PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,ಫೆ,೧೩: ನಗರದ ಬನ್ನಿಕಟ್ಟಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಸಂಘದಿಂದ ವ್ಯಂಗ್ಯಚಿತ್ರ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಇತ್ತೀಚಿಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಕರಿಬಸಪ್ಪ ಪಲ್ಲೆದ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಚಿತ್ರಕಲಾ ಸಂಘದ ಅಧ್ಯಕ್ಷ ಮಹಾಂತೇಶ ಬಳಿಗಾರ, ಆದರ್ಶ ಶಾಲೆಯ ಮುಖ್ಯಗುರು ಮಾಹಾಂತೇಶ, ಜಿಲ್ಲಾ ಚಿತ್ರಕಲಾ ಸಂಘದ ಕಾರ್ಯದರ್ಶಿ ಸತ್ಯನಾರಾಯಣ ಕುಲಕರ್ಣಿ ಆಗಮಿಸಿದ್ದರು.
ವ್ಯಂಗ್ಯಚಿತ್ರ ಕಲಾವಿದ ಬದರಿ ಪುರೋಹಿತ ಕಾರ್ಯಕ್ರಮದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಮತ್ತು ವಿದ್ಯಾರ್ಥಿಗಳೊಂದಿಗೆ ಚಿತ್ರ ಸಂವಾದ ನಡೆಸಿಕೊಟ್ಟರು.
ಶಾಲೆಯ ಚಿತ್ರಕಲಾ ಶಿಕ್ಷಕರಾದ ವೀರಯ್ಯ ಒಂಟಿಗೋಡಮಠ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವ್ಯಂಗ್ಯಚಿತ್ರ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸಮಾಡುತ್ತವೆ ಆ ಗೆರೆಗಳಿಗೆ ಅಂತಹ ಶಕ್ತಿಇದೆ ಅಂತಹ ಶಕ್ತಿಯುತ ಗೆರೆಗಳನ್ನು ಬದರಿ ಪುರೋಹಿತ ಚಿತ್ರಗಳಲ್ಲಿ ಕಾಣಬಹುದು ಎಂದರು.
ಜಿಲ್ಲಾ ಚಿತ್ರಕಲಾ ಸಂಘದ ಅಧ್ಯಕ್ಷ ಮಹಾಂತೇಶ ಬಳಿಗಾರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಅವರು ಚಿತ್ರಕಲೆ ವಿಶ್ವಭಾಷೆ ಭಾಷೆ,ಲಿಪಿಗಳ ಪರಿಚಯ ಇಲ್ಲದ ಮಾನವ ಮೊದಲು ಕಲಿತಿದ್ದು ಚಿತ್ರಬಿಡಿಸುವದನ್ನು ಇಂತಹ ಕಲೆಯಲ್ಲಿ ವ್ಯಂಗ್ಯಚಿತ್ರ ವಿಶಿಷ್ಟವಾದ ಕಲೆ ಎಂದರು.
ಜಿಲ್ಲಾ ಚಿತ್ರಕಲಾ ಸಂಘದ ಕಾರ್ಯದರ್ಶಿ ಸತ್ಯನಾರಾಯಣ ಮಾತನಾಡುತ್ತಾ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡ ಮುಖ್ಯಗುರು,ಚಿತ್ರಕಲಾ ಶಿಕ್ಷಕ ಶಾಲಾ ಸಿಬ್ಬಂದಿಗೆ ವಂದಿಸಿದರು.
ಶಿಕ್ಷಕ ರಾಮರೆಡ್ಡಿ ಸ್ವಾಗತಿಸಿದರು, ಶಿಕ್ಷಕಿ ಶ್ರೀಮತಿ ಮಂಜುಳಾ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಜಯರಾಜ ಭೂಸದ, ತಾಹೇರಾ ಬೇಗಂ, ಶೋಭಾ ಗಡಾದ ಉಪಸ್ಥಿತರಿದ್ದರು.

Advertisement

0 comments:

Post a Comment

 
Top