PLEASE LOGIN TO KANNADANET.COM FOR REGULAR NEWS-UPDATES


ದಕ್ಷಿಣ ಭಾರತದಲ್ಲಿ ಪ್ರಥಮ ಭಾರಿಗೆ ಆಡಳಿತ ನಡೆಸಿದ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರವು ಗ್ರಾಮಗಳ ಅಭಿವೃದ್ದಿಗೆ ಸುವರ್ಣ ಗ್ರಾಮ ಯೋಜನೆ, ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ, ಭ್ರಷ್ಠಾಚಾರ ರಹಿತ ಆಡಳಿತಕ್ಕೆ ಸಕಾಲ, ವಾಜ್‌ಪೇಯಿ ಆರೋಗ್ಯಶ್ರೀ ಯಂತಹ ಹಲವಾರು ಜನಪರ ಯೋಜನೆಗಳನ್ನು ಜಾರಿಗೋಳಿಸುವುದರ ಮೂಲಕ ಕರ್ನಾಟಕದ ಅಭಿವೃದ್ದಿಗೆ ಹೂಸ ಭಾಷ್ಯವನ್ನು ಬರೆದ ಹೆಗ್ಗಳಿಕೆ ಬಿಜೆಪಿ ಪಕ್ಷಕ್ಕೆ ಸಲ್ಲುತ್ತದೆಂದು ಕರಡಿ ಸಂಗಣ್ಣನವರು ಮಾತನಾಡಿದರು.
ಅವರು ದಿನಾಂಕ ೨೨.೦೪.೨೦೧೩ ರಂದು ಗೋಂಡಬಾಳ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕೊಪ್ಪಳ ಕ್ಷೇತ್ರದಲ್ಲಿಯು ಸಹ ೨೨೦ ಕೆ.ವಿ. ವಿದ್ಯುತ್ ಸ್ಟೇಷನ್ ಸ್ಥಾಪಿಸುವ ಮೂಲಕ ಏತ ನೀರಾವರಿ ಯೋಜನೆಗಳಿಗೆ ಅನೂಕಲವಾಗಲಿದೆ. ಕ್ಷೇತ್ರದ ಎಲ್ಲಾ ರಸ್ತೆಗಳು ನಿರ್ಮಾಣವಾಗಿವೆ, ವಿಶೇಷವಾಗಿ ಎಸ್.ಹೆಚ್.ಡಿ.ಪಿ. ಯೋಜನೆಯಡಿ ಹಲಗೇರಿ - ಹಿರೇಸಿಂದೋಗಿ-ಕ್ಯಾಸಲಾಪುರ-ಹೆಸರೂರು ರಸ್ತೆಗೆ ನಿರ್ಮಾಣಕ್ಕೆ ೪೦ಕೋಟಿ ಮಂಜೂರಾಗಿರುವುದು ಬಹಳ ಸಂತೋಷವೆಂದು ಮಾತನಾಡಿದರು.
ಈ ಸಂದಂರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷರಾದ ಗವಿಸಿದ್ದಪ್ಪ ಕಂದಾರಿ, ದೇವಪ್ಪ ಬಹುದ್ದುರ್ ಬಂಡಿ, ಬಸವಾರಜ್ ಕಣಿವಿ, ಶಂಕರಗೌಡ್ರ, ಪ್ರಭುಗೌಡ್ರ, ಖಾಜಾಹುಸೇನ ದೇವಡಿ, ಅನಾಳಪ್ಪ, ಲಕ್ಷ್ಮಣರಡ್ಡಿ, ಪ್ರಭುರಾಜ್ ಪಾಟೀಲ್, ಕಲ್ಲೇಪ್ಪ ಹಳ್ಳಿಕೇರಿ, ಬೆಡಕಪ್ಪ ಮೆತಗಲ್ಲ, ಭೂಜಪ್ಪ ಕೆರೂರು, ನೆಮಿರೆಡ್ಡಿ, ನಾಗರಾಜ ಗಾರೂಡಮಠ, ಚಂದುಸ್ವಾಮಿ, ಹಾಲೇಶ್ ಕಂದಾರಿ, ಮುಂತಾದವರು ಉಪಸ್ಥಿತರಿದ್ದರು ತೋಟಪ್ಪ ಕಾಮನೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು  

Advertisement

0 comments:

Post a Comment

 
Top