PLEASE LOGIN TO KANNADANET.COM FOR REGULAR NEWS-UPDATES

ರಾಷ್ಟ್ರೀಯ ಯುವ ದಿನಾಚರಣೆ -೨೦೧೩ರ ಅಂಗವಾಗಿ ಹೊಸಪೇಟೆ ಆಕಾಶವಾಣಿಯು ಪದವಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿದೆ.
          ಹೊಸಪೇಟೆ ಆಕಾಶವಾಣಿ ಕೇಂದ್ರವು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಪದವಿ ವಿದ್ಯಾರ್ಥಿಗಳಿಗಾಗಿ ಪೂರ್ವಭಾವಿ ಹಂತದ ರಸಪ್ರಶ್ನೆ ಸ್ಪರ್ಧೆಯನ್ನು ಇದೇ ದಿನಾಂಕ ೨೦ ರಂದು ಹಮ್ಮಿಕೊಳ್ಳಲು ನಿರ್ಧರಿಸಿದೆ. ಪ್ರತಿ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಕಾಲೇಜುಗಳ ಪ್ರಾಚಾರ್ಯರ ಮೂಲಕ ಡಿಸೆಂಬರ್ ೧೫ ರೊಳಗಾಗಿ, ನಿಲಯ ನಿರ್ದೇಶಕರು, (ಯುವವಾಣಿ ವಿಭಾಗ) ಆಕಾಶವಾಣಿ, ಹೊಸಪೇಟೆ ಈ ವಿಳಾಸಕ್ಕೆ ಪತ್ರ ಕಳುಹಿಸಿಕೊಡಬೇಕು. "ರಸಪ್ರಶ್ನೆ ಸ್ಪರ್ಧೆಯು ಸಾಮಾನ್ಯ ಜ್ಞಾನದ ಮೇಲೆ ನಡೆಯಲಿದ್ದು, ಪ್ರಚಲಿತ ವಿದ್ಯಮಾನ, ಇತಿಹಾಸ, ಸಂಸ್ಕೃತಿ, ಭಾಷೆ, ವಿಜ್ಞಾನ, ಕ್ರೀಡೆ ಹಾಗೂ ಇತರ ವಿಷಯಗಳ ಕುರಿತು ಬೆಳಕು ಚೆಲ್ಲಲಿದೆ".

          ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಕೂಡಲೇ ಹೆಸರು ನೊಂದಾಯಿಸಿಕೊಳ್ಳಬೇಕು, ಹೆಚ್ಚಿನ ಮಾಹಿತಿಗಾಗಿ ಪ್ರಸಾರ ನಿರ್ವಾಹಕರಾದ, ಮಂಜುನಾಥ ಡೊಳ್ಳಿನ (ಮೊ: ೯೪೮೦೬೫೪೩೬೫) ಅಥವಾ ಆಕಾಶವಾಣಿ ನಿಲಯದ ದೂರವಾಣಿ, ಸಂಖ್ಯೆ ೦೮೩೯೪-೨೨೭೨೭೬ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಹೊಸಪೇಟೆ ಆಕಾಶವಾಣಿ ಕೇಂದ್ರ ಮುಖ್ಯಸ್ಥರಾದ ಕೆ.ವೆಂಕಟೇಶ್  ತಿಳಿಸಿದ್ದಾರೆ.

Advertisement

0 comments:

Post a Comment

 
Top