ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯಿಂದ ಸಜ್ಜುಗೊಂಡಿದ್ದು, ಮತದಾನ ವ್ಯವಸ್ಥೆಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಒಟ್ಟು ೧೬೪ ಮತಗಟ್ಟೆಗಳ ಪೈಕಿ ೨೬ ಸೂಕ್ಷ್ಮ, ೨೬- ಅತಿ ಸೂಕ್ಷ್ಮ ಮತ್ತು ೧೧೨ ಸಾಮಾನ್ಯ ಮತಗಟ್ಟೆಗಳಾಗಿವೆ. ಜಿಲ್ಲೆಯ ೧೪೬೧೯೫ ಮತದಾರರು ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಲಿದ್ದಾರೆ.
ಮತಗಟ್ಟೆ : ಕೊಪ್ಪಳ ನಗರಸಭೆಯ ೩೧ ವಾರ್ಡ್‌ಗಳಿಗೆ ೫೦ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ೦೭ ಅತಿ ಸೂಕ್ಷ್ಮ, ೦೮ ಸೂಕ್ಷ್ಮ ಮತ್ತು ೩೫ ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಗಂಗಾವತಿ ನಗರಸಭೆಯ ೩೧ ವಾರ್ಡ್ ವ್ಯಾಪ್ತಿಯಲ್ಲಿ ೮೦ ಮತಗಟ್ಟೆಗಳಿದ್ದು, ಇದರಲ್ಲಿ ೧೪ ಅತಿ ಸೂಕ್ಷ್ಮ, ೧೦ ಸೂಕ್ಷ್ಮ ಮತ್ತು ೫೬ ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ. ಕುಷ್ಟಗಿ ಪುರಸಭೆಯ ೨೩ ವಾರ್ಡ್‌ಗಳಲ್ಲಿ ೨೩ ಮತಗಟ್ಟೆಗಳಿದ್ದು, ೦೩ ಅತಿ ಸೂಕ್ಷ್ಮ, ೦೬ ಸೂಕ್ಷ್ಮ ಮತ್ತು ೧೪ ಸಾಮಾನ್ಯ ಮತಗಟ್ಟೆಗಳಾಗಿವೆ. ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ೧೧ ವಾರ್ಡ್‌ಗಳಿಗೆ ೧೧ ಮತಗಟ್ಟೆಗಳಿದ್ದು, ೦೨ ಅತಿ ಸೂಕ್ಷ್ಮ, ೦೨ ಸೂಕ್ಷ್ಮ ಮತ್ತು ೦೭ ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳಾಗಿ ಗುರುತಿಸಲಾಗಿದೆ.
ಪೊಲೀಸ್ ಬಂದೋಬಸ್ತ್ : ಪ್ರತಿ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ೦೧ ಹೆಡ್ ಕಾನ್ಸ್‌ಟೇಬಲ್, ೦೧ ಪೊಲೀಸ್ ಪೇದೆ ಜೊತೆಗೆ ೦೨ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ. ಪ್ರತಿ ಸೂಕ್ಷ್ಮ ಮತಗಟ್ಟೆಗೆ ೦೧ ಹೆಡ್ ಕಾನ್ಸ್‌ಟೇಬಲ್, ೦೧ ಪೊಲೀಸ್ ಪೇದೆ ಜೊತೆಗೆ ೦೧ ಗೃಹರಕ್ಷಕ ದಳದ ಸಿಬ್ಬಂದಿ, ಸಾಮಾನ್ಯ ಮತಗಟ್ಟೆಗೆ ೦೧ ಪೊಲೀಸ್ ಪೇದೆ ಹಾಗೂ ೦೧ ಗೃಹ ರಕ್ಷಕದಳದ ಸಿಬ್ಬಂದಿ ನಿಯೋಜಿಸಿದೆ. ಪ್ರತಿಯೊಂದು ಕ್ಲಸ್ಟರ್ ಬೂತ್‌ಗೆ ೦೧ ಎಎಸ್‌ಐ ಹಾಗೂ ೦೧ ಮಹಿಳಾ ಪೊಲೀಸ್ ಪೇದೆ/ಹೆಡ್‌ಕಾನ್ಸ್‌ಟೇಬಲ್ ನಿಯೋಜಿಸಲಾಗಿದೆ. ಚುನಾವಣೆಗಾಗಿ ಒಟ್ಟಾರೆ ಇಬ್ಬರು ಡಿವೈಎಸ್‌ಪಿ, ೦೯ ಸಿ.ಪಿ.ಐ, ೬೧ ಪಿ.ಎಸ್.ಐ/ಎ.ಎಸ್.ಐ., ೧೦೦ ಹೆಡ್‌ಕಾನ್ಸ್‌ಟೇಬಲ್, ೨೫೦ ಪೊಲೀಸ್ ಪೇದೆ/ಮಹಿಳಾ ಪೊಲೀಸ್ ಪೇದೆ, ೦೩ ಕೆ.ಎಸ್.ಆರ್.ಪಿ. ತುಕಡಿ, ೧೨ ಡಿ.ಎ.ಆರ್. ತುಕಡಿ ಜೊತೆಗೆ ೩೦೦ ಗೃಹರಕ್ಷಕದಳದವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಚುನಾವಣೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮತದಾನವು ಮಾ. ೦೭ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಿಗದಿತ ಮತಗಟ್ಟೆಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.
0 comments:
Post a Comment