ಕೊಪ್ಪಳ : ಶ್ರೀಗವಿಮಠದ ಭಕ್ತರಿಗೆ ಬರವಿಲ್ಲ. ಹೌದು ಈ ಮಾತು ಅಕ್ಷರಶ: ಸತ್ಯ. ಶ್ರೀಗವಿಮಠದ ಜಾತ್ರೆಯ ಅಂಗವಾಗಿ ಜರುಗುತ್ತಿರುವ ಮಹಾದಾಸೋಹದಲ್ಲಿ ರಥೋತ್ಸವದಂದಿನಿಂದ ಅಮವಾಸ್ಯೆಯವರೆಗೂ ನಿರಂತರವಾಗಿ ಭಕ್ತಾಧಿಗಳಿಗೆ ದಾಸೋಹವಿರುತ್ತದೆ. ಪ್ರತಿನಿತ್ಯ ಭಕ್ತಾಧಿಗಳಿಂದ ದಾಸೋಹಕ್ಕೆ ಬಗೆಬಗೆಯಾಗಿ ಮಾದಲಿ, ಬೂಂದಿ, ರಾಗುದಾಸ, ಹಾಲು,ತುಪ್ಪ, ರೊಟ್ಟಿ, ಅನ್ನ, ತರಕಾರಿ ಹೀಗೆ ಒಂದೊಂದು ವೈವಿಧ್ಯಮಯವಾದ ವಸ್ತುಗಳು ದಾಸೋಹಕ್ಕಾಗಿ ಬರುತ್ತಲೇ ಇವೆ. ರಥೋತ್ಸವದ ಎಳೆಂಟು ದಿವಸಗಳ ನಂತರ ಈಗಲೂ ಪ್ರತಿನಿತ್ಯಲು ೩೦ ಸಾವಿರಕ್ಕಿಂತಲೂ ಹೆಚ್ಚೂ ಭಕ್ತರು ಈ ದಾಸೋಹದ ಸವಿ ಸವಿಯುತ್ತಿದ್ದಾರೆ. ಸ್ವತ: ಪೂಜ್ಯ ಶ್ರೀಗಳೇ ಮುಂದೆ ನಿಂತುಕೊಂಡು ಪ್ರಸಾದ ವಿತರಣೆಯನ್ನು ಮಾಡುತ್ತಿದ್ದೂ, ವ್ಯವಸ್ಥೆ ಅಚ್ಚುಕಟ್ಟಾಗಿದೆ. ಯಾವುದೇ ತೊಂದರೆಗಳಿಲ್ಲದೇ ಭಕ್ತಾಧಿಗಳು ಪ್ರಸಾದ ಸವಿಯುವಂತ ವ್ಯವಸ್ಥೆಯನ್ನು ಪೂಜ್ಯ ಶ್ರೀಗಳು ಮಾಡಿದ್ದಾರೆ. ಈ ಸಾರೆಯ ಅಮವಾಸ್ಯೆಯಂದು ಭಕ್ತಾಧಿಗಳಗೆ ವಿಶೇಷವಾಗಿ ಗೋಧಿಹುಗ್ಗಿ ದೊರೆಯಲಿದೆ. ಜೊತೆಗೆ ರೊಟ್ಟಿ, ಅನ್ನ, ಸಾಂಭಾರ ಸಹ ಅಂದು ಭಕ್ತಾಧಿಗಳಿಗೆ ಲಭ್ಯವಿರುತ್ತದೆ
Home
»
»Unlabelled
» ಶ್ರೀಗವಿಮಠದ ಭಕ್ತರಿಗೆ ಬರವಿಲ್ಲ
Subscribe to:
Post Comments (Atom)
0 comments:
Post a Comment