ಬೆಂಗಳೂರು ಮಾ.6: ಕನ್ನಡ ಪುಸ್ತಕ ಪ್ರಾಧಿಕಾರ 2012ರ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದು,್ದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಸೇರಿದಂತೆ ಒಟ್ಟು ಒಂಬತ್ತು ಪ್ರಶಸ್ತಿಗಳನ್ನು ಘೋಷಿ ಸಿದೆ. ಮಾ.19ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ತಿಳಿಸಿದ್ದಾರೆ.
ನಗರದಲ್ಲಿ ಇಂದು ಏರ್ಪಡಿಸಿದ್ದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಗೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’, ‘ಶೂದ್ರ ಶ್ರೀನಿವಾಸಗೆ ಡಾ.ಜೆ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’, ‘ಡಾ.ಸಿ.ಆರ್.ಚಂದ್ರಶೇಖರ್‌ಗೆ ಡಾ.ಅನುಪಮಾ ನಿರಂಜನ ವೈದ್ಯಕೀಯ ವಿಜ್ಞಾನ ಸಾಹಿತ್ಯ ಪ್ರಶಸಿ’್ತ ಮತ್ತು ಇತರ 6 ಕೃತಿಗಳಿಗೆ
‘ಪುಸ್ತಕ ಸೊಗಸು ಪ್ರಶಸ್ತಿ’ ನೀಡ ಲಾಗಿದೆ ಎಂದು ವಿವರಿಸಿದರು.
1977ರಿಂದ ಹೈದರಾಬಾದ್ ಕರ್ನಾಟಕ ಪ್ರದೇಶ ಭಾಗದಲ್ಲಿ ಸೃಜನಾತ್ಮಕ ಮತ್ತು ರಚನಾತ್ಮಕ ಸಾಹಿತ್ಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ, ಕನ್ನಡ ಪುಸ್ತಕೋದ್ಯಮ, ಕಲೆ, ವಿಜ್ಞಾನ, ಶಿಕ್ಷಣ,
ಇತ್ಯಾದಿ ಬೇರೆ ಬೇರೆ ಪ್ರಕಾರಗಳಿಗೆ ಸಂಬಂಧಿಸಿದಂತೆ 900 ಕ್ಕೂ ಹೆಚ್ಚು ಪುಸ್ತಕಗಳನ್ನು ನೀಡಿದೆ. ಪ್ರಕಾಶನವು ಜಿ.ಎಸ್.ಶಿವರುದ್ರಪ್ಪ, ಡಾ.ಎಂ.ಕಲಬುರ್ಗಿ, ಹಂಪ ನಾಗರಾಜಯ್ಯ ಮುಂತಾದವರ ಕೃತಿಗಳನ್ನು ಹೊರತಂದಿದ್ದು. ಪ್ರಾಧಿಕಾರ ಘೋಷಿಸಿರುವ ಪ್ರಶಸ್ತಿಯು 1ಲಕ್ಷ ರೂ. ಮತ್ತು ನೆನಪಿನ ಕಾಣಿಕೆಯನ್ನು ಒಳಗೊಂಡಿದೆ.
50,000 ರೂ.ಮತ್ತು ನೆನಪಿನ ಕಾಣಿಕೆಯನ್ನು ಒಳಗೊಂಡಿರುವ ಡಾ.ಜಿ.ಪಿ.ರಾಜರತ್ನಂ ಸಾಹಿತ್ಯಪರಿಚಾರಕ ಪ್ರಶಸ್ತಿ ಪಡೆದಿರುವ ‘ಶೂದ್ರ’ ಶ್ರೀನಿವಾಸ, 40 ವರ್ಷಗಳಿಂದ ಶೂದ್ರ ಪತ್ರಿಕೆಯನ್ನು ಪ್ರಕಟಿಸುತ್ತಾ, ಕನ್ನಡ ನಾಡಿನ ನೂರಾರು ಯುವ ಕವಿ, ಬರಹಗಾರರ ಕಥೆ, ಕವಿತೆ, ನಾಟಕ, ವಿಮರ್ಶೆ ಮುಂತಾದ ಬರಹಗಳನ್ನು ಪ್ರೋತ್ಸಾಹಿಸಿದ್ದಾರೆ. ಸಾಹಿತ್ಯ ಸಂಸ್ಕೃತಿಗಳ ಕುರಿತಂತೆ ಸಾಹಿತ್ಯ ಪರಿಚಾರಿಕೆ ಮಾಡುತ್ತಾ ಬಂದಿದ್ದಾರೆ.
25,000 ರೂ. ಮತ್ತು ನೆನಪಿನ ಕಾಣಿಕೆಯನ್ನು ಹೊಂದಿರುವ ಡಾ.ಅನುಪಮಾ ನಿರಂಜನ ವೈದ್ಯಕೀಯ ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿರುವ ಡಾ.ಸಿ.ಆರ್.ಚಂದ್ರಶೇಖರ್, ಖ್ಯಾತ ಮನೋವೈದ್ಯರಾಗಿ ನಿಮ್ಹಾನ್ಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಮತ್ತು ಮಾನಸಿಕ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ 151 ಪುಸ್ತಕಗಳನ್ನು ಪ್ರಕಟಿಸಿರುವ ಇವರ 40 ಕೃತಿಗಳು 5 ಮುದ್ರಣಗಳನೂ,್ನ 18 ಕೃತಿಗಳು 10ಕ್ಕೂ ಹೆಚ್ಚು ಮುದ್ರಣಗಳನು ್ನ ಕಂಡಿದ್ದು, ಡಾಸಿಆರ್ ರಚಿಸಿರುವ ಕೃತಿಗಳ 12 ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿರುವುದು ಒಂದು ರಾಷ್ಟ್ರೀಯ ದಾಖಲೆಯಾಗಿದೆ.
ಕನ್ನಡ ‘ಪುಸ್ತಕ ಸೊಗಸು’ ಮೊದಲನೆ ಬಹುಮಾನವನ್ನು ಪಲ್ಲವ ಪ್ರಕಾಶನ ಪ್ರಕಟಿಸಿರುವ, ಕನ್ನಡ ವಿವಿ ಪ್ರಾಧ್ಯಾಪಕ ರಹಮತ್ ತರೀಕೆರೆ ರಚಿಸಿರುವ, ‘ಅಮೀರ್ ಬಾಯಿ ಕರ್ನಾಟಕಿ ಹಾಡು ನಟಿಯ ಜೀವನ ಕಥನ’ ಕೃತಿ ಪಡೆದುಕೊಂಡಿದೆ. ಪ್ರಶಸ್ತಿಯು 25,000 ರೂ. ಮತ್ತು ನೆನಪಿನ ಕಾಣಿಕೆ ಒಳಗೊಂಡಿದೆ.
ರವಿಕುಮಾರ್ ಕಾಶಿ ರಚಿತ, ಅಕ್ಷರ ಪ್ರಕಾಶನ ಪ್ರಕಟಿತ ‘ಅನುಕ್ತ ದೃಶ್ಯ ಕಲೆಗಳ ಗ್ರಹಿಕೆ ಕುರಿತು ಲೇಖನ ಮಾಲೆ’ ಕೃತಿ 20,000 ರೂ. ಎರಡನೆ ಬಹುಮಾನ ಪಡೆದಿದೆ. ಜಯಂತ ಕಾಯ್ಕಿಣಿ ರಚಿತ, ಅಂಕಿತ ಪ್ರಕಾಶನದ ‘ಎಲ್ಲೋ ಮಳೆಯಾಗಿದೆ- ಸಿನಿಮಾ ಪದ್ಯಾವಳಿ’, 15,000 ರೂ. ಮೂರನೆ ಬಹುಮಾನ. ನಿತ್ಯಾನಂದ ಬಿ.ಶೆಟ್ಟಿ ರಚಿತ, ತುಮಕೂರು ವಿವಿ ಪ್ರಸಾರಾಂಗದ ‘ಮರ್ಯಾದಾ ಪುರುಷೋತ್ತಮ ಡಾ.ವಿ.ಎಸ್. ಆಚಾರ್ಯ ಸ್ಮತಿ -ಕೃತಿ’ 10,000 ರೂ. ನಾಲ್ಕನೆ ಬಹುಮಾನವನ್ನು ಪಡೆದಿದೆ. ಪ್ರೊ.ಕೆ.ಇ.ರಾಧಾಕೃಷ್ಣ ರಚಿತ ಪ್ರೊವೋಕ್ ಇಂಡಿಯಾ ಪ್ರಕಟಿತ ‘ಕಣ್ಣಕಾಡು ಕಾವ್ಯ ಪ್ರಬಂಧ’ 8,000 ರೂ. 5ನೆ ಬಹುಮಾನವನ್ನು, ಶ್ರೀವಿದ್ಯಾ ನಟರಾಜನ್ ಎಸ್.ಆನಂದ್ ರಚಿತ ನವಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿತ ‘ಭೀಮಾಯಣ ಅಸ್ಪಶ್ಯತೆಯ ಅನುಭವಗಳು’ 8,000 ರೂ. ಮಕ್ಕಳ ಬಹುಮಾನವನ್ನು ಪಡೆದಿದೆ.
0 comments:
Post a Comment