PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :- ಅಂಗವಿಕಲರಿಗೆ ಅನುಕಂಪ ಬೇಡ ಅವಕಾಶವನ್ನು ಒದಗಿಸುವಂತೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯಸಂಚಾಲಕರು ಹಾಗೂ ರಾಮನಗರ ಜಿಲ್ಲಾಧ್ಯಕ್ಷರಾದ ಜಯರಾಮ ಹೆಚ್.ಜಿ ಕರೆ ನೀಡಿದರು.
 ಅವರು ನಗರದ ಸಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಕೊಪ್ಪಳ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನವನ್ನು ನೆರವೆರಿಸಿ ಮಾತನಾಡುತ್ತಾ ಇಂದು ಸಮಾಜದಲ್ಲಿ ಸಾಮಾನ್ಯರಿಗಿಂತ ಹೆಚ್ಚಿನ ರೀತಿಯಲ್ಲಿ ಸಾಧನೆ ಮಾಡುವರು ಅಂಗವಿಕಲರು ಅದಕ್ಕೆ ತಾಜಾ ಉದಾಹರಣೆ ಎಂದರೆ ಅಂದರ ಟಿ ೨೦ ವಿಶ್ವಕಪ್ ಹಾಗೂ ಪ್ಯಾರ ಓಲಪಿಂಕ್ಸನಲ್ಲಿ ಚಿನ್ನ ಪದಕ ಪಡೆದ ಹೊಸ ನಗರದ ಗಿರೀಶ್. ಅಂಗವಿಕಲ ಸರ್ಕಾರಿ ನೌಕರರಿಗೆ ಹಾಗೂ ನಿರೂದ್ಯೋಗಿ ಅಂಗವಿಕಲರಿಗೆ ನೀಡಬೇಕಾಗಿರುವ ಸೌಲಭ್ಯಗಳನ್ನು ನೀಡದೇ ವಿನಾ ಕಾರಣ ಅಲೆದಾಡಿಸುವ ಅಧಿಕಾರಿಗಳ ವಿರುದ್ದ ಸಂಘವು ಹೋರಾಟ ನಡೆಸುತ್ತದೆ, ಕೊಪ್ಪಳ ಜಿಲ್ಲೆಯ ಸರ್ಕಾರಿ ಅಂಗವಿಕಲ ನೌಕರರ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಇಡೀ ರಾಜ್ಯಕ್ಕೆ ಮಾದರಿಯಾಗಿರುವುದಲ್ಲದೆ ಇತರೆ ಸಂಘಗಳಿಗಿಂತ ನಮ್ಮ ಸಂಘವು ವಿಭಿನ್ನ ರೀತಿಯಲ್ಲಿ ಪ್ರಶಸ್ತಿಗೆ ಆಯ್ಕೆಮಾಡಿ ಸನ್ಮಾನಿಸುವುದು ಶ್ಲಾಘನಿಯ ಕಾರ್ಯ ಎಂದು ಹೇಳಿದರು 
ನಂತರ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ  ೬ನೇ ವೇತನ ಆಯೋಗದ ಶಿಪ್ಪಾರಸ್ಸಿನಂತೆ ಸರ್ಕಾರಿ ಅಂಗವಿಕಲರಿಗೆ ನೀಡಬೇಕಾಗಿರುವ ಮೂಲ ವೇತನ ಶೇ ೬% ಸರ್ಕಾರ ನಿರಂತರ ಒಂಭತ್ತು ತಿಂಗಳ ಹೋರಾಟದ ನಂತರ ಜಾರಿಗೆ ಮಾಡಿದೆ. ಅದರ ಜೋತೆಗೆ ಇನ್ನು ಎರಡು ಬೇಡಿಕೆಗಳನ್ನು ಈಡೆರಿಸಿದ ಮುಖ್ಯ ಮಂತ್ರಿಗಳಾದ ಜಗದೀಶ ಶಟ್ಟರವರು ಹಾಗೂ ಸಚಿವ ಸಂಪುಟ ಸಚಿವರಿಗೆ, ರಾಜ್ಯಾಧ್ಯಕ್ಷರಾದ ಎಸ್.ರೇಣುಕಾರಾಧ್ಯ ರವರಿಗೆ ಸಂಘದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಿದರು. ಅಂಗವಿಕಲತೆಯುಳ್ಳ ಸಕಾರಿ ನೌಕರರ ವರ್ಗಾವಣೆಗಳಿಗೆ ಸಂಬಂದಿಸಿದಂತೆ ಪ್ರತ್ಯೇಕ ಮಾರ್ಗಸೂಚಿಗಳ ಆದೇಶವನ್ನು ಹೊರಡಿಸಬೇಕು. ರಾಜ್ಯದ ಎಲ್ಲಾ ನಿರೋದ್ಯೋಗಿ ಅಂಗವಿಕಲರಿಗೆ ನೀಡಲಾಗುವ ೪೦೦ ರೂ ಹಾಗೂ ೧೦೦೦ ರೂ ಬದಲಾಗಿ ೮೦೦ ರೂ, ೨೦೦೦ ರೂಗಳ ಘೋಷಣಾ ಬತ್ತೆಯನ್ನು ನೀಡಬೇಕು.  ಶೇ ೩% ಅನುಧಾನ ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು, ೧೯೯೫ ರ ಅಂಗವಿಕಲರ ಅಧಿನಿಯಮ ಸಮರ್ಪಕ ರೀತಿಯಲ್ಲಿ ಅನುಷ್ಠಾನ ಗೊಳಿಸಬೇಕು. ಕೊಪ್ಪಳ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಛೇರಿಗೆ ಖಾಯಂ ಸಿಬ್ಬಂದಿಗಳ ನೇಮಕ ಮಾಡುವಂತೆ ಒತ್ತಾಯಿಸಿದರು. ಕಾರ್ಯಕ್ರಮಕ್ಕೆ ಗೈರು ಹಾಜರಾದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಆಕ್ರೋಶ ವ್ಯಕ್ತಪಡಿಸಿದರು. ತಳಕಲ್ ಶಾಲೆಯ ಶಿಕ್ಷಕರಾದ ನಾನೂ ಪಾಟೀಲ ಉಪನ್ಯಾಸವನ್ನು ನೀಡಿದರು. 
ಜಿಲ್ಲಾ ಅಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ ಪ್ರಸ್ತಾವಿಕವಾಗಿ ಮಾತನಾಡಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ ವಹಿಸಿದ್ದರು . 
ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರಿಗೆ ಹಾಗೂ ಸಾದನೆ ಮಾಡಿದ ಅಂಗವಿಕಲರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀಪಾಲ.ಬಿ.ಎಸ್, ಉಪಾಧ್ಯಕ್ಷರಾದ ಹೆಚ್.ಆರ್.ಹಂಜಕಿ, ಸಂಘಟನಾ ಕಾರ್ಯದರ್ಶಿಗಳಾದ ನಾಗಪ್ಪ ದೇವನಾಳ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳಾದ ಬಿ.ಇ.ಹೆಮರಡ್ಡಿ, ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಹೆಚ್.ಗೋನಾಳ, ಬಿ.ಆರ್.ಸಿ. ಸುದಿಂದ್ರ ಕಾಂಬ್ಳೆ, ಶಿಕ್ಷಕರ ಸಂಘದ ರಾಜ್ಯ ಪರಿಷತ್ತ ಸದಸ್ಯರಾದ ಗಂಗಾಧರ ಕಾತರಕಿ, ಕುಷ್ಟಗಿ ತಾಲೂಕ ಅಧ್ಯಕ್ಷರಾದ ಸಿದ್ರಾಮಪ್ಪ ಅಮರಾವತಿ, ಕಾರ್ಯದರ್ಶಿ ಅಶೋಕ ಕಟ್ಟಿಮನಿ , ಕೊಪ್ಪಳ ತಾಲೂಕ ಕಾರ್ಯದರ್ಶಿ ನಾಗಪ್ಪ ಕಾತರಕಿ, ಗಂಗಾವತಿ ತಾಲೂಕ ಅಧ್ಯಕ್ಷರಾದ ಬಿ.ಬೀಮಪ್ಪ, ಕಾರ್ಯದರ್ಶಿ ಪರಶುರಾಮ ಮೂಲಂಗಿ, ಯಲಬುರ್ಗಾ ತಾಲೂಕ ಅಧ್ಯಕ್ಷರಾದ ಮಹೇಶ ಆರೇರ, ಕಾರ್ಯದರ್ಶಿ ಸಂಗಪ್ಪ ಕಿಂದ್ರಿ, ಗೌರವಧ್ಯಕ್ಷರಾದ ಮಧಾಸಾಬ ಕೊತಬಾಲ ಶಿಕ್ಷಕರ ಪತ್ತಿನ ಸಂಘದ ಖಜಾಂಚಿ ಬಸವರಾಜ ಬಂಡಿಹಾಳ, ವಿಕಲ ಚೇತನರ ಒಕ್ಕೂಟದ  ರಾಜ್ಯ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ ತಳಕಲ್, ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಪೂಜಾರ, ವೀರಕನ್ನಡಿಗ ಯುವಕ ಸಮಘದ ಅಧ್ಯಕ್ಷರಾದ ಶಿವಾನಂದ ಹೊದ್ಲುರು, ಮುಂತಾದವರು ಹಾಜರಿದ್ದರು. 
ಕಾರ್ಯಕ್ರಮವನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಬೀರಪ್ಪ ಅಂಡಗಿ ಚಿಲವಾಡಗಿ ನಿರೂಪಿಸಿದರು.ವಿದ್ಯಾರ್ಥಿನಿಯರಾದ ಸುಧಾ, ಮಂಜುಳಾ, ಶಾಂತಾ, ರತ್ನಾ ಪ್ರಾರ್ಥನೆಯನ್ನು ನೆರವೆರಿಸಿದರು.ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೊಳರಡ್ಡಿ ಸ್ವಾಗತಿಸಿ ಪರಶುರಾಮ ಎಲ್ಲರಿಗೆ ವಂದಿಸಿದರು. 


Advertisement

0 comments:

Post a Comment

 
Top