ ರೂಪಿಸಲು ನಿರ್ಧಾರ.
*ಕೃಷಿಕರ ಉತ್ಪನ್ನಗಳ ಮಾರುಕಟ್ಟೆಗೆ ಕೃಷಿ ಆಯೋಗ.
* ನೌಕರರ ವರ್ಗಾವಣೆಗೆ ಪಾರದರ್ಶಕ ಕ್ರಮ.
*ಹಾಲು ಉತ್ಪಾದಕರಿಗೆ 4 ರೂ.ಪ್ರೋತ್ಸಾಹ ಧನ.
* ಗ್ರಾಮ ಸಡಕ್‌ ಯೋಜನೆಯಡಿ ರಸ್ತೆಗಳ ಅಭಿವೃದ್ಧಿ.
* ಬರ ಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಲಲ್ಲಿ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸೋಮವಾರ ವಿಧಾನಸಭೆಯ ಜಂಟಿ ಸದನದಲ್ಲಿ ತಿಳಿಸಿದರು.

Advertisement

0 comments:

Post a Comment

 
Top