ಕಳೆದ ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಅಭಿವೃದ್ಧಿಯ ಹೊಸಶಕೆಯನ್ನೇ ಪ್ರಾರಂಭಿಸಿದೆ. ಬಿಜೆಪಿ ಸರಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳು ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಬಿಜೆಪಿ ಸರಕಾರದ್ದು, ಭಾಗ್ಯಲಕ್ಷ್ಮಿ ಯೋಜನೆ, ನೆನೆಗುದಿಗೆ ಬಿದ್ದಿದ್ದ ಹಲವಾರು ನೀರಾವರಿ ಯೋಜನೆಗಳ ಸಕಾರ, ನಗರ ಮತ್ತು ಪಟ್ಟಣ ಅಭಿವೃದ್ಧಿಗೆ ವಿಶೇಷ ಅನುದಾನ, ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ 'ಸಕಾಲ' ಯೋಜನೆ, ಜನರ ಬಳಿಗೆ ಆಡಳಿತಕ್ಕಾಗಿ 'ಅಟಲ್ ಜನಸ್ನೇಹಿ ಕೇಂದ್ರಗಳು, 'ಕರ್ನಾಟಕ ಒಣ್ ಇನ್ ಕೇಂದ್ರಗಳು, ಶಾಶ್ವತ ಕುಡಿಯುವ ನೀರು ಸರಬರಾಜಿಗಾಗಿ 'ಕನ್ನಡಗಂಗಾ' ಯೋಜನೆ, ಬಡವರ ಆರೋಗ್ಯ ಸುರಕ್ಷೆಗಾಗಿ 'ವಾಜಪೇಯಿ ಆರೋಗ್ಯಶ್ರೀ ಯೋಜನೆ, ಸರಕಾರಿ ನೌಕರರ ವೇತನ ಪರಿಷ್ಕರಣೆ ಯಂತಹ ಹಲವಾರು ಕಾರ್ಯಕ್ರಮಗಳನ್ನು ಬಿಜೆಪಿ ಸರಕಾರ ಜಾರಿಗೆ ತಂದಿದೆ ಎಂದು ಸಂಗಣ್ಣ ಕರಡಿಯವರು ಹೇಳಿದರು.
ಈ ಸಂದರ್ಭದಲ್ಲಿ ನಗರ ಸಭಾ ಮಾಜಿಅಧ್ಯಕ್ಷರಾದ ಗವಿಸಿದ್ದಪ್ಪ ಕಂದಾರಿ, ಪಾನಘಂಟಿ ವಕೀಲರು, ಗ್ರಾಮಪಂಚಾಯತಿ ಉಪಾಧ್ಯರಾದ ಖಾಜಾಹುಸೇನ್ ದೇವಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಲತ ನಾಯಕ್, ಶ್ಯಾಮಲ ಕೊನಾಪುರ, ಸರೋಜಾ ಬಾಕಳೆ, ವೇದಾ ಜೋಶಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು
ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳಿಂದ ಮತಯಾಚನೆ
ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳಿಂದ ಕರಡಿ ಸಂಗಣ್ಣನವರ ಪರವಾಗಿ ಬಹೂದ್ದುರ್ ಬಂಡಿ ಗ್ರಾಮದಲ್ಲಿ ದಿನಾಂಕ ೨೩.೦೪.೨೦೧೩ ರಂದು ಮತಯಾಚನೆ ಮಾಡಿದರು.
ಈ ಸಂಬಂರ್ಧದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಲತ ನಾಯಕ, ಶ್ಯಾಮಲ ಕೊನಪುರ, ಸರೋಜಾ ಬಾಕಳೆ, ವೇದಾ ಜೋಶಿ, ಮುಂತಾದವರು ಇದ್ದರು.
0 comments:
Post a Comment