PLEASE LOGIN TO KANNADANET.COM FOR REGULAR NEWS-UPDATES


    ಕೊಪ್ಪಳದ ಸಂಸ್ಥಾನ ಶ್ರೀಗವಿಮಠ ಅನ್ನ, ಅರಿವು, ಆಧ್ಯಾತ್ಮ ಇವುಗಳ ಸಂಗಮ ಕೇಂದ್ರವಾಗಿದೆ. ಬರದ ನಾಡಿನಲ್ಲಿ ಅನ್ನ ದಾಸೋಹ ಮತ್ತು ಜ್ಞಾನ ದಾಸೋಹದ ಮೂಲಕ ಜಾತಿ ಮತ ಭೇದವಿಲ್ಲದೇ ಈ ಭಾಗದ ಜನರ ಭಾಗ್ಯದ ಬಾಗಿಲಾಗಿದೆ.  ಕೊಪ್ಪಳದ ಶ್ರೀಗವಿಮಠದ ಜಾತ್ರೆ ಕೇವಲ ಧಾರ್ಮಿಕ ಜಾತ್ರೆಯಾಗಿರದೇ ವೈಚಾರಿಕ ಯಾತ್ರೆಯೂ ಸಹ ಆಗಿದೆ. ಪ್ರತಿ ಸಾರೆ ಜಾತ್ರೆಯ ವೈಶಿಷ್ಟ್ಯತೆ ಎಂದರೆ ಮಹಾದಾಸೋಹ. ಜಿಲ್ಲೆಯಾಧ್ಯಾಂತ ಜನ ತನುಮನಧನದಿಂದ ಹಣ ಹಾಗೂ ದವಸಧಾನ್ಯಗಳ ಮಹಾಪೂರವನ್ನೇ ಹರಿಸುತ್ತಾರೆ. ರಥೋತ್ಸವದಂದಿನಿಂದ ಹಿಡಿದು ಅಮವಾಸ್ಯೆಯ ತನಕ ಲಕ್ಷಾಂತರ ಭಕ್ತರು  ನಿರಂತರವಾಗಿ ಸ್ವೀಕರಿಸುವ ಅಚ್ಚುಕಟ್ಟಾದ ಪ್ರಸಾದವು  ಮಹಾದಾಸೋಹದಲ್ಲಿ ಭಕ್ತಾಧಿಗಳಿಗೆ ಲಭ್ಯವಿರುತ್ತದೆ. ಪೂಜ್ಯ ಶ್ರೀಗವಿಸಿದ್ಧೇಶ್ವರ ಶ್ರೀಗಳು ಸಮಾಜದಿಂದ ಬಂದಿರುವದನ್ನು ಸಮಾಜಕ್ಕೆ ಅರ್ಪಿಸುವಂತಹ ಮಹಾದಾಸೋಹ ವ್ಯವಸ್ಥೆಯನ್ನು ಆರಂಭಿಸಿದ್ದಾರೆ. ಅವರ ದಿವ್ಯ ಶಕ್ತಿಯ ಸಂಕಲ್ಪವೇ ಮಹಾದಾಸೋಹ. 

ಈಗಾಗಲೇ ತಾತ್ಕಾಲಿಕವಾಗಿರುವ  ಬೃಹತ್ ದಾಸೋಹ ಮಂಟಪವು ಲಕ್ಷಾಂತರ  ಭಕ್ತರ ಹಸಿವು ನೀಗಿಸುವ ಕಾಮಧೇನುವಾಗಿ ಪರಿಣಮಿಸಿ  ಕಾರ್ಯನಿರ್ವಹಿಸುತ್ತಲಿದೆ. ಮುಂದಿನ ದಿನಗಳಲ್ಲಿ  ಇದಕ್ಕೆ ಶಾಶ್ವತವಾದ ದಾಸೋಹ ಮಂಟಪದ ಅವಶ್ಯಕತೆ ಇರುತ್ತದೆ. ಪೂಜ್ಯ ಶ್ರೀಗವಿಸಿದ್ಧೇಶ್ವರ ಶ್ರೀಗಳ ಸಂಕಲ್ಪ ಶಕ್ತಿಯಿಂದಾಗಿ  ಶ್ರೀಮಠಕ್ಕ ಆಗಮಿಸುವ ಭಕ್ತರಿಗೆ ಶಾಶ್ವತವಾಗಿ ಪ್ರಸಾದ ಸ್ವೀಕರಿಸುವ ದಾಸೋಹ ಭವನದ ವ್ಯವಸ್ಥೆಯನ್ನು  ಮಾಡುವಂತಹ ಯೋಗ ಕೂಡಿಬಂದಿದೆ.  ಸರ್ಕಾರ ಹಾಗೂ ಭಕ್ತರ ಸಹಯೋಗದೊಂದಿಗೆ ೨.೫೦ ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ದಾಸೋಹಮಂಟಪ ಸಿದ್ದಗೊಳ್ಳಲಿದೆ.  ನೆಲಮಹಡಿಯಲ್ಲಿ ಏಕಕಾಲಕ್ಕೆ ೫೦೦ ಜನರು,  ಮೇಲ್ಮಹಡಿಯಲ್ಲಿ ಏಕಕಾಲಕ್ಕೆ ೫೦೦ ಜನರು ಒಟ್ಟು ೧೦೦೦ ಜನರು   ಕೂಡಿ ಪ್ರಸಾದ ಸ್ವೀಕರಿಸುವಂತಹ ಬೃಹತ್  ದಾಸೋಹ ಮಂಟಪವು ಸಿದ್ಧಗೊಳ್ಳಲಿದೆ. ಅಲ್ಲದೇ, ಕೋಲ್ಡ ಸ್ಟೋರೇಜ್,  ಸ್ಟೀಮ್ ಕುಕ್ಕಿಂಗ ವ್ಯವಸ್ಥೆಗಳು, ದವಸಧಾನ್ಯಗಳನ್ನು  ಸಂಗ್ರಹಿಸುವ ಬೃಹತ್‌ಕೋಣೆಗಳು ಮತ್ತು ಸಿಬ್ಭಂದಿಗಳಿಗೆ ಇರಲು ಬೇಕಾಗುವ ಕೋಣೆಗಳು, ಕಂಗೊಳಿಸುವ ಹಸಿರು ಹುಲ್ಲಿನ ಹಾಸಿಗೆಗಳು ಹೀಗೆ ಆಧೂನಿಕ ಸ್ಪರ್ಶ ಈ ದಾಸೋಹಮಂಟಪಕ್ಕೆ ಬಂದೊದಗಲಿದೆ. ಈ ಬೃಹತ್ ಕಟ್ಟಡದ ವಾಸ್ತು ವಿನ್ಯಾಸವನ್ನು ಬೆಂಗಳೂರಿನ ಖ್ಯಾತ ಶ್ರೀ ಸತೇಜ ಆಲೂರ ನಿರ್ವಹಿಸಲಿದ್ದಾರೆ. 

 ದಾಸೋಹ ಭವನಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಚಾಲನೆ

ಕೊಪ್ಪಳ:ಸಂಸ್ಥಾನ ಶ್ರೀಗವಿಮಠದಲ್ಲಿ ಇಂದು  ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ದಾಸೋಹ ಭವನಕ್ಕೆ  ಅಡಿಗಲ್ಲು ಹಾಕುವ  ಈ ಸಮಾರಂಭ ಜರುಗಿತು. ಪ್ರಥಮವಾಗಿ ಮಾಜಿ ಶಾಸಕರಾದ  ಬಸವರಾಜ ಹಿಟ್ನಾಳ,  ವಿ.ಜಿ.ಕೊತಬಾಳ ವಕೀಲರು,  ಹನುಮಂತಪ್ಪ ಅಂಗಡಿ,  ಫಕೀರಪ್ಪ ಗಡ್ಡಿ,  ಜುಲ್ಲು ಖಾದರ್ ಖಾದ್ರಿ  ಸಾಂಕೇತಿಕವಾಗಿ  ನೆಲಕ್ಕೆ ಗುದ್ದಲಿ ಹಾಕುವದರ ಮೂಲಕ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿದರು. ಅನಂತರ   ಎಸ್.ಅರ್.ನವಲಿಹಿರೇಮಠ, ಶ್ರೀಸುರೇಶ ದೇಸಾಯಿ, ಡಾ.ಮಲ್ಲಿಕಾರ್ಜುನ ರಾಂಪೂರು ಚಾಲನೆ ನೀಡಿದರು. ಸಭೆಯಲ್ಲಿ  ಅಂದಾನಪ್ಪ ಅಗಡಿ,   ಟಿ.ಜಿ. ಹಿರೇಮಠ ವಕೀಲರು,  ಸಂಜಯ ಕೊತಬಾಳ,  ಎಂ.ವಿ.ಪಾಟೀಲ,   ರಾಘವೇಂದ್ರ ಹಿಟ್ನಾಳ್,  ಪ್ರಸನ್ನ ಗಡಾದ,   ಬಸವರಾಜ ಬಳ್ಳೊಳ್ಳಿ,   ಪ್ರಭು ಹೆಬ್ಬಾಳ,  ಮಲ್ಲಣ್ಣ ಬಳ್ಳೊಳ್ಳಿ,  ಪ್ರದೀಪಗೌಡ ಮಾಲಿಪಾಟೀಲ,   ಎಚ್.ಎಲ್.ಹೀರೇಗೌಡ್ರ,  ಶಂಕರಗೌಡ್ರ,  ಶಾಂತಣ್ಣ ಮುದಗಲ್,  ಪ್ರಸನ್ನ ಗಡಾದ,  ಸಿದ್ದಣ್ಣ ನಾಲ್ವಾಡ,  ಬಸವರಾಜ ಪುರದ,   ಶರಣಬಸವರಾಜ ಕದ್ರಳ್ಳಿಮಠ, ಶ್ರೀಮತಿ ಸರ್ವಮಂಗಳ ಪಾಟೀಲ, ಶ್ರೀಮತಿ ಹೇಮಲತಾ ನಾಯಕ್  ಸಭೆಯಲಿ ಭಾಗವಹಿಸಿದ್ದರು. 







Advertisement

0 comments:

Post a Comment

 
Top