ವಿಧಾನಸಭೆ ಚುನಾವಣೆ ಇರುವ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಯಿಂದ ಅಕ್ರಮ ಮದ್ಯ ಸಾಗಾಣಿಕೆ ತಡೆಗಟ್ಟಲು ಅಬಕಾರಿ ಇಲಾಖೆ ವಿವಿಧ ಕ್ರಮಗಳನ್ನು ಕೈಗೊಂಡಿದೆ.
ಅಬಕಾರಿಗೆ ಸಂಬಂಧಪಟ್ಟ ನಿಯಂತ್ರಣಕ್ಕಾಗಿ ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಕೊಠಡಿ (ಕಂಟ್ರೋಲ್‌ರೂಮ್) ತೆರೆಯಲಾಗಿದ್ದು, ದೂರವಾಣಿ ಸಂಖ್ಯೆ ೦೮೫೩೯- ೨೨೨೦೦೨ ಮತ್ತು ೨೨೨೦೦೧ (ಫ್ಯಾಕ್ಸ್)) ಸಾರ್ವಜನಿಕರು ನಿಯಂತ್ರಣ ಕೊಠಡಿಗೆ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಅಬಕಾರಿ ಇಲಾಖೆಯ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಈ ನಿಯಂತ್ರಣ ಕೊಠಡಿಯಲ್ಲಿ ದಾಖಲಾಗುವ ದೂರುಗಳ ಬಗ್ಗೆ ತಕ್ಷಣ ಸ್ಪಂದಿಸಲು ಹಾಗೂ ಕ್ರಮ ಕೈಗೊಳ್ಳಲು ಇಬ್ಬರು ನೋಡೆಲ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದ್ದು, ಅದರಲ್ಲಿ ಕುಷ್ಟಗಿ, ಗಂಗಾವತಿ, ಕನಕಗಿರಿ ಕ್ಷೇತ್ರ ವ್ಯಾಪ್ತಿಗೆ ಉಪ ವಿಭಾಗ ಕೊಪ್ಪಳದ ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಸಂಗಮೇಶ ಎಸ್.ಮುರನಾಳ ಮೊ.೯೪೪೯೫೯೭೧೭೫, ಕೊಪ್ಪಳ, ಯಲಬುರ್ಗಾ ಕ್ಷೇತ್ರ ವ್ಯಾಪ್ತಿಗೆ ಜಿಲ್ಲಾ ವಿಚಕ್ಷಣದಳದ ಅಬಕಾರಿ ನಿರೀಕ್ಷಕ ಮಂಜುನಾಥ ವಿ.ಮಾಲಿಪಾಟೀಲ್, ಮೊ.೯೪೪೯೫೯೭೧೭೬ ಇವರನ್ನು ನೇಮಿಸಲಾಗಿದೆ.
ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ತಾಲೂಕ ಹಾಗೂ ಕ್ಷೇತ್ರವಾರು ಪ್ರಹಾರ ದಳಗಳನ್ನು ರಚಿಸಲಾಗಿದ್ದು, ಜಿಲ್ಲೆಯಾದ್ಯಂತ ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳಭಟ್ಟಿ ಇತ್ಯಾದಿಗಳ ಮೇಲೆ ಸಂಪೂರ್ಣ ಹತೋಟಿ ಹಾಗೂ ಸಾಧಿಸಲು ವಿವಿಧ ದಳಗಳನ್ನು ರಚಿಸಲಾಗಿದೆ. ಅದರಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಕೊಪ್ಪಳ ಅಬಕಾರಿ ನಿರೀಕ್ಷಕ ಯಮನೂರುಸಾಬ್ ಹೊಸಮನಿ ಮೊ.೯೪೪೮೭೫೭೯೨೩, ಕುಷ್ಟಗಿ ಕ್ಷೇತ್ರಕ್ಕೆ ಕುಷ್ಟಗಿ ಅಬಕಾರಿ ನಿರೀಕ್ಷಕ ರಾಮನಗೌಡ ಮುದಿಗೌಡರ ಮೊ.೯೪೪೯೨೬೨೩೦೪, ಗಂಗಾವತಿ ಕ್ಷೇತ್ರಕ್ಕೆ ಗಂಗಾವತಿ ಅಬಕಾರಿ ನಿರೀಕ್ಷಕ ವಾಜೇಂದ್ರಚಾರ್ಯ ಮೊ.೯೯೭೨೮೧೯೦೨೨, ಕನಕಗಿರಿ ಕ್ಷೇತ್ರಕ್ಕೆ ಗಂಗಾವತಿ ಅಬಕಾರಿ ಉಪ ನಿರೀಕ್ಷಕ ನರಸಿಂಹಾಚಾರ್ಯ ಮೊ.೯೪೪೮೩೫೦೫೫೫, ಯಲಬುರ್ಗಾ ಕ್ಷೇತ್ರಕ್ಕೆ ಕುಷ್ಟಗಿಯ ಅಬಕಾರಿ ಉಪ ನಿರೀಕ್ಷಕ ಯಲ್ಲಪ್ಪ ಮೊ.೯೭೩೧೨೦೯೦೬೦ ಇವರನ್ನು ನಿಯೋಜಿಸಲಾಗಿದೆ. ಜಿಲ್ಲೆಯಾದ್ಯಂತ ಸೂಕ್ಷ್ಮ ಮತ್ತು ಅತಿ-ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾವಹಿಸಲು ವಲಯವಾರು ರಚಿಸಲಾಗಿರುವ ನೋಡೆಲ್ ಅಧಿಕಾರಿಗಳು ಹಾಗೂ ಪ್ರಹಾರ ದಳದ ಅಧಿಕಾರಿಗಳು ದಿನದ ೨೪ ಗಂಟೆಗಳ ಕಾಲ ಕಾರ್ಯಪ್ರವೃತ್ತರಾಗಲು ಆದೇಶಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಅವರು ತಿಳಿಸಿದ್ದಾರೆ.
0 comments:
Post a Comment