ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮೇಘಾಲಯ ರಾಜ್ಯದವರಾದ ನಿಕೋಲಾಯ್ ಸಿಂಗ್ ನೇತೃತ್ವದ ೦೭ ಜನರ ತಂಡ ಏ. ೨೭ ರಂದು ಕೊಪ್ಪಳದಲ್ಲಿ ಪ್ಯಾರಾಗ್ಲೈಡಿಂಗ್ ಹಾರಾಟ ನಡೆಸಲಿದೆ.
ಕೊಪ್ಪಳ ಜಿಲ್ಲಾಡಳಿತ ಸ್ವೀಪ್ ಕಾರ್ಯಕ್ರಮದ ಮೂಲಕ ಮತದಾರರಲ್ಲಿ ಜಾಗೃತಿ ಮುಡಿಸಲು ಈವರೆಗೆ ಹಲವಾರು ಬಗೆ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ಈ ಜಾಗೃತಿ ಕಾರ್ಯಕ್ರಮ ಕೇವಲ ನೆಲದ ಮೇಲಷ್ಟೇ ಅಲ್ಲ, ಆಕಾಶ ಮಾರ್ಗದ ಮೂಲಕವೂ ಜಾಗೃತಿಗೆ ಮುಂದಾಗಿದೆ. ಏ. ೨೭ ರಂದು ಬೆಳಿಗ್ಗೆ ೦೮ ಗಂಟೆಯಿಂದ ೧೧ ರವರೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಿಂದ ಪ್ಯಾರಾಗ್ಲೈಡಿಂಗ್ ಹಾರಾಟ ನಡೆಸಲಿದ್ದು, ಮತದಾರರ ಜಾಗೃತಿ ಮೂಡಿಸಲು ಹೊಸ ವಿಧಾನವನ್ನು ಅಳವಡಿಸಿದಂತಾಗಲಿದೆ. ಮೇಘಾಲಯದ ನಿಕೋಲಾಯ್ ಸಿಂಗ್ ನೇತೃತ್ವದ ಸುಮಾರು ೭ ಜನರ ತಂಡ ಇದರಲ್ಲಿ ಪಾಲ್ಗೊಳ್ಳಲಿದ್ದು, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಿಕೋಲಾಯ್‌ಸಿಂಗ್ ಅವರು ತಮ್ಮ ಅಚ್ಚುಮೆಚ್ಚಿನ ಪ್ಯಾರಾಗ್ಲೈಡಿಂಗ್ ಹಾರಾಟವನ್ನು ವಿವಿಧ ರಾಜ್ಯಗಳಲ್ಲಿ ಪ್ರಕೃತಿ ವಿಕೋಪ
ಸಂದರ್ಭದಲ್ಲಿ ಸಂತ್ರಸ್ಥರನ್ನು ರಕ್ಷಿಸುವುದು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಕೈಗೊಂಡಿರುವ ಬಗ್ಗೆ ಮಾಹಿತಿ ಇದೆ. ಪ್ಯಾರಾಗ್ಲೈಡಿಂಗ್ ಮೂರು ಚಕ್ರಗಳ ವಾಹನವಾಗಿದ್ದು, ಇದು ಭೂಮಿಯಿಂದ ಸುಮಾರು ೪೦೦ ರಿಂದ ೫೦೦ ಮೀ. ಎತ್ತರದಲ್ಲಿ, ಸುಮಾರು ೧೦ ರಿಂದ ೧೫ ಕಿ.ಮೀ. ವ್ಯಾಪ್ತಿಯಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಜಿಲ್ಲಾ ಕ್ರೀಡಾಂಗಣದಿಂದ ಪ್ಯಾರಾಗ್ಲೈಡಿಂಗ್ ಹಾರಾಟ ಕಾರ್ಯಕ್ರಮದ ವ್ಯವಸ್ಥೆ ಕೈಗೊಳ್ಳುವ ಹೊಣೆಯನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್. ಘಾಡಿ ಅವರು ವಹಿಸಿಕೊಡಲಾಗಿದೆ.

ಈ ರೋಮಾಂಚನಕಾರಿ ಪ್ಯಾರಾಗ್ಲೈಡಿಂಗ್ ಹಾರಾಟದ ವೀಕ್ಷಣೆಗೆ ಎಲ್ಲ ಸಾರ್ವಜನಿಕರು, ಯುವಕ, ಯುವತಿಯರು, ವಿದ್ಯಾರ್ಥಿಗಳು, ಆಸಕ್ತರು ಎಲ್ಲರೂ ಜಿಲ್ಲಾ ಕ್ರೀಡಾಂಗಣದಲ್ಲಿ ಭಾಗವಹಿಸಿ ವೀಕ್ಷಿಸಬಹುದಾಗಿದ್ದು, ಪ್ಯಾರಾಗ್ಲೈಡಿಂಗ್ ಮೂಲಕ ಸಾರ್ವಜನಿಕರಿಗೆ ಕರಪತ್ರಗಳನ್ನು ಬೀಳಿಸುವುದರಿಂದ, ಬಹುತೇಕ ಕರಪತ್ರಗಳು ಸಾರ್ವಜನಿಕರ ಕೈಗೆ ಸಿಗುವ ಬದಲು ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗಿ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಮತದಾರರ ಜಾಗೃತಿ ಒಂದು ಶುಭ ಹಾಗೂ ಮಂಗಳಕರ ಕಾರ್ಯವಾಗಿರುವುದರಿಂದ, ಪ್ಯಾರಾಗ್ಲೈಡಿಂಗ್ ಮೂಲಕ ಪುಷ್ಪವೃಷ್ಠಿ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶ ಹೊಂದಲಾಗಿದೆ ಎನ್ನುತ್ತಾರೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು.
0 comments:
Post a Comment