ಕೊಪ್ಪಳ :- ಅಬ್ದುಲ್ ನಜೀರ್ ಸಾಬ ರಾಜ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಮೈಸೂರು ಹಾಗೂ ಜಿಲ್ಲಾಢಳಿತ ಕೊಪ್ಪಳ ತಾಲೂಕ ಪಂಚಾಯತ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ತಾಲೂಕ ಪಂಚಾಯತ ಸಭಾಭವನದಲ್ಲಿ ಕೊಪ್ಪಳ ಜಿಲ್ಲೆಯ ಜಾಗೃತಿ ಸಮಿತಿ ಸದಸ್ಯರುಗಳಿಗೆ ಜೀತ ಪದ್ದತಿ ನಿರ್ಮೂಲನೆ ಕುರಿತು ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜೀತ ಪದ್ದತಿ ನಿರ್ಮೂಲನೆ, ಪರಿಕಲ್ಪನೆ, ಕಾನೂನಿನ ಪರಿ ಭಾಷೆ, ಮತ್ತು ವಸ್ತು ಸ್ಥಿತಿ ಜೀತ ಪದ್ದತಿ, ಕನೀಷ್ಠ ವೇತನ ಜಾಗೃತಿ ಸಮಿತಿಯ ಕರ್ತ್ಯವ್ಯ ಮತ್ತು ಜವಾಬ್ಧಾರಿ ಜೀತ ಪದ್ದತಿ ಕಾಯ್ದೆ ೧೯೭೬ ರ ಪ್ರಮುಖ ಅಂಶಗಳು ಜೀತ ಪದ್ದತಿ ನಿರ್ಮೂಲನೆ ಕುರಿತು ಕೀರು ಚಿತ್ರ ಪ್ರದರ್ಶನ ಹಾಗೂ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ನೇರ ಸಂವಾದಗಳೊಂದಿಗೆ ತರಬೇತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರುಗಳಾದ ಜಿ.ಎಸ್.ಗೋನಾಳ, ಎಮ್.ರಾಜಶೇಖರ, ರಮೆಶ.ಬಿ.ಅಳವಂಡಿ, ಬಸವರಾಜ ಉಮಚಗಿ, ಜಿಲ್ಲಾ ಮಟ್ಟದ ಅಧಿಕಾರಿಗಳಾದ ರವೀಂದ್ರ ಡಾಣ ಶಿರೂರ ಲೀಡ್ ಬ್ಯಾಂಕ್ ಮ್ಯಾನೇಜರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಮುಸಗೇಪ್ಪ ಸಹಾಯಕ ಆಯುಕ್ತರಾದ ಮಂಜುನಾಥ , ರೇಷ್ಮೆ ಇಲಾಖೆ ಅಧಿಕಾರಿಗಳಾದ ದಾದನೂರು ಕಾರ್ಯನಿರ್ವಾಹಕ ಅಧಿಕಾರಿಗಳಾದ ಇ. ಕೃಷ್ಣಮೂರ್ತಿ ಅಕ್ಕಮಹಾದೇವಿ, ಇನ್ನಿತರರು ಉಪಸ್ಥಿತರಿದ್ದರು. ತರಬೇತಿಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ಹೆಚ್.ಎಸ್. ಹೊನ್ನುಂಚಿ, ಅಬ್ಧುಲ್ ನಜೀರಸಾಬ ರಾಜ್ಯ ಗ್ರಾಮಿಣ ಅಭಿವೃದ್ದಿ ಸಂಸ್ಥೆ ಮೈಸೂರು ಇವರು ತರಬೇತಿ ನೀಡಿದರು.
0 comments:
Post a Comment