PLEASE LOGIN TO KANNADANET.COM FOR REGULAR NEWS-UPDATES


ನಗರಸಭೆ ಕಾರ್ಯಾಲಯ ಕೊಪ್ಪಳ ಹಾಗೂ ಶ್ರೀ ಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೇಯ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ನಗರಸಭೆ ೩೧ ವರ್ಡ ನಲ್ಲಿ ಸಮುದಾಯ ಆಧಾರಿತ ಜನ ಜಾಗೃತಿ ಕಾರ್ಯಕ್ರಮವನನು ವಾರ್ಡ ನಂ -೧೪ ರಲ್ಲಿ ಹಮಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಜೀರಸಾಬ ತಳಕಲ್ಲ ಯೋಜನಾಧಿಕಾರಿಗಳು ಇವರು ವಹಿಸಿದಕೊಂಡಿದ್ದರು. ಮತ್ತು ಅಂಗನವಾಡಿ ಶಿಕ್ಷಕಿಯರಾದ ಶ್ರೀಮತಿ ತಿಪ್ಪಮ್ಮ ಮತ್ತು ಹಿರಿಯರಾದ ಹಂಪಮ್ಮ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ಯೋಜನಾಧಿಕಾರಿಯಾದ  ವಜೀರಸಾಬ ತಳಕಲ್ಲ ಇವರು ಮಾತನಾಡುತ್ತ ಕೊಪ್ಪಳ ನಗರ ಹೊರಗಿನಿಂದ ನೋಡಲು ಚೆನ್ನಾಗಿದ್ದು ಆದರೆ ಒಳಗಡೆ ಬಹಳಷ್ಟು ನಾಗರಿಕ ಸಮಸ್ಯೆಗಳು ಇವೆ ಆದ್ದರಿಂದ ಸಾರ್ವಜನಿಕರು ಕಸ ಕಡ್ಡಿಗಳನನು ಗಟಾರದಲ್ಲಿ ಹಾಕದೆ ನಳದ ನೀರಿನ ಹಿತ ಬಳಕೆ ಮಾಡಿಕೊಳ್ಳಬೇಕು ಹಾಗೂ ಪ್ಲಾಷ್ಟಿಕ ಬಳಕೆಯನ್ನು ಸಂಪೂರ್ಣವಾಗಿ ತಡೆಯಬೇಕು ಇದರಿಂದ ನಗರದ ಪರಿಸರ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಈ ಸಭೆಯಲ್ಲಿ ಸ್ವಾಗತವನ್ನು ಸಮುದಾಯ ಸಂಘಟಿಕರಾದ ಶ್ರಿಮತಿ ಲಲಿತಮ್ಮ ಅವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಂದನಾರ್ಪಣೆಯನನು ಸಮುದಾಯ ಸಂಘಟಿಕರಾದ   ಶಾಂತಕುಮಾರ ಸೋಂಪುರ ಅವರು ನಿರ್ವಹಿಸಿದರು. 

Advertisement

0 comments:

Post a Comment

 
Top