ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದಿಂದ ವಿವಿಧ ನಗರ, ಪಟ್ಟಣಗಳಿಗೆ ಕಡಿಮೆ ಮೊತ್ತದಲ್ಲಿ ಪ್ರಯಾಣ ಕೈಗೊಳ್ಳಬಹುದಾದ ದೈನಿಕ ಪಾಸ್ ವ್ಯವಸ್ಥೆಯನ್ನು ಫೆ. ೨೩ ರಿಂದ ಜಾರಿಗೊಳಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಮಿನುಲ್ಲಾ ಸಾಹೇಬ್ ಅವರು ತಿಳಿಸಿದ್ದಾರೆ.
ದೈನಿಕ ಪಾಸ್ (ದಿನದ ಪಾಸ್) ವ್ಯವಸ್ಥೆಯಿಂದ ಕೊಪ್ಪಳ, ಗಂಗಾವತಿ, ಗದಗ, ಕುಷ್ಟಗಿ, ಇಲಕಲ್, ಸಿಂಧನೂರು ಪಟ್ಟಣಗಳಿಗೆ ಕಡಿಮೆ ದರದಲ್ಲಿ ಪ್ರಯಾಣಿಸಬಹುದಾಗಿದೆ. ಕೊಪ್ಪಳ-ಗಂಗಾವತಿ ಮಾರ್ಗಕ್ಕೆ ಸದ್ಯ ಒಮ್ಮೆ ಹೋಗಿ ಬರಲು ರೂ. ೮೦ ಗಳ ವೆಚ್ಚವಾಗಲಿದ್ದು, ದೈನಿಕ ಪಾಸ್ ಪಡೆದಲ್ಲಿ ಈ ಮಾರ್ಗಕ್ಕೆ ಕೇವಲ ೭೦ ರೂ.ಗಳಲ್ಲಿ ಪ್ರಯಾಣಿಸಬಹುದಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ೧೦ ರೂ.ಗಳ ಉಳಿತಾಯವಾಗಲಿದೆ. ವಿವಿಧ ಮಾರ್ಗಗಳಿಗೆ ನಿಗದಿಪಡಿಸಿರುವ ದೈನಿಕ ಪಾಸ್ ದರ ಇಂತಿದೆ. ಕೊಪ್ಪಳ-ಗದಗ-ರೂ. ೮೦. ಕೊಪ್ಪಳ-ಕುಷ್ಟಗಿ-ರೂ. ೬೫. ಕುಷ್ಟಗಿ-ಇಲಕಲ್- ರೂ. ೫೫. ಗಂಗಾವತಿ-ಸಿಂಧನೂರು- ರೂ. ೬೫ ಗಳನ್ನು ನಿಗದಿಪಡಿಸಲಾಗಿದೆ. ಈ ಮಾರ್ಗಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಪ್ರೋತ್ಸಾಹಿಸುವುದಕ್ಕಾಗಿ ದೈನಿಕ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಮಿನುಲ್ಲಾ ಸಾಹೇಬ್ ತಿಳಿಸಿದ್ದಾರೆ.
0 comments:
Post a Comment