PLEASE LOGIN TO KANNADANET.COM FOR REGULAR NEWS-UPDATES


ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತಿಗಳ ೯೫ ಸದಸ್ಯ ಸ್ಥಾನಗಳಿಗಾಗಿ ಒಟ್ಟು ೪೯೩ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದು, ಕುಷ್ಟಗಿ ಪುರಸಭೆಯ ವಾರ್ಡ್ ಸಂಖ್ಯೆ ೧೯ ರಲ್ಲಿ ಪಕ್ಷೇತರ ಅಭ್ಯರ್ಥಿ ಕರಿಸಿದ್ದಪ್ಪ ಕಳಕಪ್ಪ ಹೊಸವಕ್ಕಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ.
  ಉಮೇದುವಾರಿಕೆ ಹಿಂಪಡೆಯಲು ಫೆ. ೨೭ ಅಂತಿಮ ದಿನವಾಗಿತ್ತು.  ಇದೀಗ ಒಟ್ಟು ೧೦೬ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.  
  ಕೊಪ್ಪಳ ನಗರಸಭೆಯ ೩೧ ಸದಸ್ಯ ಸ್ಥಾನಗಳಿಗೆ ಉಮೇದುವಾರಿಕೆ ಸಲ್ಲಿಸಿದ್ದ ೧೯೪ ಅಭ್ಯರ್ಥಿಗಳ ಪೈಕಿ ೪೦ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ೧೫೪ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.  ಇದರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ತಲಾ ೩೧ ಅಭ್ಯರ್ಥಿಗಳು, ಬಿ.ಎಸ್.ಆರ್-೨೫, ಕೆಜೆಪಿ- ೦೫, ಪಕ್ಷೇತರರು-೨೨, ಸಿಪಿಐ(ಎಂ)-೦೧, ವೆಲ್ ಫೇರ್ ಪಾರ್ಟಿ ಆಪ್ ಇಂಡಿಯಾದ-೦೮ ಅಭ್ಯರ್ಥಿಗಳಿದ್ದಾರೆ.
  ಗಂಗಾವತಿ ನಗರಸಭೆಯ ೩೧ ಸದಸ್ಯ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದ ೨೧೫ ಅಭ್ಯರ್ಥಿಗಳ ಪೈಕಿ ೩೭ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು, ಇದರಿಂದಾಗಿ ೧೭೮ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಂತಾಗಿದೆ.  ಇದರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ತಲಾ ೩೧ ಅಭ್ಯರ್ಥಿಗಳು, ಬಿ.ಎಸ್.ಆರ್-೨೭, ಕೆಜೆಪಿ- ೨೨, ಪಕ್ಷೇತರರು-೩೫, ಸಿಪಿಐ(ಎಂ)-೦೧ ಅಭ್ಯರ್ಥಿಗಳಿದ್ದಾರೆ.
  ಕುಷ್ಟಗಿ ಪುರಸಭೆಯ ೨೨ ಸದಸ್ಯ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದ ೧೨೫ ಅಭ್ಯರ್ಥಿಗಳ ಪೈಕಿ ೨೩ ಅಭ್ಯರ್ಥಿಗಳು ಉಮೇದುವಾರಿಕೆಯನ್ನು ಹಿಂಪಡೆದಿದ್ದರಿಂದ ೧೦೨ ಅಭ್ಯರ್ಥಿಗಳು ಚುನಾವಣೆಯಲ್ಲಿ ತಮ್ಮ ಭವಿಷ್ಯ ಪರೀಕ್ಷೆಗೆ ಸಜ್ಜಾಗಿದ್ದಾರೆ.  ಇದರಲ್ಲಿ ಕಾಂಗ್ರೆಸ್-೨೨, ಬಿಜೆಪಿ-೨೧, ಜೆಡಿಎಸ್‌ನ-೧೯, ಬಿ.ಎಸ್.ಆರ್-೨೨, ಕೆಜೆಪಿ- ೦೭, ಪಕ್ಷೇತರರು-೧೧ ಜನ ಅಭ್ಯರ್ಥಿಗಳಿದ್ದಾರೆ.  ಇಲ್ಲಿನ ವಾರ್ಡ್ ಸಂಖ್ಯೆ ೧೯ ರಲ್ಲಿ ಪಕ್ಷೇತರ ಅಭ್ಯರ್ಥಿ ಕರಿಸಿದ್ದಪ್ಪ ಕಳಕಪ್ಪ ಹೊಸವಕ್ಕಳ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಗಿದೆ.
  ಯಲಬುರ್ಗಾ ಪಟ್ಟಣ ಪಂಚಾಯತಿಯ ೧೧ ಸದಸ್ಯ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದ ೬೫ ಅಭ್ಯರ್ಥಿಗಳ ಪೈಕಿ ೬ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆದಿದ್ದು, ಇದರಿಂದಾಗಿ ೫೯ ಅಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿ ಉಳಿದಂತಾಗಿದೆ.  ಇದರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ತಲಾ ೧೧ ಅಭ್ಯರ್ಥಿಗಳು, ಬಿ.ಎಸ್.ಆರ್-೧೦, ಕೆಜೆಪಿ- ೧೧ ಪಕ್ಷೇತರರು-೦೫ ಅಭ್ಯರ್ಥಿಗಳಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ವಿಭಾಗತಿಳಿಸಿದೆ.

Advertisement

0 comments:

Post a Comment

 
Top