PLEASE LOGIN TO KANNADANET.COM FOR REGULAR NEWS-UPDATES


  ಕೊಪ್ಪಳ ನಗರಕ್ಕೆ ಪೂರೈಕೆಯಾಗುವ ತುಂಗಭದ್ರ ನದಿಯು ಬತ್ತಿ ಹೋಗಿರುವುದರಿಂದ, ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಮಿತವಾಗಿ ನೀರು ಬಳಸಿ, ನೀರಿನ ಅಪವ್ಯಯವನ್ನು ತಡೆಗಟ್ಟಬೇಕು ಎಂದು ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
  ತುಂಗಭದ್ರಾ ನದಿ ನೀರು ಬತ್ತಿ ಹೋಗಿ, ನೀರಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ.  ನಗರಸಭೆ ಕೊಳವೆ ಬಾವಿಗಳನ್ನು ಕೊರೆಯಿಸಿ, ನೀರು ಪೂರೈಕೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ.  ಆದಾಗ್ಯೂ ಮುಂದಿನ ೩-೪ ತಿಂಗಳಲ್ಲಿ ಅಥವಾ ಮಳೆಯಾಗುವವರೆಗೆ ನೀರಿನ ಅಭಾವವನ್ನು ಎದುರಿಸಬೇಕಾಗುತ್ತದೆ.  ಆದ್ದರಿಂದ ಸಾರ್ವಜನಿಕರು ನಲ್ಲಿ ನೀರನ್ನು ಪೋಲು ಮಾಡದೆ, ಅದರ ಮೌಲ್ಯವನ್ನು ಅರಿತುಕೊಂಡು, ಮಿತವಾಗಿ ಬಳಸಬೇಕು.  ಅಲ್ಲದೆ ಸಾರ್ವಜನಿಕ ನಲ್ಲಿಗಳಲ್ಲಿ ನೀರು ಅಪವ್ಯಯವಾಗುವುದನ್ನು ತಡೆಗಟ್ಟಿ, ಅದರ ಸದ್ಬಳಕೆ ಮಾಡಿಕೊಂಡು, ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement

0 comments:

Post a Comment

 
Top