ಕೊಪ್ಪಳ,ಫೆ.೧೫: ಸ್ಥಳೀಯ ಚುನಾವಣೆ ಘೋಷಣೆ ನಿಮಿತ್ಯ ಪಕ್ಷದ ಮುಖಂಡರ ಹಾಗೂ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಕೆ.ಎಂ.ಸಯ್ಯದ್‌ರವರ ನೇತೃತ್ವದಲ್ಲಿ ಇದೇ ದಿ. ೧೬ ನಗರದ ಬಸವ ವೃತ್ತದಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಕರೆಯಲಾಗಿದೆ ಎಂದು ಬಿಎಸ್‌ಆರ್ ಕಾಂಗ್ರೆಸ್ ಮಾಧ್ಯಮ ವಕ್ತಾರ ಎಸ್.ಜಿ. ಕಟ್ಟಿಮನಿ ತಿಳಿಸಿದ್ದಾರೆ.
ಪಕ್ಷದ ಎಲ್ಲಾ ಮುಖಂಡರು ಪದಾಧಿಕಾರಿಗಳು ಹಾಗೂ ಪ್ರಾಮಾಣಿಕ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ಥಳೀಯ ಚುನಾವಣೆಯ ರೂಪರೇಷಗಳ ಸಭೆಯಲ್ಲಿ ಚರ್ಚಿಸುವ ಜೊತೆಗೆ ತಮ್ಮ ಸಲಹೆ ಸೂಚನೆಗಳನ್ನು ನಿಡಬೇಕು. ಅಲ್ಲದೇ ಆಕಾಂಕ್ಷಿತ ಅಭ್ಯರ್ಥಿಗಳು ಇದೇ ವೇಳೆ ತಮ್ಮ ಆಕಾಂಕ್ಷಿತ ಅಭ್ಯರ್ಥಿಯ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಸಭೆಯ ನಡವಳಿPಯಂತೆ ಬದ್ಧರಾಗಿರುವಂತೆ ತಿಳಿಸಲಾಗಿದೆ.
ಪೂರ್ವಭಾವಿ ಸಭೆಯಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಿಬೂಬ ಮುಲ್ಲಾ, ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ್, ಅಲ್ಪಸಂಖ್ಯಾತರ ಘಟಕದ ತಾಲೂಕಾಧ್ಯಕ್ಷ ಇಮಾಮ್‌ಸಾಬ ಬಿಜಾಪುರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕುಮಾರಿ ಲಕ್ಷ್ಮೀಪ್ರೀಯಾ, ಜೆ.ಶಾಂತಾ ಸೇರಿದಂತೆ ಇತರ ಪದಾಧಿಕಾರಿಗಳು ಹಿರಿಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ
0 comments:
Post a Comment