PLEASE LOGIN TO KANNADANET.COM FOR REGULAR NEWS-UPDATES


ನೂತನ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಉದ್ಘಾಟನೆ ಸಮಾರಂಭ ಹಾಗೂ ಪದಗ್ರಹಣ ಪ್ರಮಾಣ ಸ್ವೀಕಾರ ಸಮಾರಂಭವು ಕೊಪ್ಪಳದ ಹೋಟಲ್ ಬಿ.ಎಸ್.ಪವಾರ್ ಗ್ರಾಂಡ್ ಹೊಸಪೇಟೆ ರೋಡ ಕೊಪ್ಪಳದಲ್ಲಿ ದಿ.೨೮.೦೪.೨೦೧೩ ರ ರವಿವಾರದಂದು ಬೆಳಿಗ್ಗೆ ೧೦ಘಂಟೆಗೆ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು  ನಾಗುಸಾ ಯು. ಮೇಘರಾಜ, ಅಧ್ಯಕ್ಷರು ಎಸ್.ಎಸ್.ಕೆ. ಸಮಾಜ ಭಾಗ್ಯನಗರ ರವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ  ರಾಮಕೃಷ್ಣಸಾ ಎಲ್. ಅಂಟಾಳಮರದ ಹಿರಿಯರು ವಹಿಸಿಕೊಂಡಿದ್ದರು. ಅತಿಥಿಗಳಾಗಿ  ಉಮಾಕಾಂತಸಾ ಕಠಾರೆ ಮಾಜಿ ಅದ್ಯಕ್ಷರು, ಎಸ್.ಎಸ್.ಕೆ. ಸಮಾಜ ಭಾಗ್ಯನಗರ ವಹಿಸಿಕೊಂಡಿದ್ದರು. ಈ ಸಮಾರಂಭವು ವಾಡಿಕೆಯಂತೆ  ಅಶೋಕಸಾ ಎ. ನಗರಿ ರವರ ಪ್ರಾರ್ಥನೆಯಿಂದ ಪ್ರಾರಂಭವಾಗಿ, ಎಲ್ಲರನ್ನು   ಓಂಕಾರಸಾ ಎನ್.ಖೋಡೆಯವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಹಿರಿಯರಾದ   ರಾಮಕೃಷ್ಣಸಾ ಎಲ್. ಅಂಟಾಳಮರದರವರು ಕೊಪ್ಪಳದ ನೂತನ ಎಸ್.ಎಸ್.ಕೆ. ಸಮಾಜದ ಪದಾಧಿಕಾರಿಗಳ ಪದಗ್ರಹಣ ವಚನವನ್ನು ಬೋಧಿಸಿದರು. ಕೆಳಕಂಡಂತೆ ಎಸ್.ಎಸ್.ಕೆ. ಸಮಾಜದ ಪದಾಧಿಕಾರಿಗಳು ತಮ್ಮ ಅಧಿಕಾರವನ್ನು ಪ್ರಾಮಾಣ ಮಾಡುವುದರ ಮೂಲಕ ಪ್ರಮಾಣ ವಚನವನ್ನು ಸ್ವೀಕರಿಸಿದರು.
 ನಾರಾಯಣಸಾ ಆರ್.ಬಾಕಳೆ, ಅದ್ಯಕ್ಷರು
 ನಾಗೇಂದ್ರಸಾ ವಾಯ್. ಕಾಟವಾ. ಉಪಾಧ್ಯಕ್ಷರು
 ಗೋಪಾಲಕೃಷ್ಣ ಎ.ನಗರ. ಪ್ರಧಾನ ಕಾರ್ಯದರ್ಶಿ
  ತಮ್ಮಣ್ಣ. ಟಿ, ಕಾಟವಾ ಸಹಕಾರ್ಯದರ್ಶಿ
  ಅಶೋಕಸಾ ಎ. ನಗರಿ ಉಪ ಖಜಾಂಚಿ
 ಹನುಮಂತಸಾ. ವಿ. ಕಾಟವಾ ಸಂಘಟನಾ ಕಾರ್ಯದರ್ಶಿ
 ವಿಶ್ವನಾಥ ಎನ್. ಹಬೀಬ ಸದಸ್ಯರು
  ಧರ್ಮಸಾ, ಎಫ್. ಬದಿ, ಸದಸ್ಯರು
 ಕೃಷ್ಣಸಾ ಆರ್, ಬಾಕಳೆ ಸದಸ್ಯರು
 ರಾಮಚಂದ್ರಸಾ. ಟಿ, ಭಾಂಡಗೆ ಸದಸ್ಯರು
 ಗೋವಿಂದಸಾ ವಾಯ್.ಕಾಟವಾ ಸದಸ್ಯರು
 ಸುಬ್ಬಣ್ಣ.ಟಿ, ಮಗಜಿ ಸದಸ್ಯರು
 ನಾಗೇಶ ಆರ್. ರಾಯಬಾಗಿ ಸದಸ್ಯರು
  ಮೋತಿಲಾಲ್‌ಸಾ, ಎಂ. ಕಾಟವಾ ಸದಸ್ಯರು
  ಶಂಕರಸಾ ಸಿ. ಶಿಂಗ್ರಿ, ಸದಸ್ಯರು
  ವೆಂಕಟೇಶ, ಬಿ, ಕಾಟವಾ ಸದಸ್ಯರು  

ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಯನ್ನು   ಉಮಕಾಂಸಾ ಕಠಾರೆಯವರು ನುಡಿಯುತ್ತ ಸಮಾಜದ ಎಳ್ಗಿಗೆ ಎಲ್ಲರ ಸಹಕಾರ ಮತ್ತು ಅವಶ್ಯವೆಂದು ನುಡಿಯುತ್ತಾ ಎಲ್ಲಾ ಪದಾಧಿಕಾರಿಗಳು ಒಗ್ಗಟ್ಟಿನಲ್ಲಿ ಇರಲು ತಿಳಿಸದರು ಕಾರ್ಯಕ್ರಮದ ಮುಖ್ಯ ಅತಿಥ್ಯವನ್ನು ವಹಿಸಿಕೊಂಡತಹ  ರಾಮಕೃಷ್ಣಸಾ ಎಲ್ ಅಂಟಾಳ ಮರದವರು ಎಲ್ಲಾ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸುವದರೊಂದಿಗೆ ಆ ಜಹನಾತ್ಮೆ ಅಂಬಾಭವಾನಿದೇವಿಯ ಕೃಪಾ ಕಟ್ಟಾಕ್ಷೆಯಿಂದ ತಮಗೆ ನೀಡಿದ  ಎಲ್ಲಾ ಜವಾಬ್ಧಾರಿಗಳನ್ನು ಯಾವುದೇ ರಾಗ ಮತ್ತು ದೇಷವಿಲ್ಲದೆ ತಮಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ತಿಳಿಸಿದರು. 
ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ಶ್ರೀ ನಾಎಆಯಣ ಬಾಕಳೆಯವರು ತಮ್ಮ ಅನಿಸಿಕೆಯಲ್ಲಿ ತಮಗೆ ನೀಡಿದ ಜವಾಬ್ಧಾರಿಯನ್ನು ಸಮಾಜದ ಉನ್ನತಿಗಾಗಿ ಶ್ರಮವಹಿಸಿ ದುಡಿಯುವದಾಗಿ ಮಾತನಾಡಿದರು ಅದೇ ರೀತಿಯಾಗಿ ಉಪಾಧ್ಯಕ್ಷರಾದ  ನಾಗೇಂದ್ರಸಾ ಯು.ಕಾಟವಾ ರವರು ಸಮಾಜದ ಉನ್ನತಿಗಾಗಿ ನಾನು ತನು ಮನ ಧನದಿಂದ ಸಹಾಯದಿಂದ ಶ್ರಮವಹಿಸಿ ಎಲ್ಲರ ಸಹಕಾರ ಪಡೆದುಕೊಂಡು ದುಡಿಯುತ್ತೇನೆ ಎಂದು ತಿಳಿಸಿದರು ಸದರಿ ಕಾರ್ಯಕ್ರಮವನ್ನು  
ವೆಂಕಟೇಶ ಬಿ ಕಾಟವಾ ರವರು ನಿರುಪಣೆಯನ್ನು ಮಾಡಿದರೆ ಕೊನೆಯಲ್ಲಿ  ಶಂಕರಸಾ ಶಿಂಗ್ರಿಯವರು ವಂಧಿಸಿದರು.

Advertisement

0 comments:

Post a Comment

 
Top