ಸ್ಥಳೀಯ ಸಂಸ್ಥೆ ಚುನಾವಣೆ :
ಕೊಪ್ಪಳ ಫೆ.೨೨ : ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತಿಗಳ ಸದಸ್ಯ ಸ್ಥಾನಗಳಿಗಾಗಿ ವಿವಿಧ ಪಕ್ಷಗಳು ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು ೨೬೮ ನಾಮಪತ್ರಗಳು ಸಲ್ಲಿಕೆಯಾಗಿವೆ.
ಕೊಪ್ಪಳ ನಗರಸಭೆ- ೧೧೮, ಗಂಗಾವತಿ ನಗರಸಭೆ- ೫೫, ಕುಷ್ಟಗಿ ಪುರಸಭೆ- ೬೫ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿಗೆ- ೩೦ ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ.
ಕೊಪ್ಪಳ ನಗರಸಭೆಯ ೩೧ ಸದಸ್ಯ ಸ್ಥಾನಕ್ಕಾಗಿ ಇಂದು ಕಾಂಗ್ರೆಸ್‌ನಿಂದ ೨೮, ಬಿಜೆಪಿ-೩೨, ಜೆಡಿಎಸ್-೧೯, ಸಿಪಿಐ(ಎಂ)-೦೧, ಸ್ವತಂತ್ರರು ೨೩, ಬಿ.ಎಸ್.ಆರ್.-೧೩, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೦೨ ಸೇರಿದಂತೆ ಒಟ್ಟು ೧೧೮ ನಾಮಪತ್ರಗಳು ಸಲ್ಲಿಕೆಯಾಗಿವೆ. ಗಂಗಾವತಿ ನಗರಸಭೆಯ ೩೧ ಸದಸ್ಯ ಸ್ಥಾನಗಳಿಗಾಗಿ ಕಾಂಗ್ರೆಸ್-೧೭, ಬಿಜೆಪಿ-೧೫, ಜೆಡಿಎಸ್-೦೭, ಸಿಪಿಐ(ಎಂ)-೦೧, ಕೆಜೆಪಿ-೦೨, ಬಿ.ಎಸ್.ಆರ್- ೦೬, ಸ್ವತಂತ್ರರು- ೦೭ ಸೇರಿದಂತೆ ಒಟ್ಟು ೫೫ ನಾಮಪತ್ರಗಳು ಸಲ್ಲಿಕೆಯಾಗಿವೆ. ಕುಷ್ಟಗಿ ಪುರಸಭೆಯ ೨೩ ಸದಸ್ಯ ಸ್ಥಾನಗಳಿಗಾಗಿ ಕಾಂಗ್ರೆಸ್-೧೯, ಬಿಜೆಪಿ-೧೦, ಜೆಡಿಎಸ್-೧೪, ಬಿ.ಎಸ್.ಆರ್.-೦೫ ಮತ್ತು ಸ್ವತಂತ್ರ ಅಭ್ಯರ್ಥಿಗಳ ೧೭ ಸೇರಿದಂತೆ ಒಟ್ಟು ೬೫ ನಾಮಪತ್ರಗಳು ಸಲ್ಲಿಕೆಯಾಗಿವೆ. ಯಲಬುರ್ಗಾ ಪಟ್ಟಣ ಪಂಚಾಯತಿಯ ೧೧ ಸದಸ್ಯ ಸ್ಥಾನಗಳಿಗಾಗಿ ಕಾಂಗ್ರೆಸ್- ೦೬, ಬಿಜೆಪಿ- ೦೫, ಜೆಡಿಎಸ್-೦೪, ಬಿ.ಎಸ್.ಆರ್-೧೪ ಮತ್ತು ಸ್ವತಂತ್ರರು- ೦೧ ನಾಮಪತ್ರ ಸೇರಿದಂತೆ ಒಟ್ಟು ೩೦ ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಶನಿವಾರ ಫೆಬ್ರುವರಿ ೨೩ ಕೊನೆಯ ದಿನವಾಗಿದೆ. ಫೆ. ೨೫ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಫೆ. ೨೭ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
0 comments:
Post a Comment