- ಸಂಗಣ್ಣ ಕರಡಿ
ಕೊಪ್ಪಳ ವಿಧಾನಸಭಾ ಕ್ಷೇತ್ರಗಳ ೧೦ ದೇವಸ್ಥಾನಗಳಿಗೆ ತಲಾ ೨ ಲಕ್ಷ ರೂ.ಗಳಂತೆ ಒಟ್ಟು ೨೦ ಲಕ್ಷ ರೂ.ಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
ಕೊಪ್ಪಳ ಕ್ಷೇತ್ರ ವ್ಯಾಪ್ತಿಯ ೧೦ ದೇವಾಲಯಗಳ ಜೀರ್ಣೋದ್ಧಾರ, ಅಭಿವೃದ್ಧಿ ಹಾಗೂ ದುರಸ್ತಿ ಕಾರ್ಯಗಳಿಗಾಗಿ ತಲಾ ೨ ಲಕ್ಷ ರೂ.ಗಳಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಹುಲಿಗಿಯ ಈಶ್ವರ ದೇವಸ್ಥಾನ, ಬೆಳಗಟ್ಟ ಗ್ರಾಮದ ಕಲ್ಲಿನಾಥ ದೇವಾಲಯ, ಲಾಚನಕೇರಿಯ ಚನ್ನಪ್ಪ ದೇವಸ್ಥಾನ, ಗೊಂಡಬಾಳ ಗ್ರಾಮದ ನಿಮಿಷಾಂಭ ದೇವಸ್ಥಾನ, ಮುನಿರಾಬಾದ್ ಡ್ಯಾಂನ ಕಲಕಿ ಮಾರಮ್ಮ ದೇವಸ್ಥಾನ, ಗುಡಗೇರಿಯ ಈಶ್ವರ ದೇವಸ್ಥಾನ, ಕೊಪ್ಪಳ ಪ್ರಗತಿ ನಗರದ ಈಶ್ವರ ದೇವಸ್ಥಾನ, ಮುತ್ತೂರು ಗ್ರಾಮದ ಮದಗಮ್ಮ ದೇವಾಲಯ, ಹೊಸ ಶಿವಪುರದ ಗಾಳೆಮ್ಮ ದೇವಸ್ಥಾನ ಹಾಗೂ ಮಹಮ್ಮದ್ ನಗರದ ಪಾಂಡುರಂಗ ದೇವಾಲಯಗಳಿಗೆ ತಲಾ ೨ ಲಕ್ಷ ರೂ.ಗಳಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಅನುದಾನ ಬಿಡುಗಡೆ ಮಾಡಿದ್ದಕ್ಕಾಗಿ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಮುಜರಾಯಿ ಸಚಿವರು, ಉನ್ನತ ಅಧಿಕಾರಿಗಳಿಗೆ ಶಾಸಕ ಸಂಗಣ್ಣ ಕರಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
0 comments:
Post a Comment