ಕೊಪ್ಪಳ ಜಿಲ್ಲೆಯಲ್ಲಿನ ೦೨ ನಗರಸಭೆ, ೦೧ ಪುರಸಭೆ ಮತ್ತು ೦೧ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೯೬ ವಾರ್ಡ್‌ಗಳಿಗೆ ೧೬೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದೇ ರೀತಿ ೭೩೬೯೧ ಪುರುಷರು ಮತ್ತು ೭೨೫೦೪ ಮಹಿಳೆ ಸೇರಿ ಒಟ್ಟು ೧೪೬೧೯೫ ಮತದಾರರಿದ್ದಾರೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ೨೪೪೬೩ ಪುರುಷ, ೨೪೦೭೮ ಮಹಿಳೆ ಸೇರಿ ಒಟ್ಟು ೪೮೫೪೧ ಮತದಾರರಿದ್ದಾರೆ. ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಪುರುಷ- ೩೫೪೭೯, ಮಹಿಳೆ-೩೫೧೪೩ ಸೇರಿ ಒಟ್ಟು ೭೦೬೨೨ ಮತದಾರರು ಇದ್ದಾರೆ. ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಪುರುಷ- ೯೦೩೪, ಮಹಿಳೆ- ೮೬೭೪ ಸೇರಿದಂತೆ ಒಟ್ಟು ೧೭೭೦೮ ಮತದಾರರಿದ್ದಾರೆ. ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಪುರುಷ- ೪೭೧೫, ಮಹಿಳೆ- ೪೬೦೯ ಸೇರಿ ಒಟ್ಟು ೯೩೨೪ ಮತದಾರರು ಇದ್ದಾರೆ. ಕೊಪ್ಪಳ ನಗರಸಭೆಯ ೩೧ ವಾರ್ಡ್‌ಗಳಿಗೆ ೫೦ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಗಂಗಾವತಿ ನಗರಸಭೆಯ ೩೧ ವಾರ್ಡ್ ವ್ಯಾಪ್ತಿಯಲ್ಲಿ ೮೦ ಮತಗಟ್ಟೆಗಳಿವೆ. ಕುಷ್ಟಗಿ ಪುರಸಭೆಯ ೨೩ ವಾರ್ಡ್‌ಗಳ ಮತದಾರರಿಗಾಗಿ ೨೩ ಮತಗಟ್ಟೆಗಳಿವೆ. ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ೧೧ ವಾರ್ಡ್‌ಗಳಿಗೆ ೧೧ ಮತಗಟ್ಟೆಗಳಿವೆ. ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆಯ ಬಗ್ಗೆ ನಿಗಾ ವಹಿಸಲು ಎಂ.ಸಿ.ಸಿ. ತಂಡ ರಚಿಸಲಾಗಿದ್ದು, ಕೊಪ್ಪಳ ಮತ್ತು ಗಂಗಾವತಿ ನಗರಸಭೆಗೆ ತಲಾ ೦೫ ತಂಡಗಳನ್ನು ರಚಿಸಲಾಗಿದೆ. ಕುಷ್ಟಗಿ ಪುರಸಭೆಗೆ ೦೨ ತಂಡ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿಗೆ ೦೧ ಎಂ.ಸಿ.ಸಿ. ತಂಡ ರಚಿಸಲಾಗಿದೆ. ಪ್ರತಿ ಒಂದು ಎಂ.ಸಿ.ಸಿ. ತಂಡದಲ್ಲಿ ಒಬ್ಬರು ತಾಲೂಕು ಮಟ್ಟದ ಅಧಿಕಾರಿಗಳು ಎಂ.ಸಿ.ಸಿ. ತಂಡದ ಮುಖ್ಯಸ್ಥರಾಗಿದ್ದರೆ, ಇವರೊಂದಿಗೆ ಇಬ್ಬರು ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಪೇದೆ ಕಾರ್ಯ ನಿರ್ವಹಿಸುವರು.
ಚುನಾವಣೆ ವೆಚ್ಚ : ನಗರ ಸ್ಥಳೀಯ ಸಂಸ್ಥೆಯ ಅಭ್ಯರ್ಥಿಗಳ ಚುನಾವಣಾ ವೆಚ್ಚ ವಿವರ ಪರಿಶೀಲನೆಗೆ ಪ್ರತಿ ಸ್ಥಳೀಯ ಸಂಸ್ಥೆ ತಲಾ ೦೧ ತಂಡದಂತೆ ಒಟ್ಟು ೦೪ ತಂಡಗಳನ್ನು ರಚಿಸಲಾಗಿದೆ. ನಗರಸಭೆ ಚುನಾವಣೆಯ ಅಭ್ಯರ್ಥಿಗೆ ೨ ಲಕ್ಷ ರೂ. ಗರಿಷ್ಠ ವೆಚ್ಚ ಮಿತಿ ನಿಗದಿಪಡಿಸಲಾಗಿದ್ದರೆ, ಪುರಸಭೆ ಚುನಾವಣೆಗೆ ರೂ. ೧. ೫೦ ಲಕ್ಷ ಹಾಗೂ ಪಟ್ಟಣ ಪಂಚಾಯತಿ ಚುನಾವಣೆಗೆ ಅಭ್ಯರ್ಥಿಗೆ ರೂ. ೧ ಲಕ್ಷ ಗರಿಷ್ಠ ವೆಚ್ಚ ಮಿತಿ ನಿಗದಿಪಡಿಸಲಾಗಿದೆ.
ಚುನಾವಣೆಗೆ ಸಿಬ್ಬಂದಿ : ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತದಾನ ಪ್ರಕ್ರಿಯೆಗೆ ಒಟ್ಟು ೧೬೪ ಮತಗಟ್ಟೆಗಳಿಗಾಗಿ ೬೫೬ ಸಿಬ್ಬಂದಿ ಹಾಗೂ ೬೫ ಹೆಚ್ಚುವರಿ ಸಿಬ್ಬಂದಿ ಸೇರಿದಂತೆ ಒಟ್ಟು ೭೨೧ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗೆ ಓರ್ವ ಮತಗಟ್ಟೆ ಅಧಿಕಾರಿ ಸೇರಿದಂತೆ ಒಟ್ಟು ೦೪ ಜನ ಸಿಬ್ಬಂದಿ ನಿಯೋಜಿಸಲಾಗುವುದು. ಕೊಪ್ಪಳ ನಗರಸಭೆಯ ೫೦ ಮತಗಟ್ಟೆಗಳಿಗೆ ಒಟ್ಟು ೨೦೦ ಜನ ಸಿಬ್ಬಂದಿ, ೨೦ ಜನ ಹೆಚ್ಚುವರಿ ಸೇರಿ ಒಟ್ಟು ೨೨೦ ಸಿಬ್ಬಂದಿ ನಿಯೋಜಿಸಲಾಗುವುದು. ಗಂಗಾವತಿ ನಗರಸಭೆಯ ೮೦ ಮತಗಟ್ಟೆಗಳಿಗೆ ೩೨೦ ಸಿಬ್ಬಂದಿ ೩೨ ಹೆಚ್ಚುವರಿ ಸೇರಿ ಒಟ್ಟು ೩೫೨ ಸಿಬ್ಬಂದಿ. ಕುಷ್ಟಗಿ ಪುರಸಭೆಯ ೨೩ ಮತಗಟ್ಟೆಗಳಿಗೆ ೯೨ ಸಿಬ್ಬಂದಿ, ೦೯ ಹೆಚ್ಚುವರಿ ಸೇರಿ ಒಟ್ಟು ೧೦೧ ಸಿಬ್ಬಂದಿ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿಯ ೧೧ ಮತಗಟ್ಟೆಗಳಿಗೆ ೪೪ ಸಿಬ್ಬಂದಿ, ೦೪ ಹೆಚ್ಚುವರಿ ಸೇರಿ ಒಟ್ಟು ೪೮ ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಮಸ್ಟರಿಂಗ್/ಡಿ ಮಸ್ಟರಿಂಗ್ : ಕೊಪ್ಪಳ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಸ್ಟರಿಂಗ್, ಡಿ ಮಸ್ಟರಿಂಗ್ ಹಾಗೂ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಗಂಗಾವತಿ ನಗರಸಭೆ ಚುನಾವಣೆಗೆ ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್ ಕಾಲೇಜಿನಲ್ಲಿ ಮಸ್ಟರಿಂಗ್, ಡಿ ಮಸ್ಟರಿಂಗ್ ಹಾಗೂ ಮತಗಳ ಎಣಿಕೆ ಕಾರ್ಯ ನಡೆಯುವುದು. ಕುಷ್ಟಗಿ ಪುರಸಭೆಗೆ ಸಂಬಂಧಿಸಿದಂತೆ ಕುಷ್ಟಗಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಸ್ಟರಿಂಗ್, ಡಿ ಮಸ್ಟರಿಂಗ್ ಹಾಗೂ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಯಲಬುರ್ಗಾ ಪಟ್ಟಣ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಯಲಬುರ್ಗಾ ತಹಸಿಲ್ದಾರರ ಕಚೇರಿಯಲ್ಲಿ ಮಸ್ಟರಿಂಗ್, ಡಿ ಮಸ್ಟರಿಂಗ್ ಹಾಗೂ ಮತಗಳ ಎಣಿಕೆ ಕಾರ್ಯ ನಡೆಯಲಿದೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎಲ್ಲಾ ಸರ್ಕಾರಿ ನಿರೀಕ್ಷಣಾ ಮಂದಿರಗಳು, ಸರ್ಕಿಟ್ ಹೌಸ್‌ಗಳನ್ನು ಜಿಲ್ಲಾಧಿಕಾರಿಗಳ ಸುಪರ್ದಿಗೆ ಪಡೆಯಲಾಗಿದ್ದು, ಎಲ್ಲಾ ನಿಗಮ ಮಂಡಳಿಗಳ ಅಧ್ಯಕ್ಷರುಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳಿಗೆ ನೀಡಲಾದ ವಾಹನಗಳನ್ನು ಜಿಲ್ಲಾಧಿಕಾರಿಗಳ ವಶಕ್ಕೆ ಪಡೆಯಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
0 comments:
Post a Comment