ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ಪ್ರತಿ ಅಮವಾಸ್ಯೆಯ ಅಂಗವಾಗಿ ಜರುಗುವ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮವು ಈ ಸಾರೆ ೪೧ ನೇಯ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮವು ದಿನಾಂಕ ೧೦-೦೨-೨೦೧೩ ರ ಅಮವಾಸ್ಯೆಯಂದು ರವಿವಾರ ಸಾಯಂಕಾಲ ೬-೩೦ ಗಂಟೆಗೆ ಶ್ರೀಮಠದ ಕೆರೆಯ ದಡದಲ್ಲಿ ಜರುಗುವದು.ಮುಖ್ಯ ಅತಿಥಿಗಳಾಗಿ ಶರಣೆ ಸಿಂಧೂತಾಯಿ ಕಾಡಾದಿ ಸೊಲ್ಲಾಪುರ ಆಗಮಿಸಲಿದ್ದಾರೆ. ನೇತೃತ್ವವನ್ನು ಶ್ರೀಶಂಭುಲಿಂಗದೇವರು ಶ್ರೀಬಸವರಾಜೇಂದ್ರ ಶಿವಯೋಗಿಗಳ ವಿರಕ್ತಮಠ, ಯತ್ನಟ್ಟಿ ವಹಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಕು.ಪ್ರಗತಿ ಎ.ಪಿ ಅವರಿಂದ ಸ್ಯಾಕ್ಸೋಪೋನ್ ಸಂಗೀತ ಸೇವೆಯಿದೆ. ಕಾರ್ಯಕ್ರಮದ ಭಕ್ತಿಸೇವೆಯನ್ನು ದಿ. ವೀರಪ್ಪ ರುದ್ರಪ್ಪ ಕೊಪ್ಪಳ ಇವರ ಸ್ಮರಣಾರ್ಥ ಶ್ರೀಮತಿ ಚನ್ನವೀರವ್ವ ವೀರಪ್ಪ ಕೊಪ್ಪಳ ಹಾಗೂ ಮಕ್ಕಳು ವಹಿಸಿರುತ್ತಾರೆ.
Home
»
»Unlabelled
» ದಿನಾಂಕ ೧೦ ರಂದು ಬೆಳಕಿನಡೆಗೆ
Subscribe to:
Post Comments (Atom)
0 comments:
Post a Comment