PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಅಂಗವಾಗಿ ನಗರದ ಎ.ಪಿ.ಎಂ.ಸಿ ವರ್ತಕರ ಸಂಘವು ಮಹಾದಾಸೋಹಕ್ಕಾಗಿ ೨೫ ಕ್ವಿಂಟಾಲ್ ಸಿಹಿಬೂಂದಿಯನ್ನು ತಯಾರಿಸುತ್ತಿದ್ದಾರೆ. ೧೨ ಕ್ವಿಂಟಾಲ್ ಸಕ್ರಿ.೬ ಕ್ವಂಟಾಲ್ ಕಡಲೆಹಿಟ್ಟು,೩ ಕ್ವಂಇಂಟಾಲ ಎಣ್ಣೆ,೨೫ ಕೆ.ಜಿ ದ್ರಾಕ್ಷಿ,೫ ಕೆ.ಜಿ ಯಾಲಕ್ಕಿ ಇವುಗಳನ್ನು ಒಳಗೊಂಡು ಒಟ್ಟು ೨೫ ಕ್ವಿಂಟಾಲ್ ಬೂಂದಿ ತಯಾರಿಸಿ ತಮ್ಮ ಭಕ್ತಿಯ ಕಾಣಿಕೆ ಅರ್ಪಿಸಲಿದ್ದಾರೆ. ಸೋಮವಾರದಂದು ಶ್ರೀಮಠದ ದಾಸೋಹಕ್ಕೆ ಸಮರ್ಪಿಸುವದಾಗಿ ಸಂಘಟನೆ ತಿಳಿಸಿದೆ.


ಜನಮ ಸೂರೆಗೊಂಡ ಸದಾರಮೆ
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಪ್ರಯುಕ್ತ ಕೈಲಾಸಮಂಟಪದ ವೇದಿಕೆಯಲ್ಲಿ ಶ್ರೀಶಿವಕುಮಾರ ಕಲಾತಂಡ ಸಾಣೇಹಳ್ಲಿ ತಂಡದಿಂದ ಬೆಳ್ಳಾವೆ ನರಹರಿ ಶಾಸತ್ರೀಗಳು ರಚಿಸಿದ,  ಯತೀಶ ಕೊಳ್ಳೆಗಾಲ ಅವರ ನಿರ್ದೇನದಲ್ಲಿ ಸದಾರಮೆ ಎಂಬ  ನಾಟಕ ಅದ್ದೂರಿಯಾಗಿ ಪ್ರದರ್ಶನಗೊಂಡು ಜನಮನ ಸೂರೆಗೊಂಡಿತು. ಅಪಾರ ಭಕ್ತಸಮೂಹ ಈ ನಾಟಕವನು ವೀಕ್ಷಿಸಿದರು.


Advertisement

0 comments:

Post a Comment

 
Top