ಕೊಪ್ಪಳ ಜಿಲ್ಲಾ ವ್ಯಾಪ್ತಿಯ ೦೫ ವಿಧಾನಸಭಾ ಕ್ಷೇತ್ರಗಳಲ್ಲಿ ಮೇ ೦೫ ರಂದು ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಶೇ. ೭೩. ೫೩ ರಷ್ಟು ಮತದಾನವಾಗಿದೆ.
ಕುಷ್ಟಗಿ - ಶೇ. ೭೧. ೧೫
ಕನಕಗಿರಿ- ಶೇ.೭೩. ೭೫
ಗಂಗಾವತಿ-ಶೇ.೭೩. ೧೫
ಯಲಬುರ್ಗಾ- ಶೇ.೭೫. ೫೩, ಹಾಗೂ
ಕೊಪ್ಪಳ -ಶೇ. ೭೩. ೭೭ ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ ೨೦೦೮ ರಲ್ಲಿ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕುಷ್ಟಗಿ ಕ್ಷೇತ್ರದಲ್ಲಿ ಶೇ. ೬೦. ೭೩, ಕನಕಗಿರಿ- ಶೇ. ೫೬. ೩೦, ಗಂಗಾವತಿ- ಶೇ. ೬೩. ೩೪, ಯಲಬುರ್ಗಾ- ಶೇ. ೬೬. ೫೪ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಶೇ. ೬೫. ೨೨ ರಷ್ಟು ಅಂದರೆ ಒಟ್ಟಾರೆ ಜಿಲ್ಲೆಯಲ್ಲಿ ಶೇ. ೬೨. ೩೯ ರಷ್ಟು ಮತದಾನವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
0 comments:
Post a Comment