PLEASE LOGIN TO KANNADANET.COM FOR REGULAR NEWS-UPDATES



- ಶ್ರೀ ಗವಿಮಠದ ಶ್ರೀಗಳು
ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೇತಾಜಿ ಸುಭಾಷಚಂದ್ರ ಬೋಸರವರ ೧೧೬ ನೆ ಜನ್ಮ ದಿನಾಚರಣೆ ಹಾಗೂ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಬಹದ್ದೂರಬಂಡಿ ರಸ್ತೆಯಲ್ಲಿರುವ ನೂತನ ಶಾಲಾ ಆವರಣದಲ್ಲಿ ನೆರವೇರಿಸಲಾಯಿತು.

ಈ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದಂತಹ ಶ್ರೀ ಮ.ನಿ.ಪ್ರ.ಸ್ವ. ಜಗದ್ಗುರು ಶ್ರೀ ಗವಿಸಿದ್ದೇಶರ ಮಹಾಸ್ವಾಮಿಗಳು ಸಂಸ್ಥಾನ ಶ್ರೀಗವಿಮಠ ಕೊಪ್ಪಳ ಇವರು ತಾಯಿಯ ಗರ್ಭದಿಂದ ಭೂಮಿಗೆ ಉದಯಿಸುವಾಗ ಆ ಮಗುವಿನ ಹೃದಯ ಎಷ್ಟು ಸ್ವಚ್ಚವಾಗಿರುತ್ತದೆಯೋ ಅಂತ್ಯದವರೆಗೂ ಅದೆರೀತಿ ಹೃದಯಸ್ಪಷ್ಟತೆ ಇದ್ದರೆ ಅಂತಹ ಮನುಷ್ಯನ ಜೀವನ ಸಾರ್ಥಕ ವಿದ್ಯಾರ್ಥಿಎಂಬ ಮರಕ್ಕೆ ಅಕ್ಷರವೆಂಬ ನೀರು ಹಾಕಿದಾಗ ಜ್ಞಾನವೆಂಬ ಹೂವು ಅರಳತ್ತದೆ. ಇಂತಹ ಕಾರ್ಯ ಶ್ಲಾಘನಿಯವಾದುದು ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ಆಶೀರ್ವಚನ ನೀಡಿದರು. ಇನ್ನೋರ್ವ ಶ್ರೀಗಳಾದ  ಅಬ್ಬ್ಬಾಸ ಅಲಿ ಸದ್ಗುರು ತಾತನವರು  ಶ್ರೀ ಕ್ಷ್ಷೇತ್ರ ಗೊನವಾರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ಸನ್ಮಾನ್ಯ ಶ್ರೀ ಬಸವರಾಜ ಸ್ವಾಮಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಪ್ಪಳ ಇವರು ನೇತಾಜಿಯೆಂದರೆ ಅದು ಒಂದು ಅದ್ಬುತ ಶಕ್ತಿಯ ಸಂಕೇತ ಸೈನ್ಯದ ನಾಯಕನಾಗಿದ್ದುಕೊಂಡು ದುರಾಡಳಿತಕ್ಕೆ ಸೆಡ್ಡು ಹೊಡೆದು ಬ್ರಿಟಿಷರ ದುರಾಡಳಿತವನ್ನು ಕೊನೆ ಗೊಳಿಸಿದರು. ಅಂತಹ ವಕ್ತಿತ್ವ ನಮ್ಮೆಲರಿಗೂ ಮಾರ್ಗದರ್ಶಕವಾಗಲಿ ಎಂದು ಮಾತನಾಡಿದರು.
ಶಿಲಾನ್ಯಾಸ ಕಾರ್ಯಕ್ರಮದ ಉದ್ಘಾಟನಾ ಸ್ಥಾನವನ್ನು ಅಲಂಕರಿಸಿದಂತಹ ಸನ್ಮಾನ್ಯ  ಇಕ್ಬಾಲ್ ಅನ್ಸಾರಿ ಮಾಜಿ ಸಚಿವರು ಗಂಗಾವತಿ ಇವರು ನಂಭಿಕೆ, ಕರ್ತ್ಯವ್ಯ, ತ್ಯಾಗ ಈ ಮೂರು ಗುಣಗಳನ್ನು ವಿದ್ಯಾರ್ಥಿಗಳು ಎಡೆಬಿಡದೆ ಅನುಸರಿಸಬೇಕು ನೀವು ಇಂತಹ ಮಹಾನ್ ವ್ಯಕ್ತಿಂiನ್ವಿಚಾರ ಧಾರೆಯನ್ನು ಅರಿತು. ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ವಿಚಾರದಲ್ಲಿ ಸಂಸ್ಥೆಯ ಪಾತ್ರ ಶ್ಲಾಘನೀಯವಾದುದು. ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಉಪನ್ಯಾಸಕರ ಸ್ಥಾನವನ್ನು ಅಲಂಕರಿಸಿದಂತಹ ಸನ್ಯಾನ್ಯ   ಪೀರ್ ಭಾಷಾ ಪ್ರಗತಿಪರ ಸಾಹಿತಿಗಳು ಹೋರಾಟಗಾರರು ಕಾರಟಗಿ ಇವರು ಕವ್ಯವಸ್ಥೆ ಹೋಗಿ ಸುವಸ್ಥೆ ಬರಬೇಕಾರೆ ಅಂಹಿಸೆ ಬೇಕು ಸ್ವಾತಂತ್ರ್ಯ ಎನ್ನುವುದು ಬೇಡಿ ಪಡೆಯುವ ವಸ್ತು ಅಲ್ಲ ರಕ್ತ ಹರಿಯಿಸಿ ಬಲಿದಾನ ಮಾಡಿ ಪಡೆಯುವ ವಸ್ತು ಆಗಿದೆ. ಎಂದು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ   ಆರ್.ಹೆಚ್.ಅತ್ತನೂರು ಅವರು ಪ್ರಸ್ತಾವಿಕವಾಗಿ ಮಾತನಾಡಿ ದೇಶಕ್ಕಾಗಿ ನೀವು ರಕ್ತ ಹರಿಯಿಸಿ ಪ್ರಾಣವನ್ನು ಅರ್ಪಿಸುವುದು ಬೇಡ ನಿಮ್ಮ ಅಂತರಾತ್ಮವನ್ನು ಶುದ್ದಿ ಪಡಿಸಿಕೊಂಡು ಇಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸಿದಂತಹ   ರಾಘವೇಂದ್ರ ಪಾನಘಂಟಿ ಜಿಲ್ಲಾ ಅಧ್ಯಕ್ಷರು ಅ.ರ.ಖಾ. ಶಾ. ಆ.ಮು ಕೊಪ್ಪಳ   ಸುರೇಶ ಭೂಮರಡ್ಡಿ ಜೆ.ಡಿ.ಎಸ್. ಧುರೀಣರು ಕೊಪ್ಪಳ ಸನ್ಮಾನ್ಯ   ಕೆ. ಎಮ್. ಸಯ್ಯದ್ ಬಿ.ಎಸ್. ಆರ್ ಧುರೀಣರು ಕೊಪ್ಪಳ ಸನ್ಮಾನ್ಯಶ್ರೀ ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ ಅಧ್ಯಕ್ಷರು ವಿನೂತನ ಸೇವಾಸಂಸ್ಥೆ ಅಳವಂಡಿ,   ಮಲ್ಲಪ್ಪ ದೊಡ್ಡವೀರಪ್ಪ ಕವಲೂರು ಕಾರ್ಯಧ್ಯಕ್ಷರು ಜಯಕರ್ನಾಟಕ ಸಂಘಟನೆ ಉತ್ತರ ಕರ್ನಾಟಕ   ಪತ್ರೆಪ್ಪ ಪಲ್ಲೇದ ಅಧ್ಯಕ್ಷರು ಪ್ಯಾಟಿ ಈಶ್ವರ ದೇವಸ್ಥಾನ ಸಮಿತಿ ಕೊಪ್ಪಳ   ಅಶೋಕ ರಾಜ ಬಜಾರಮಠ ಮಾಜಿ ನಗರಸಭಾ ಸದಸ್ಯರು ಕೊಪ್ಪಳ,  ಸವದತ್ತಿ ಶಿಕ್ಷಕರು ಸ.ಪ್ರೌ. ಹೊರತಟ್ನಾಳ,  ಖಾಸಿಂ ಅಲಿ ಹುಡೇದ ಮಾಜಿ ಉಪಾಧ್ಯಕ್ಷರು ಗ್ರಾ.ಪಂ ಅತ್ತನೂರು,   ಸೋಮಪ್ಪ ಗೆಜ್ಜಿ ನಿದೇಶಕರು ಪಿ.ಎಲ್.ಡಿ ಬ್ಯಾಂಕ್ ಕೊಪ್ಪಳ  ಗೌಷಪಾಷಾ ಕಾರ್ಯದರ್ಶಿಗಳು ಸೇವಾ ಸಂಸ್ಥೆ ಕೊಪ್ಪಳ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಮೊದಲಿಗೆ ಎಲ್ಲಾ ಅತಿಥಿತಿ ಗಣ್ಯರಿಂದ ನೇತಾಜಿ ಸುಭಾಸ ಚಂದ್ರ ಬೋಸರವರ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯರಾದ ಶ್ರೀಮತಿ ರೇಣುಕಾ ಅತ್ತನೂರು ಹಾಗೂ ಶಿಕ್ಷಕರು/ ಶಿಕ್ಷಕಿಯರು ವಿದ್ಯಾರ್ಥಿಗಳು, ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕು. ಮಾರುತಿ ಕೆ.ಹೆಚ್ ನಿರೂಪಿಸಿದರು. ಕು. ಕೊಟ್ರೇಶ ಕಾತರಕಿ ಸ್ವಾಗತಿಸಿದರು. ಕುಮಾರಿ ಆಶಾ ದೊಡ್ಡಮನಿ ವಂಧಿಸಿದರು.  

Advertisement

0 comments:

Post a Comment

 
Top