ಜನರ ನಡುವಿನ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಲು ಸಹಾಯಕಾರಿಯಾಗಿರುವ ಮಧ್ಯಸ್ಥಿಕಾ ವ್ಯವಸ್ಥೆ ನ್ಯಾಯಾಂಗ ಕ್ಷೇತ್ರಕ್ಕೆ ವರದಾನವಾಗಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಎಸ್.ಎನ್. ಸತ್ಯನಾರಾಯಣ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರ, ಕೊಪ್ಪಳ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಕೀಲರುಗಳಿಗೆ ಏರ್ಪಡಿಸಲಾಗಿರುವ ಮಧ್ಯಸ್ಥಿಕಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕಕ್ಷಿದಾರರು ತಮ್ಮ ನಡುವಿನ ವಿವಾದವನ್ನು ಮಾತುಕತೆಯ ಮೂಲಕ ಸುಲಭವಾಗಿ ಹಾಗೂ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಬಹುದಾದ ವ್ಯವಸ್ಥೆಯಾಗಿರುವ ರಾಜಿಸಂಧಾನ ವ್ಯವಸ್ಥೆ ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಬಾಳಬಯಸುವವರಿಗೆ ವರದಾನವಾಗಿದೆ. ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಗೊಳಿಸಲು ೨೦೦೨ ರಲ್ಲಿ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಇತ್ತೀಚೆಗೆ ಈ ಕಾನೂನಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಸೆಕ್ಷನ್ ೮೯ ರ ಪ್ರಕಾರ ನ್ಯಾಯಾಧೀಶರಿಗೂ ಇದರಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಯಾವುದೇ ವ್ಯಾಜ್ಯ ನ್ಯಾಯಾಲಯಕ್ಕೆ ಬಂದಾಗ, ಅಂತಹ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಸಾಧ್ಯವಿದೆಯೇ ಎಂಬುದನ್ನು ನ್ಯಾಯಾಧೀಶರು ಕಡ್ಡಾಯವಾಗಿ ಪರಿಶೀಲಿಸಬೇಕು. ನ್ಯಾಯದಾನದ ವಿಳಂಬ ತಪ್ಪಿಸುವ ನಿಟ್ಟಿನಲ್ಲಿ ಲೋಕದಾಲತ್, ರಾಜಿಸಂಧಾನದಂತಹ ಪರ್ಯಾಯ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ವಿವಾದಗಳನ್ನು ಕಾಲದ ಪರಿಮಿತಿಯೊಳಗೆ ಮುಗಿಸಿ, ಕಕ್ಷಿದಾರರಿಗೆ ವರ್ಷಾನುಗಟ್ಟಲೆ ನ್ಯಾಯಾಲಯಕ್ಕೆ ಅಲೆದಾಡುವುದನ್ನು ತಪ್ಪಿಸಿ, ಸಮಯ ಹಾಗೂ ಹಣದ ವ್ಯರ್ಥಕ್ಕೆ ಕಡಿವಾಣ ಹಾಕಬಹುದಾಗಿದೆ. ಕಕ್ಷಿದಾರರಿಗೂ ನ್ಯಾಯವಾದಿಗಳಿಗೂ ಸೌಹಾರ್ದ ವಾತಾವರಣ ಉಂಟು ಮಾಡುವ ಮೂಲಕ ಪ್ರಕರಣಗಳ ತ್ವರಿತ ಇತ್ಯರ್ಥಗೊಳಿಸಲು ಮಧ್ಯಸ್ಥಿಕೆ ವ್ಯವಸ್ಥೆ ಪರಿಣಾಮಕಾರಿಯಾಗಿದೆ. ಆದರೆ ಈ ವ್ಯವಸ್ಥೆಗೆ ನ್ಯಾಯವಾದಿಗಳು ಆಸಕ್ತಿ ತೋರದೇ ಇರುವುದು ವಿಷಾದಕರ ಸಂಗತಿಯಾಗಿದೆ. ಮದ್ಯಸ್ಥಿಕೆ ವ್ಯವಸ್ಥೆ ಪರಿಣಾಮಕಾರಿಯಾದಲ್ಲಿ ತಮ್ಮ ವೃತ್ತಿಪರತೆ, ಆರ್ಥಿಕ ನಷ್ಟವಾಗಬಹುದಾಗಿದೆ ಎನ್ನುವ ತಪ್ಪು ಕಲ್ಪನೆ ವಕೀಲರಲ್ಲಿದೆ. ಆದರೆ ಪ್ರಕರಣಗಳು ಮಧ್ಯಸ್ಥಿಕೆ ಮೂಲಕ ತ್ವರಿತವಾಗಿ ಇತ್ಯರ್ಥಗೊಳಿಸುವ ವಕೀಲರ ಬಳಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕಕ್ಷಿದಾರರು ಮೊರೆ ಹೋಗುವ ಸಾಧ್ಯತೆ ಇರುವುದನ್ನು ನ್ಯಾಯವಾದಿಗಳು ಅರ್ಥ ಮಾಡಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯವಾದಿಗಳು ಮಧ್ಯಸ್ಥಿಕೆಯ ತರಬೇತಿ ಪಡೆಯಲು ಮುಂದಾಗಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಎಸ್.ಎನ್. ಸತ್ಯನಾರಾಯಣ ಅವರು ಕರೆನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ದಾ. ಬಬಲಾದಿ ಅವರು ಮಾತನಾಡಿ ಮಧ್ಯಸ್ಥಿಕೆ ವ್ಯವಸ್ಥೆ ಮಹಾಭಾರತದ ಪುರಾಣದಲ್ಲಿಯೂ ಪ್ರಸ್ತಾಪವಾಗಿದೆ. ಶ್ರೀಕೃಷ್ಣ ಮಹಾ ಯುದ್ಧವನ್ನು ತಡೆಯಲು ಪಾಂಡವರು ಮತ್ತು ಕೌರವರ ನಡುವೆ ರಾಜಿ ಸಂಧಾನಕ್ಕೆ ಯತ್ನಿಸಿದ್ದರು. ಮಧ್ಯಸ್ಥಿಕೆಯ ವಿಫಲತೆಯಿಂದಾಗಿಯೇ ಭೀಕರ ಮಹಾ ಯುದ್ಧ ಸಂಭವಿಸಿತು. ಅಂದರೆ ಮಧ್ಯಸ್ಥಿಕೆಗೆ ಅನಾಹುತ ತಡೆಗಟ್ಟುವ ಪ್ರಭಾವ ಇದೆ ಎಂಬುದು ಮಹಾಭಾರತದಲ್ಲಿ ದಾಖಲಾಗಿದೆ. ಮಧ್ಯಸ್ಥಿಕೆ ವ್ಯವಸ್ಥೆ ಸರ್ವ ಕಾಲಕ್ಕೂ ಸಲ್ಲುತ್ತದೆ. ಜನರಿಗೆ ಬೇಕಾಗಿರುವುದು ತ್ವರಿತ ಪರಿಹಾರ. ವ್ಯಾಜ್ಯವಲ್ಲ. ನ್ಯಾಯದಾನ ಪದ್ಧತಿ ಕುರಿತು ಇತ್ತೀಚೆಗೆ ಜನರಲ್ಲಿ ವಿಶ್ವಾಸ ಕುಂದುತ್ತಿದ್ದು, ಜನರಲ್ಲಿ ಮರಳಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಬೇಕಾಗಿದೆ ಎಂದರು.
ಮಧ್ಯಸ್ಥಿಕೆ ಕುರಿತಂತೆ ವಕೀಲರುಗಳಿಗೆ ತರಬೇತಿ ನೀಡುವ ಸಲುವಾಗಿ ಆಗಮಿಸಿದ್ದ ಬೆಂಗಳೂರು ಮದ್ಯಸ್ಥಿಕೆ ಕೇಂದ್ರದ ಮಾಸ್ಟರ್ ಟ್ರೇನರ್ ಪ್ರಸಾದ್ ಸುಬ್ಬಣ್ಣ ಅವರು ಮಾತನಾಡಿ ವ್ಯಾಜ್ಯಗಳಲ್ಲಿ ಸಿಗುವ ಫಲಿತಾಂಶಕ್ಕಿಂತ ಹೆಚ್ಚು ತೃಪ್ತಿಕರ ಫಲಿತಾಂಶವನ್ನು ಮಧ್ಯಸ್ಥಿಕೆಯಲ್ಲಿ ಪಡೆಯಬಹುದಾಗಿದೆ. ೨೦೦೭ ರಿಂದ ಈವರೆಗೆ ಬೆಂಗಳೂರು ಮಧ್ಯಸ್ಥಿಕಾ ಕೇಂದ್ರಕ್ಕೆ ಬಂದ ೨೯೪೫೨ ಪ್ರಕರಣಗಳ ಪೈಕಿ ೧೭೧೬೪ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಯಶಸ್ವಿಯಾಗಿ ಇತ್ಯರ್ಥಗೊಳಿಸಲಾಗಿದೆ. ವೈವಾಹಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾದ ೧೨೩೩೫ ಪ್ರಕರಣಗಳ ಪೈಕಿ ೯೧೬೬ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಲಾಗಿದೆ. ಮಧ್ಯಸ್ಥಿಕಾ ಕಾನೂನು ಅರಿವು ಕಾರ್ಯಕ್ರಮಗಳನ್ನು ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಲ್ಲೂ ನಡೆಸಿಕೊಡಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ವಕೀಲರುಗಳ ಸಂಘದ ಅಧ್ಯಕ್ಷ ಎ.ವಿ. ಕಣವಿ ಪ್ರಾರಂಭದಲ್ಲಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ತರಬೇತುದಾರರಾದ ಶೀಲಾ ಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲೂಕುಗಳ ನ್ಯಾಯಾಧೀಶರುಗಳು, ಹಿರಿ, ಕಿರಿಯ ವಕೀಲರುಗಳು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು. ಸಿವಿಲ್ ಜಡ್ಜ್ ಕೆ. ಶಿವರಾಮ್ ವಂದಿಸಿದರು, ನ್ಯಾಯಾಧೀಶರಾದ ಕಾವೇರಿ ಕಾರ್ಯಕ್ರಮ ನಿರೂಪಿಸಿದರು. ಮಧ್ಯಸ್ಥಿಕೆ ಕುರಿತಂತೆ ತರಬೇತಿ ಕಾರ್ಯಕ್ರಮ ಫೆ. ೧೬ ರಿಂದ ೨೦ ರವರೆಗೆ ೫ ದಿನಗಳ ಕಾಲ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.

0 comments:
Post a Comment