ಗಬ್ಬೂರು, ಕೊಪ್ಪಳ, ೨೯ : ಭಾರತೀಯ ಜನತಾ ಪಕ್ಷವು ಜನಪರವಾಗಿದ್ದು, ಗ್ರಾ
ಮೀಣ ಭಾಗದ ಅಭಿವೃದ್ಧಿ ಪಕ್ಷದ ಪ್ರಮುಖ ಉದ್ಧೇಶಗಳಲ್ಲೊಂದಾಗಿದೆ. ಬಿ.ಜೆ.ಪಿ. ಆಡಳಿತಾವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿವೆ. ಕೃಷ್ಣಾ ಬಿ. ಸ್ಕೀಂ, ಸಿಂಗಟಾಲೂರು ಏತ ನೀರಾವರಿ, ಬೆಟಗೇರಿ ಏತ ನೀರಾವರಿ ಯೋಜನೆಗಳು ಈ ಭಾಗದ ೪೦ ಸಾವಿರ ಎಕರೆ ಭೂಮಿಯನ್ನು ಸದೃಢಗೊಳಿಸಲಿವೆ. ಗಬ್ಬೂರು ಗ್ರಾಮವೂ ಸಹ ಸಿಂಗಟಾಲೂರು ಏತ ನೀರಾವರಿಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದೆ. ಸಂಪೂರ್ಣ ಜನಪರ ಧೋರಣೆ ಹೊಂದಿರುವ ಬಿ.ಜೆ.ಪಿ. ಪಕ್ಷಕ್ಕೆ ಮತ ಹಾಕಿ ತಮ್ಮನ್ನು ಗೆಲ್ಲಿಸಿ, ಮತ್ತಷ್ಟು ಯೋಜನೆಗಳು ಈ ಭಾಗಕ್ಕೆ ತಲುಪುವಂತೆ ಕಾರ್ಯ ಮಾಡಲು ಅವಕಾಶ ಕೊಡಬೇಕೆಂದು ಕೊಪ್ಪಳ ವಿಧಾನಸಭಾ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಹೇಳಿದರು.
ಮುಂದುವರಿದು ಮಾತನಾಡಿದ ಅವರು ಪಟ್ಟಣ ಪ್ರದೇಶಕ್ಕೆ ಮೆಡಿಕಲ್, ಇಂಜಿನಿಯರಿಂಗ್, ತೋಟಗಾರಿಕಾ ಕಾಲೇಜು, ಗ್ರಾಮ ಪ್ರದೇಶಗಳಿಗೆ ಕೊಳವೆ ಬಾವಿ ಯೋಜನೆಗಳು, ಸಿ.ಸಿ. ರಸ್ತೆ, ಹಿಂದುಳಿದ-ದಲಿತರ ಕೇರಿಗಳಲ್ಲಿ ಮೂಲಭೂತ ಸೌಕರ್ಯಗಳು, ೪,೦೦೦ ಆಶ್ರಯ ಮನೆಗಳು ಹೀಗೆ ಹತ್ತು ಹಲವಾರು ಪ್ರಗತಿಪರ ಕೆಲಸಗಳು ಪಾರದರ್ಶಕವಾಗಿದ್ದು, ಅಭಿವೃದ್ಧಿ ಮತ್ತು ಹಿತಕ್ಕಾಗಿ ಬಿ.ಜೆ.ಪಿ. ಬೆಂಬಲಿಸಿ ತಮಗೆ ಮತ ಹಾಕಲು ವಿನಂತಿಸಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ, ಮುಖಂಡರಾದ ಮಾರುತೆಪ್ಪ ಹಲಗೇರಿ, ಕುಬೇರ ಮಜ್ಜಿಗಿ, ಸತ್ಯಪ್ಪ ಹರಿಜನ, ಶಾಬುದ್ಧೀನ ಸಾದ್, ಶ್ರೀಮತಿ ಸರೋಜಾ ಬಾಕಳೆ, ಶ್ರೀಮತಿ ಶಾಮಲಾ ಕೋನಕೋರ, ಸಂಗಮೇಶ ಡಂಬಳ, ಪಂಪಣ್ಣ ಪೂಜಾರ, ಅಮಾಜಪ್ಪ ಕುರಿ, ಮರ್ತುಜಾ ಸಾದ, ಭೀಮಪ್ಪ ಹರಿಜನ, ಪತ್ರೆಪ್ಪ ಮಜ್ಜಿಗಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment