PLEASE LOGIN TO KANNADANET.COM FOR REGULAR NEWS-UPDATES


ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ ಕೊಪ್ಪಳ ವಾರ್ಷಿಕೋತ್ಸವ ಮಾರ್ಗದರ್ಶನ, ಬೀಳ್ಕೊಡುಗೆ ಕಾರ್ಯಕ್ರಮ 
ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ ಕೊಪ್ಪಳದಲ್ಲಿ ೨೦೧೨-೧೩ ನೇ ಸಾಲಿನ ವಾರ್ಷಿಕ ದಿನಾಚರಣೆ ವಿಜೃಂಭಣೆಯಿಂದ ನೆರವೇರಿತು ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ದಿ ಸಮಿತಿಸದಸ್ಯರಾದ   ಶಕೀಲ ಅಹ್ಮದ್ ಪ್ರಸ್ತುತ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾದ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ   ಆರ್ಜುನಗೂಳಿ ಸಂಗಡಿಗರು ಜನಪದ ಹಾಡುಗಳನ್ನು ಹಾಡುತ್ತ, ಜಾನಪದ ಸಾಹಿತ್ಯದ ಮಹತ್ವವನ್ನು ಸೊಗಸನ್ನ ಸ್ವಾರಸ್ಯಕಕರವಾಗಿ ವಿವರಿಸಿದರು ಜಾನಪದ ಸಾಹಿತ್ಯದ ಹೆಸರಿನಲ್ಲಿ ಬರುವ ಅನೇಕ ಕ್ಯಾಸೆಟ್ ಹಾಡುಗಳು ಕೇವಲ ಜನಪ್ರೀಯ ಸಾಹಿತ್ಯದ ಹೆಸರಿನಲ್ಲಿ ಬರುವ ಅನೇಕ ಕ್ಯಾಸೆಟ್ ಹಾಡುಗಳು ಕೇವಲ ಜನಪ್ರೀಯ ಹಾಡುಗಳಷ್ಟೆ ಅವುಗಳಲ್ಲಿ ಜಾನಪದ ಸಾಹಿತ್ಯದ ಶ್ರೀಮಂತಿಕೆ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು ವಿದ್ಯಾರ್ಥಿನಿಯರು ನಾಡಿನ ಶ್ರೀಮಂತ ಸಾಂಸ್ಕೃತಿಯನ್ನು ಸಾಹಿತ್ಯದ ಮೂಲಕ ಅರಿತುಕೊಳ್ಳಬೇಕು ಎಂದು ಹೇಳುತ್ತಾ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ಮಾಡಿದರು. 
ರಾಜಶೇಖರ ಪಾಟೀಲ ಕೊಪ್ಪಳ ಜಿಲ್ಲಾ ಪ.ಪೂ.ಕಾಲೇಜುಗಳ ಉಪನ್ಯಾಸಕರ ಸಂಘ ಇವರು ಮತ್ತು ಶಂಶುದ್ದೀನ್ ಪ್ರಾಚಾರ್ಯರು ಸ.ಪ.ಪೂ. ಕಾಲೇಜು ಹಲಗೇರಿ ಇವರು ವಿದ್ಯಾರ್ಥಿನಿಯರಿಗೆ ಪರೀಕ್ಷೆಗಳನ್ನು ಬದುಕನ್ನು ಎದುರಿಸುವ ಮಾರ್ಗಗಳನ್ನು ತಿಳಿಸಿದರು. 
ಬಾಲಕಿಯರ ಕಾಲೇಜ ಪ್ರಾಚಾರ್ಯರು ಹಾಗೂ ಕೊಪ್ಪಳ ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಡಾ.ವಿ.ಬಿ.ರಡ್ಡೇರ್ ಕಾರ್ಯಕ್ರಮದ ಅಧ್ಯಕ್ಷಿಯ ಭಾಷಣವನ್ನು ಮಾಡುತ್ತ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಂಜೀವಿನಿ ಇದ್ದಂತೆ ಕಥೆಯಲ್ಲಿ ಬರುವ ಸಂಜೀವಿನಿ ವಿದ್ಯೆಯನ್ನು ಪಡೆಯುವ ದರತ್ತ ಇರುವ ಏಕಾಗ್ರತೆ, ಎಲ್ಲಿ ವಿದ್ಯಾರ್ಥಿಗಳಲ್ಲಿರಬೇಕೆಂದು ತಿಳಿಸಿದರು. 
ಡಿ.ಎಂ ಬಡಿಗೇರ ಸ್ವಾತಿಸಿದರು ಶ್ರೀ ಎಸ್.ವಿ.ಮೇಳಿ, ಶ್ರೀಮತಿ ಲಲಿತಾ ಅಂಗಡಿ ನಿರೂಪಿಸಿದರು ಸೌಭಾಗ್ಯ.ಎಸ್.ಎಂ.ಅಂಗಡಿ ಲಿಂಗಣ್ಣ  ಮೇಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 'ಮಾವಕೊಡಿಸಿದ ಕೋಟು' , 'ಮನುಷ್ಯನ ಬೆಲೆ' ಕಿರು ನಾಟಕಗಳು ಗಮನ ಸೆಳೆದವು ಶ್ರೀ ಎಸ್.ಜಿ.ಹೊಸಭಾವಿ ವರಲಕ್ಷ್ಮಿ ಚಿಂತಪಲ್ಲಿ ಆಯ್.ಎಂ ಚಿಕರಡ್ಡಿ, ಭೂಸನೂರಮಠ, ಎಸ್.ಎಮ್.ಸೋಮನಗೌಡ ಪಾಟೀಲ, ಡಿ.ಎಂ ಬಡಿಗೇರ, ಎಲ್ಲಾ ಉಪನ್ಯಾಸಕರು ಭಾಗವಹಿಸಿದ್ದರು. 



Advertisement

0 comments:

Post a Comment

 
Top