ಕೊಪ್ಪಳ: ವಿದ್ಯಾರ್ಥಿಗಳು ಮಾನಸಿಕವಾಗಿ ಸೋಲದೆ ಏಕಾಗ್ರತೆಯನ್ನು ಕ್ರೋಡಿಕರಿಸಿ ತಮ್ಮಲ್ಲಿರುವಂತ ಮೌಲ್ಯವನ್ನು ಜಗತ್ತಿಗೆ ತೋರಿಸಬೇಕು. ವಿದ್ಯಾರ್ಥಿಗಳಲ್ಲಿ ಅಡಗಿರುವಂತ ಅಪಾರವಾದ ಶಕ್ತಿಯನ್ನು ಅನವಸ್ಯಕವಾದ ಕೆಲಸಕಾರ್ಯಗಳಲ್ಲಿ ಅಪವ್ಯಯ ಮಾಡಬಾರದು ಎಂದು ಕಾತರಕಿ ಗುಡ್ಲಾನೂರ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಸುಮತಿ ಹಿರೇಮಠ ಹೇಳಿದರು. ಅವರು ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ದ್ವಿತಿಯ ಪಿ.ಯು.ಸಿ ವಿದ್ಯಾರ್ಥಿಗಳ ಬಿಳಡುವ ಸಮಾರಂಭ ಮತ್ತು ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಕವಿ ಗೋಪಾಲ ಕೃಷ್ಣ ಅಡಿಗರು ಹೇಳಿದಂತೆ ಚಿತ್ತಕ್ಕೆ ಹುತ್ತವ ಕಟ್ಟಿಕೊಳ್ಳಬೇಕು. ಏಕಾಗ್ರತೆಯಿಂದ ಮಹಾನ್ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಒಳ್ಳೆಯ ರೈತನಾಗಬೇಕಾದರೆ, ಉತ್ತಮ ರಾಜಕೀಯ ವ್ಯಕ್ತಿಯಾಗಬೇಕಾದರೆ, ಮತ್ತು ಡಾಕ್ಟರ್, ಇಂಜನೀಯರ, ಡಿಸಿ, ಇನ್ನಿತರ ಹುದ್ದೆಗಳಲ್ಲಿ ಉನ್ನತ ಅಧಿಕಾರಿಯಾಗಬೇಕಾದರೆ ಎಲ್ಲಾ ಕನಸಿಗೂ ಒಂದೆ ಡೋಣಿ ಶಿಕ್ಷಣ ಆದ್ದರಿಂದ ಹೈದ್ರಾಬಾದ್ ಕರ್ನಾಟಕಕ್ಕೆ ವಿಷೇಶ ಸ್ಥಾನ ಮಾನ ದೊರೆತ ಈ ಸಂದರ್ಬದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಈ ಪ್ರದೇಶದ ಅಭಿವೃದಿಗಾಗಿ ಇಚ್ಚಾಶಕ್ತ್ತಿ ಬೆಳೆಸಿಕೊಳ್ಳಬೇಕೆಂದರು. ಕಾಲೇಜು ಸುದಾರಣಾ ಸಮಿತಿ ಸದಸ್ಯ ಮಲ್ಲಣ್ಣ ಗುಗ್ಗರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಆತ್ಮ ವಿಶ್ವಾಸ ಬೆಳೆಸಿಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಗ್ರಾಮ ಮತ್ತು ಜಿಲ್ಲೆಗೆ ಕೀರ್ತಿತರಬೇಕೆಂದರು. ಗ್ರಾ. ಪಂ ಅಧ್ಯಕ್ಷ ಯಲ್ಲನಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಮತ್ತು ಗುರುಗಳ ಸೂಕ್ತ ಮಾರ್ಗದರ್ಶನ ಪಡೆದು ಸರಿಯಾಗಿ ಅಧ್ಯಾಯನ ಮಾಡಿ ಯಶಸ್ಸು ಪಡೆಯಬೇಕೆಂದರು.
ಈ ಸಂದರ್ಬದಲ್ಲಿ ಗ್ರಾ.ಪಂ ಸದಸ್ಯ ಮರ್ದಾನ ಸಾಬ, ಬಸವರಾಜ ಅಂಗಡಿ, ಶಂಕರಗೌಡ ನಾಗನಗೌಡ, ಬಸವರಾಜ ಎಲ್.ಐ.ಸಿ ಎಜೆಂಟರ್, ಅಂದಪ್ಪ , ಯಂಕನಗೌಡ ಪೋಲಿಸಪಾಟೀಲ, ಜಂತ್ಲಿ ಶಿಕ್ಷಕರು, ಶ್ರೀನಿವಾಸ ಶಿಕ್ಷಕರು ಇತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಎ. ವಿ. ಉಪಾಧ್ಯಾಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ರೇಣುಕಾ ಸ್ವಾಗತಿಸಿದರು. ಶ್ರಿಪಾಲ್ ಒಂದಿಸಿದರು.
0 comments:
Post a Comment