ಕೊಪ್ಪಳ ಜ.೧೫ : ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಕೊಪ್ಪಳ ಇವರ ವತಿಯಿಂದ ೪ನೇ ತಂಡದ ನಾಗರೀಕ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ಜ.೧೬ ರಂದು ಬೆಳಿಗ್ಗೆ ೯.೦೦ ಗಂಟೆಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ಗುಲಬರ್ಗಾ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಮಹ್ಮದ್ ವಜೀರ್ ಅಹ್ಮದ ಅವರು ಭಾಗವಹಿಸಲಿದ್ದು, ಪಥ ಸಂಚಲನದ ಪರಿವೀಕ್ಷಣೆ ನಡೆಸಿ, ಗೌರವ ವಂದನೆ ಸ್ವೀಕರಿಸಿ ಬಹುಮಾನಗಳನ್ನು ವಿತರಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಪ್ರಾಂಶುಪಾಲರಾದ ಬಿ.ಮಹಾಂತೇಶ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.