ಭಾರತೀಯ ಭೂಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಗುಲಬರ್ಗಾದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಜೂನ್ ೦೬ ರಿಂದ ೧೩ ರವರೆಗೆ ಬೃಹತ್ ನೇಮಕಾತಿ ರ‍್ಯಾಲಿಯನ್ನು ಆಯೋಜಿಸಲಾಗಿದೆ.
ಜೂನ್ ೦೬ ರಂದು ಆರ್‌ಟಿ ಜೆಸಿಓ, ಎಜುಕೇಷನ್ ಹವಿಲ್ದಾರ್, ಡಿಎಸ್‌ಸಿ, ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಆಯ್ಕೆ ನಡೆಯಲಿದೆ. ಆರ್‌ಟಿ ಜೆಸಿಓ ಹುದ್ದೆಗಾಗಿ ಅಭ್ಯರ್ಥಿಗಳು ದಿನಾಂಕ: ೦೬-೦೬-೧೯೭೯ ರಿಂದ ೦೬-೦೬-೧೯೮೬ ರೊಳಗೆ ಜನಿಸಿರಬೇಕು, ಎಜುಕೇಷನ್ ಹವಿಲ್ದಾರ್ ಹುದ್ದೆಗೆ ದಿನಾಂಕ: ೦೬-೦೬-೧೯೮೮ ರಿಂದ ೦೬-೦೬-೧೯೯೩ ರೊಳಗೆ ಜನಿಸಿದ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಈ ಎರಡು ಹುದ್ದೆಗಳಿಗೆ ಕರ್ನಾಟಕ, ಕೇರಳ, ಲಕ್ಷದ್ವೀಪ ಪ್ರದೇಶದ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಡಿಎಸ್‌ಸಿ ಹುದ್ದೆಗೆ ೪೮ ವರ್ಷದೊಳಗಿನ ರಾಜ್ಯದ ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಸೋಲ್ಜರ್ ಜನರಲ್ ಡ್ಯುಟಿ ಹುದ್ದೆಗೆ ಕೊಪ್ಪಳ, ಬಳ್ಳಾರಿ, ಬೀದರ್, ಗುಲ್ಬರ್ಗಾ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಜೂ.೦೭ ರಿಂದ ೧೦ ರವರೆಗೆ ಸೋಲ್ಜರ್ ಜನರಲ್ ಡ್ಯೂಟಿಗೆ ಆಯ್ಕೆ ನಡೆಯಲಿದ್ದು ಜೂ.೦೭ ರಂದು ಬೆಳಗಾವಿ ಜಿಲ್ಲೆಯ ಬೆಳಗಾಂ, ಬೈಲಹೊಂಗಲ ಮತ್ತು ಸವದತ್ತಿ, ಜೂ.೦೮ ರಂದು ಚಿಕ್ಕೋಡಿ, ಅಥಣಿ, ರಾಯಬಾಗ, ಜೂ.೦೯ ರಂದು ಗೋಕಾಕ್, ಹುಕ್ಕೇರಿ, ಜೂ.೧೦ ರಂದು ರಾಮದುರ್ಗ, ಖಾನಾಪುರದ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಸೋಲ್ಜರ್ ಜನರಲ್ ಡ್ಯುಟಿ ಹುದ್ದೆಗಾಗಿ ಅಭ್ಯರ್ಥಿಗಳು ದಿನಾಂಕ: ೦೬-೦೬-೧೯೯೨ ರಿಂದ ೦೬-೧೨-೧೯೯೫ ರೊಳಗೆ ಜನಿಸಿದವರಾಗಿರಬೇಕು.
ಜೂ.೧೧ ಹಾಗೂ ಜೂ.೧೨ ರಂದು ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟಂಟ್ಸ್, ಸೋಲ್ಜರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ ನೇಮಕಾತಿ ನಡೆಯಲಿದ್ದು, ಜೂ.೧೧ ರಂದು ಕೊಪ್ಪಳ, ಬೆಳಗಾವಿ, ಬಳ್ಳಾರಿ, ಬೀದರ್, ರಾಯಚೂರು, ಗುಲಬರ್ಗಾ ಹಾಗೂ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದು. ಜೂ.೧೨ ರಂದು ರಾಜ್ಯದ ಇತರೆ ಜಿಲ್ಲೆಯ ಅಭ್ಯರ್ಥಿಗಳು (ಕೊಪ್ಪಳ, ಬೆಳಗಾವಿ, ಬಳ್ಳಾರಿ, ಬೀದರ್, ರಾಯಚೂರು, ಗುಲಬರ್ಗಾ ಹಾಗೂ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳನ್ನು ಹೊರತುಪಡಿಸಿ) ಭಾಗವಹಿಸಬಹುದಾಗಿದೆ.
ಜೂ.೧೩ ರಂದು ಸೋಲ್ಜರ್ ಟ್ರೆಡ್ಸ್‌ಮನ್ ಹುದ್ದೆಗೆ ಬೆಳಗಾವಿ, ಬೀದರ್, ಬಳ್ಳಾರಿ, ಕೊಪ್ಪಳ, ರಾಯಚೂರು, ಗುಲ್ಬರ್ಗಾ ಹಾಗೂ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದು. ಸೋಲ್ಜರ್ ಜನರಲ್ ಡ್ಯುಟಿ ಹುದ್ದೆಗಳಿಗೆ ಶೇ.೪೫ ಅಂಕಗಳೊಂದಿಗೆ ಎಸ್.ಎಸ್.ಎಲ್.ಸಿ. ಉತ್ತೀರ್ಣ, ಸೋಲ್ಜರ್ ಟೆಕ್ನಿಕಲ್ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ಪಿ.ಯು.ಸಿ. ತೇರ್ಗಡೆ ಹೊಂದಿ ಶೇ.೫೦ ರಷ್ಟು ಪಡೆದಿರಬೇಕು, ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗೆ ಪಿಯುಸಿ (ವಿಜ್ಞಾನ) ಬಿಎಸ್ಸಿ(ಬಾಟ್ನಿ)/ಜೂಆಲಜೀ, ಬಯೋ ಸೈನ್ಸ್) ಯಲ್ಲಿ ಶೇ.೫೦ ಅಂಕಗಳಿಸಿ ಉತ್ತೀರ್ಣರಾಗಿರಬೇಕು, ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ ಯಾವುದೇ ವಿಷಯದಲ್ಲಿ ಶೇ.೫೦ ಅಂಕಗಳಿಸಿ ಪಿಯುಸಿ ಪಾಸಾಗಿರಬೇಕು. ಪರೀಕ್ಷೆ ನಡೆಸಲಾಗುವುದು.
ಯುವಕ ಅಭ್ಯರ್ಥಿಗಳು ಮಾತ್ರ ಈ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದ್ದು, ರ‍್ಯಾಲಿಗೆ ಬರುವಾಗ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ. ಸೇರಿದಂತೆ ಉನ್ನತ ವ್ಯಾಸಂಗದ ಎಲ್ಲಾ ಮೂಲ ಪ್ರಮಾಣ ಪತ್ರಗಳು, ಪಾಸ್ ಪೋರ್ಟ್ ಅಳತೆಯ ೧೨ ಬಣ್ಣದ ಭಾವಚಿತ್ರಗಳ ತಹಶೀಲ್ದಾರ್/ ಜಿಲ್ಲಾಧಿಕಾರಿಗಳು/ನೆಮ್ಮದಿ ಕೇಂದ್ರದಿಂದ ಪಡೆದಿರುವ ಹಾಗೂ ಇಂಗ್ಲೀಷ್ ಭಾಷೆಯಲ್ಲಿರುವ ವಾಸಸ್ಥಳ ಹಾಗೂ ಜಾತಿ ಪ್ರಮಾಣ ಪತ್ರ ಅತ್ಯಂತ ಅವಶ್ಯಕವಾಗಿದೆ. ಅಲ್ಲದೇ ೬ ತಿಂಗಳ ಒಳಗೆ ಪಡೆದಿರುವ ನಡತೆ ಪ್ರಮಾಣ ಪತ್ರ (ಗ್ರಾ.ಪಂ.ಅಧ್ಯಕ್ಷರು/ಸ್ಥಳೀಯ ಪೊಲೀಸ್ ಅಧಿಕಾರಿ/ಅಂಗೀಕೃತ ಶಾಲೆ/ಕಾಲೇಜು ಮುಖ್ಯಸ್ಥರಿಂದ ಪಡೆದ), ಕ್ರೀಡೆ ಅಥವಾ ಎನ್.ಸಿ.ಸಿ. ಪ್ರಮಾಣ ಪತ್ರಗಳಿದ್ದಲ್ಲಿ ಮೂಲ ಪ್ರಮಾಣ ಪತ್ರ ತರಬೇಕು. ಹೆಚ್ಚಿನ ಮಾಹಿತಿಗಾಗಿ ಸೇನಾ ನೇಮಕಾತಿ ಕಚೇರಿ, ಬೆಳಗಾವಿ-೦೮೩೧-೨೪೬೫೫೫೦ ಅಥವಾ www.zrobangalore.gov.in ವೆಬ್‌ಸೈಟ್ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

0 comments:
Post a Comment