PLEASE LOGIN TO KANNADANET.COM FOR REGULAR NEWS-UPDATES

ಕನಕಗಿರಿ : ದಿ. ೨ ಮತ್ತು ೩ ರಂದು ನಡೆಯಲಿರುವ ಕನಕಗಿರಿಯ ಉತ್ಸವದ ಮಾಹಿತಿ ನೀಡುವ ಬ್ಲಾಗ್‌ನ ಹೊಸ ಆವೃತ್ತಿಯನ್ನು ಮಾಜಿ ಸಚಿವ ಹಾಗೂ ಕನಕಗಿರಿ ಶಾಸಕರಾದ ಶಿವರಾಜ್ ತಂಗಡಗಿ ಲೋಕಾರ್ಪಣೆ ಮಾಡಿದರು. ಕನಕಗಿರಿಯ ಉತ್ಸವದ ಎಲ್ಲ ಮಾಹಿತಿಯ ಜೊತೆಗೆ ಕನಕಗಿರಿಯ ಇತಿಹಾಸ ಹಾಗೂ ಅಪರೂಪದ ಫೋಟೋಗಳನ್ನು ಈ ಬ್ಲಾಗ್ ಒಳಗೊಂಡಿದೆ.
    ಜಿಲ್ಲೆಯ ಮಾಹಿತಿ ಹಾಗೂ ಸುದ್ದಿಯನ್ನು ದೇಶ ವಿದೇಶಗಳಿಗೆ ಹರಡುವ ಕೆಲಸದಲ್ಲಿ ನಿರತರಾಗಿರುವ ಕನ್ನಡನೆಟ್ ಡಾಟ್ ಕಾಂ ಬಳಗದ ಕೆಲಸವನ್ನು ಶ್ಲಾಘಿಸಿದ ಶಾಸಕ ಶಿವರಾಜ್ ತಂಗಡಗಿ ಉತ್ಸವದ ಬಗ್ಗೆ ಆಸಕ್ತರು ದೇಶ ವಿದೇಶಗಳಲ್ಲಿಯೇ ಕುಳಿತು ಮಾಹಿತಿ ಪಡೆಯಲು ಇದು ಅನುಕೂಲವಾಗಲಿದೆ ಎಂದರು. ಕನಕಗಿರಿಯ ಬ್ಲಾಗ್  ಅಡ್ರೆಸ್ kanakagiriutsav.blogspot.com ನಲ್ಲಿ ಸಕಲ ಮಾಹಿತಿ ಲಭ್ಯ. ಹೆಚ್ಚಿನ ಮಾಹಿತಿಗಾಗಿ ಕನ್ನಡನೆಟ್ ಡಾಟ್ ಕಾಂ ಸಂಪಾದಕ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮ ಸಂಪರ್ಕಿಸಲು ಕೋರಲಾಗಿದೆ.

Advertisement

0 comments:

Post a Comment

 
Top