ಮಲಹೊರುವ ಪದ್ಧತಿಯನ್ನು ನಿಷೇಧಿಸಲಾಗಿದ್ದು, ಇದನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ ಅವರು ಎಚ್ಚರಿಕೆ ನೀಡಿದ್ದಾರೆ.
ಎಂಪ್ಲಾಯ್‌ಮೆಂಟ್ ಆಫ್ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅಂಡ್ ಕನ್ಸ್‌ಟ್ರಕ್ಷನ್ ಆಫ್ ಡ್ರೈಲ್ಯಾಟ್ರಿನ್ (ಪ್ರಾಹಿಬಿಷನ್) ಅಕ್ಟ್ ೧೯೯೩ ರ ರೀತ್ಯ ಸೆಪ್ಟಿಕ್ ಟ್ಯಾಂಕ್ ಹಾಗೂ ಒಳಚರಂಡಿಗಳ ಸ್ವಚ್ಚತೆಯನ್ನು ಕೆಲಸಗಾರರಿಂದ ಮಾಡಿಸುವುದು ಕ್ರಿಮಿನಲ್ ಅಪರಾದವಾಗಿದ್ದು, ಕಠಿಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಸೆಪ್ಟಿಕ್ ಟ್ಯಾಂಕ್ ಹಾಗೂ ಒಳಚರಂಡಿಗಳ ಸ್ವಚ್ಚಗೊಳಿಸಲು ಈಗ ಆಧುನಿಕ ಯಂತ್ರಗಳು ಲಭ್ಯವಿದ್ದು ಅದನ್ನು ಸಾರ್ವಜನಿಕರು ಬಳಸಿಕೊಳ್ಳಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವೀನಿ ತಿಳಿಸಿದ್ದಾರೆ.
0 comments:
Post a Comment