: ಕೊಪ್ಪಳ ಜಿಲ್ಲಾ ಪಂಚಾಯತಿಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಿ.ಕೆ. ರವಿ ಅವರು ಪುನಃ ಅಧಿಕಾರ ವಹಿಸಿಕೊಂಡಿದ್ದಾರೆ.
ಜಿ.ಪಂ. ಸಿಇಓ ಆಗಿದ್ದ ಎಸ್.ರಾಜಾರಾಂ ಅವರ ವರ್ಗಾವಣೆಗೊಳಿಸಿ, ಅವರ ಸ್ಥಾನಕ್ಕೆ ಡಿ.ಕೆ. ರವಿ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಕೆ.ಎ.ಟಿ. ತಡೆಯಾಜ್ಞೆಯಂತೆ ಎಸ್. ರಾಜಾರಾಂ ಅವರು ಸಿಇಓ ಹುದ್ದೆಯಲ್ಲಿ ಮುಂದುವರೆದಿದ್ದರು. ಇದೀಗ ಸರ್ಕಾರದ ಸೂಚನೆಯಂತೆ ಎಸ್. ರಾಜಾರಾಂ ಅವರು ಡಿ.ಕೆ. ರವಿ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದು, ಜಿ.ಪಂ. ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಿ.ಕೆ. ರವಿ ಅವರು ಫೆ. ೧೫ ರಂದು ಪುನಃ ಅಧಿಕಾರ ವಹಿಸಿಕೊಂಡಿದ್ದಾರೆ.
0 comments:
Post a Comment