ಕೊಪ್ಪಳ ಜ ೧೬ : ನಗರದ ಹಮಾಲರ ಕಾಲೋನಿಯ ೩ನೇ ವಾರ್ಡ್‌ನ ನಾಗರಿಕರಿಗೆ ಬುಧುವಾರದಂದು ನಗರಸಭೆ ಕಚೇರಿಯಲ್ಲಿ ಎಸ್‌ಎಫ್‌ಸಿ ಯೋಜನೆಯಲ್ಲಿ ವೈಯಕ್ತಿಕ ಶೌಚಾಲಯದ ಆದೇಶ ಪತ್ರವನ್ನು ನಗರಸಭೆಯ ಅಧ್ಯಕ್ಷ ಸುರೇಶ ದೇಸಾಯಿ ಹಾಗೂ ಉಪಾಧ್ಯಕ್ಷ ಅಮ್ಜದ್ ಪಟೇಲ್ ವಿತರಿಸಿದರು.
ನಂತರ ನಗರಸಭೆಯ ಅಧ್ಯಕ್ಷ ಸುರೇಶ ದೇಸಾಯಿ ಮಾತನಾಡಿ ಸರಕಾರದ ಯೋಜನೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಬಹುದಿನಗಳಿಂದ ಹಮಾಲರ ಕಾಲೋನಿಯಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಲು ನಿವೇಶನ ಕೊರತೆಯಿಂದ ಬಹಳಷ್ಟು ತೊಂದರೆ ಅನುಭವಿಸಬೇಕಾಯಿತು, ಆದಕಾರಣ ತಮ್ಮ-ತಮ್ಮ ವೈಯಕ್ತಿಕ ಜಾಗೆಯಲ್ಲಿ ವೈಯಕ್ತಿಕ ಶೌಚಾಲಯ ಕಟ್ಟಲು ಈ ಹಿಂದೆ ಅನೇಕರಿಗೆ ವೈಯಕ್ತಿಕ ಶೌಚಾಲಯ ಕಟ್ಟಿಕೊಡಲಾಗಿದ್ದು ಪುನ:ಹ ಕೆಲವರಿಗೆ ಮಂಜೂರಾತಿಯಾಗಿದ್ದು ಮುಂಬರುವ ದಿನಗಳಲ್ಲಿ ಪ್ರತಿಯೊಂದು ಮನೆಗೂ ವೈಯಕ್ತಿಕ ಶೌಚಾಲಯ ನಿರ್ಮಿಸುವುದಾಗಿ ಭರವಸೆ ನೀಡಿದರು.
ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ ನನ್ನ ವಾರ್ಡ್‌ನಲ್ಲಿ ಸರಕಾರದ ಯೋಜನೆಗಳು ಸಾಕಷ್ಟು ಮಂಜೂರು ಆಗಿದ್ದು ಅವುಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಡಾ.ಉಪೇಂದ್ರ, ಮಹೆಬೂಬ್ ಹುಸೇನ್ ನಾಲಬಂದ್, ಕಿರಿಯ ಅಭಿಯಂತರಾದ ವಿರೇಶ ಸವಡಿ, ಸಿಬ್ಬಂದಿಗಳಾದ ನಾಗೇಂದ್ರ, ವಾರ್ಡ್‌ನ ಹಿರಿಯರಾದ ಲಿಯಕತ್ ಅಲಿ, ಸಣ್ಣ ಹುಸೇನ್ ಸಾಬ ಮುದಗಲ್, ರಹಿಮಾನಸಾಬ್, ಚಿನ್ನುಸಾಬ ಮತ್ತಿತರರು ಉಪಸ್ಥಿತರಿದ್ದರು.
0 comments:
Post a Comment