PLEASE LOGIN TO KANNADANET.COM FOR REGULAR NEWS-UPDATES


  ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವ ಸಿಬ್ಬಂದಿಗಳು ಭರ್ತಿ ಮಾಡಿದ ನಮೂನೆ-೧೨ ಅನ್ನು ಏ. ೨೮ ರಂದು ಸಂಜೆ ೫-೩೦ ಗಂಟೆಯ ಒಳಗಾಗಿ ಸಂಬಂಧಪಟ್ಟ ತಹಸಿಲ್ದಾರರ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
  ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಸಿಬ್ಬಂದಿಗಳು, ಪೊಲೀಸರು, ವಾಹನ ಚಾಲಕರು, ಕ್ಲೀನರ್‌ಗಳಿಗೆ ಅಂಚೆ ಮತ ಪತ್ರಗಳನ್ನು ನೀಡುವಂತೆ ಭಾರತ ಚುನಾವಣಾ ಆಯೋಗ ಸೂಚಿಸಿದ್ದು, ಇದರಂತೆ ಎಲ್ಲಾ ಸಿಬ್ಬಂದಿಗಳಿಗೆ ಅಂಚೆ ಮತಪತ್ರ ಕೋರಿಕೆ ಅರ್ಜಿ ನಮೂನೆ-೧೨ ಅನ್ನು ವಿತರಿಸಲಾಗಿದೆ.  ಅಂಚೆ ಮತಪತ್ರ ಮೂಲಕ ಮತ ಚಲಾಯಿಸುವವರು ನಮೂನೆ-೧೨ ಅನ್ನು ಭರ್ತಿ ಮಾಡಿ, ಸಂಬಂಧಪಟ್ಟ ತಹಸಿಲ್ದಾರರ ಕಚೇರಿಗೆ ಏ. ೨೮ ರಂದು ಸಂಜೆ ೫-೩೦ ಗಂಟೆಯ ಒಳಗಾಗಿ ಸಲ್ಲಿಸಬೇಕು.  ನಿಗದಿತ ವೇಳೆಯ ನಂತರ ಸ್ವೀಕೃತವಾಗುವ ಯಾವುದೇ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.  ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ತರಬೇತಿ ನಡೆಯುವ ಸ್ಥಳಗಳಲ್ಲಿ ಮತ್ತು ಸಂಬಂಧಿಸಿದ ತಹಸಿಲ್ದಾರರ ಕಾರ್ಯಾಲಯದಲ್ಲಿ ಫೆಸಿಲಿಟೇಷನ್ ಸೆಂಟರ್ (Facilitation center) ಸ್ಥಾಪಿಸಲಾಗಿದೆ.  ತಹಸಿಲ್ದಾರರ ಕಾರ್ಯಾಲಯದಲ್ಲಿ ಪ್ರತಿದಿನ ಬೆಳಿಗ್ಗೆ ೧೧ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ಮತ ಚಲಾಯಿಸಬಹುದಾಗಿದೆ.  ಚುನಾವಣಾ ಆಯೋಗದ ಮಾರ್ಚ್ ೨೬ ರ ನಿರ್ದೇಶನದಂತೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವ ಸಿಬ್ಬಂದಿಗಳಿಗೆ ಅನುಕೂಲವಾಗುವ ಮತ್ತು ಮತದಾನದ ಗೌಪ್ಯತೆ ಕಾಪಾಡಲು ಅಂಚೆ ಮತ ಪತ್ರ ಪಡೆಯುವ ಸಿಬ್ಬಂದಿಗಳು ಫೆಸಿಲಿಟೇಷನ್ ಸೆಂಟರ್ ನಲ್ಲಿಯೇ ಮತ ಚಲಾಯಿಸಿ, ವೋಟಿಂಗ್ ಬಾಕ್ಸ್‌ನಲ್ಲಿ ಹಾಕಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


Advertisement

0 comments:

Post a Comment

 
Top