PLEASE LOGIN TO KANNADANET.COM FOR REGULAR NEWS-UPDATES

  ವಿಧಾನಸಭೆ ಚುನಾವಣೆಯ ಬಂದೋಬಸ್ತ್‌ಗಾಗಿ ಕೊಪ್ಪಳ ಜಿಲ್ಲೆಗೆ ಆಗಮಿಸಿರುವ ಅರೆ ಸೇನಾಪಡೆಯ ಶಸ್ತ್ರ ಸಜ್ಜಿತ ಯೋಧರು ಬುಧವಾರ ಕೊಪ್ಪಳ ನಗರದ ವಿವಿಧ ರಸ್ತೆಗಳಲ್ಲಿ ಪಥಸಂಚಲನ ನಡೆಸಿ, ಸಾರ್ವಜನಿಕರ ಗಮನ ಸೆಳೆದರು.
  ವಿಧಾನಸಭೆ ಚುನಾವಣೆಯಲ್ಲಿ ಸಾರ್ವಜನಿಕರಲ್ಲಿ ಭದ್ರತೆಯ ವಿಶ್ವಾಸ ಮೂಡಿಸುವ ಉದ್ದೇಶದಿಂದ ಅರೆಸೇನಾ ಪಡೆ ಯೋಧರ ಪಥಸಂಚಲನವನ್ನು ಕೊಪ್ಪಳದಲ್ಲಿ ಏರ್ಪಡಿಸಲಾಯಿತು.  ನಗರದ ಜವಾಹರ ರಸ್ತೆಯ ಟಾಂಗಾ ಸ್ಟ್ಯಾಂಡ್ ಬಳಿಯಿಂದ ಪ್ರಾರಂಭಗೊಂಡ ಯೋಧರ ಪಥಸಂಚಲನ, ವಾರಕಾರ ಗಲ್ಲಿ, ಗೌರಿ ಅಂಗಳ, ದಿಡ್ಡಿಕೇರಿ, ಗಡಿಯಾರಕಂಭ, ಗವಿಮಠ ರಸ್ತೆ ಮುಂತಾದ ಪ್ರದೇಶಗಳಲ್ಲಿ ಸಂಚರಿಸಿ, ಸಾರ್ವಜನಿಕರಲ್ಲಿ ಸಂಚಲನವನ್ನುಂಟು ಮಾಢಿತು.
  ಚುನಾವಣೆ ಸಂದರ್ಭದಲ್ಲಿ ಯಾವುದೇ ಘಟನೆಗೆ ತಕ್ಕ ಉತ್ತರ ನೀಡಲು ಸಜ್ಜಾಗಿದ್ದೇವೆ, ಮತೆದಾರರು ನಿಭೀತರಾಗಿ ಮತ ಚಲಾಯಿಸಬಹುದು ಎಂಬ ಸಂದೇಶ ಸಾರುವಂತೆ ಕೊಪ್ಪಳ ನಗರದ ವಿವಿಧ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿದ ಯೋಧರು, ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ ಯಶಸ್ವಿಯಾದರು.  
  ಡಿವೈಎಸ್‌ಪಿ ಸುರೇಶ್ ಮಸೂತಿ, ನಗರದ ಸಂಚಾರ ಪೊಲಿಸ್ ಠಾಣೆ ಇನ್ಸ್‌ಪೆಕ್ಟರ್ ರವಿ ಪುರುಷೋತ್ತಮ, ಸ್ವೀಪ್ ಕಾರ್ಯಕ್ರಮದ ಜಿಲ್ಲಾ ವೀಕ್ಷಕರಾಗಿ ನೇಮಕಗೊಂಡಿರುವ ನಾಯಕ್, ನಗರ ಪೊಲೀಸ್ ಠಾಣೆ ಸಿಪಿಐ ವಿಜಯ ಬಿರಾದಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಪಥ ಸಂಚಲನದಲ್ಲಿ ಕೇರಳ, ಜಾರ್ಖಂಡ್ ಮುಂತಾದ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿರುವ ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪಡೆಯ ಯೋಧರೊಂದಿಗೆ ಜಿಲ್ಲಾ ಮೀಸಲು ಪಡೆಯ ಪೊಲೀಸರು ಸೇರಿದಂತೆ ೫೦೦ಕ್ಕೂ ಹೆಚ್ಚು ಯೋಧರು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top