PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ    ಗ್ರಾಮಾಂತರ ಪ್ರದೇಶದಲ್ಲಿರುವ ಜನಪದ ಕಲಾವಿದರ ಬದುಕು ತುಂಬಾ ಸಂಕಷ್ಟದಲ್ಲಿದೆ. ಅರ್ಹ ಜನಪದ ಕಲಾವಿದರಿಗೆ ಸರ್ಕಾರದಿಂದ ಮಾಸಾಶನ, ಕಲಾ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ, ಪ್ರಶಸ್ತಿ, ಪುರಸ್ಕಾರ, ನೆರವು ಒದಗಿಸಲು ಸಹಾಯಕಾರಿಯಾಗುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಲ್ಲಿ ಆಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲೆಯ ಜನಪದ ಕಲಾವಿದರ ಸಮೀಕ್ಷೆ ನಡೆಸಲಿದೆ ಎಂದು ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿಯವರು ಹೇಳಿದ್ದಾರೆ.
    ಹಂತಿಹಾಡು, ಗೀ ಗೀ-ಲಾವಣಿಪದ, ಡೊಳ್ಳಿನಹಾಡು, ಡೊಳ್ಳಿನ ಕೈಪೆಟ್ಟು ಕುಟ್ಟುವಹಾಡು, ಬೀಸುವಹಾಡು, ಜೋಗುಳಪದ, ಸೋಬಾನೆಪದ, ಬೀಗರಹಾಡು, ಮೋರಂ ಅಥವಾ ರಿವಾಯತ್‌ಹಾಡು, ಗೊಂದಲಿಗರಪದ, ಚೌಡಿಕೆಹಾಡು, ಏಕತಾರಿಪದ, ಡೊಳ್ಳುಕುಣಿತ, ಕರಡಿಮಜಲು, ಕೋಲಾಟ, ವೀರಗಾಸೆ ಅಥವಾ ವೀರಭದ್ರನಕುಣಿತ, ಹಲಗಿಮಜಲು, ತೊಗಲು ಗೊಂಬೆಯಾಟ, ಹಗಲುವೇಷ, ದೊಡ್ಡಾಟ, ಸಣ್ಣಾಟ, ಶ್ರೀ ಕೃಷ್ಣ ಪಾರಿಜಾತ, ಲಂಬಾಣಿ ಹಾಡು ಮತ್ತು ನೃತ್ಯ, ಮುಂತಾದ ಜಾನಪದ ಪ್ರಕಾರದ ಕಲೆಗಳನ್ನು ಅಳವಡಿಸಿಕೊಂಡಿರುವ ಕಲಾವಿದರು ನಿಗದಿತ ನಮೂನೆಯಲ್ಲಿ ತಮ್ಮ ವಿವರಗಳನ್ನು ನೀಡಬೇಕು.
 ಪ್ರತಿ ಗ್ರಾಮದಲ್ಲಿರುವ ಅಸಂಖ್ಯಾತ ಜನಪದ ಕಲಾವಿದರನ್ನು ಸಂಪರ್ಕಿಸುವುದು ಸುಲಭವಾದ ಕೆಲಸವಾಗಿರಲಾರದು. ಶಿಕ್ಷಕರು, ಪದವೀಧರರು, ಅಕ್ಷರ ಬಲ್ಲವರು ತಮಗೆ ಪರಿಚಿತ, ತಮ್ಮ ಊರಿನ ಜನಪದ ಕಲಾವಿದರ ವಿವರಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಎರಡು ಫೋಟೋ ಸಹಿತ ಹಾಗೂ ಪ್ರಶಸ್ತಿ, ಪುರಸ್ಕಾರ, ಕಾರ್ಯಕ್ರಮ ನೀಡಿದ ಅಗತ್ಯ ದಾಖಲೆಗಳೊಂದಿಗೆ ಕೊಪ್ಪಳ ತಾಲೂಕಿನ ಜಾನಪದಕಲಾವಿದರು ತಾಲೂಕು ಅಧ್ಯಕ್ಷರಾದ ಸೋಮನಗೌಡ ಪಾಟೀಲ್ -೯೪೪೮೯೦೭೨೦೮, ಕಾರ್ಯದರ್ಶಿ ರಾಜೇಶ ಯಾವಗಲ್ -೯೭೪೨೩೦೭೧೫೩ : ಯಲಬುರ್ಗಾ ತಾಲೂಕಿನ ಕಲಾವಿದರು ತಾಲೂಕಾಧ್ಯಕ್ಷ ಮುನಿಯಪ್ಪ ಹುಬ್ಬಳ್ಳಿ - ೯೯೮೦೦೭೧೧೭೩, ಕಾರ್ಯದರ್ಶಿ ಶರಣಬಸಪ್ಪ ದಾನಕೈ - ೯೯೭೨೩೨೫೬೯೦ : ಕುಷ್ಟಗಿ ತಾಲೂಕಿನ ಕಲಾವಿದರು ತಾಲೂಕಾಧ್ಯಕ್ಷ ಪ್ರೊ.ಶಂಕರ ಕರ್ಪಡಿ -೯೯೦೨೨೨೪೩೦೮, ಕಾರ್ಯದರ್ಶಿ ಶರಣಪ್ಪ ನಿಡಶೇಷಿ -೯೯೪೫೮೭೨೮೯೪ ಹಾಗೂ ಗಂಗಾವತಿ ತಾಲೂಕು ಕಲಾವಿದರು ತಾಲೂಕಾಧ್ಯಕ್ಷ ಎಂ.ಪರಶುರಾಂಪ್ರಿಯ -೮೯೫೧೧೦೧೩೮೩, ಕಾರ್ಯದರ್ಶಿ!!!!!!!!! ಇವರನ್ನು ಸಂಪರ್ಕಿಸಿ ಮುದ್ರಿತ ನಮೂನೆಗಳನ್ನು ಪಡೆದು ಭರ್ತಿ ಮಾಡಿದ ನಮೂನೆಗಳನ್ನು ಅವರಿಗೇ ನೀಡಬೇಕು ನಮೂನೆಯಲ್ಲಿ ಇಲ್ಲದ ಕಲಾವಿದರ ವಿವರಗಳನ್ನು ಪರಿಗಣಿಸಲಾಗುವುದಿಲ್ಲ.

    ಸಂಗ್ರಹಿತ ಜಿಲ್ಲೆಯ ಜನಪದ ಕಲಾವಿದರ ಪರಿಚಯ ಪುಸ್ತಕವನ್ನು ಕರ್ನಾಟಕ ಜಾನಪದ ಪರಿಷತ್ತು ಹೊರತರುವ ಉದ್ದೇಶ ಹೊಂದಿದೆ. ಆದ್ದರಿಂದ ಜಿಲ್ಲೆಯ ಜನಪದ ಕಲಾವಿದರು ಯಾರೊಬ್ಬರೂ ಬಿಟ್ಟು ಹೋಗಬಾರದೆಂದು ಎಚ್ಚರವಹಿಸಿದೆ. ಆದ್ದರಿಂದ ಜಾನಪದ ಕಲಾವಿದರು ತಮ್ಮ ಪರಿಚಯ ವಿವರಗಳನ್ನು ಸಂಬಂಧಿಸಿದ ಕ.ಜಾ.ಪ ತಾಲೂಕು ಅಧ್ಯಕ್ಷರು ಅಥವಾ ಕಾರ್ಯದರ್ಶಿಯವರಿಗೆ ಇದೇ ಡಿಸೆಂಬರ್ ೧೬ ರ ಒಳಗಾಗಿ ನೀಡಿ ಉಪಕರಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಅಂಡಗಿ   ವಿನಂತಿಸಿಕೊಂಡಿದ್ದಾರೆ.

Advertisement

0 comments:

Post a Comment

 
Top