PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಕರ್ನಾಟಕದಲ್ಲಿನ ನೇಕಾರ ಸಮುದಾಯಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿನ್ನೆಡೆಯಲ್ಲಿವೆ. ಅಲ್ಲದೇ ಈ ಸಮುದಾಯಗಳ ಬೆನ್ನೆಲುಬಾದ ನೇಕಾರಿಕೆ ಇಂದು ಜಾಗತೀಕರಣದ ಈ ಕಾಲದಲ್ಲಿ ನಲುಗಿ ಹೋಗುತ್ತಲಿದೆ. ನೇಕಾರಿಕೆಯೊಂದಿಗೆ ಇತರೇ ಕೆಲಸ ಕಾರ್ಯಗಳಲ್ಲಿ  ಈ ಸಮುದಾಯದವರು ದುಡಿಯುತ್ತಿದ್ದಾರೆ. ಇದೂವರೆಗೂ ಎಲ್ಲ ಕ್ಷೇತ್ರಗಳಲ್ಲಿ ಸರ್ಕಾರದ ಕೆಲವು ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ನೇಕಾರರ ಉಪಪಂಗಡಗಳಾದ ದೇವಾಂಗ, ಪದ್ಮಶಾಲಿ, ಕುರುಹಿನಶೆಟ್ಟಿ, ಪಟ್ಟಸಾಲೆ, ಸ್ವಕುಳಸಾಲೆ, ತೊಗಟವೀರ ಉಪ ಪಂಗಡಗಳು ಜನರೆಲ್ಲ ಈಗ ಒಂದಾಗಿ ಒಗ್ಗಟ್ಟಿನಿಂದ ಹೋರಾಟಮಾಡುವದರ ಮೂಲಕ ಈ ಸಮುದಾಯದ ಮುಂದಿನ ಪೀಳಿಗೆಗೆ  ಉತ್ತಮಭವಿಷ್ಯ ರೂಪಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಮಾಜಿ ಸಚಿವರು ಹಾಗೂ ನೇಕಾರ ಸಮುದಾಯಗಳ ಜಿಲ್ಲಾ ಗೌರವಾಧ್ಯಕ್ಷರಾದ ಗಂಗಾವತಿಯ ಎಂ ಮಲ್ಲಿಕಾರ್ಜುನ ನಾಗಪ್ಪ ಅವರು  ಅವರು ಭಾಗ್ಯನಗರದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಜರುಗಿದ ಕೊಪ್ಪಳ ತಾಲೂಕಾ ನೇಕಾರ ಸಮುದಾಯಗಳ ಒಕ್ಕೂಟ ರಚನೆಯ ಮಹಾಸಭೆಯಲ್ಲಿ  ಮಾತನಾಡಿದರು. ಮುಂದುವರಿದು ಮಾತನಾಡಿ ಕೊಪ್ಪಳ ಜಿಲ್ಲಾಮಟ್ಟದ ಪದಾಧಿಕಾರಿಗಳ ಸಮಿತಿ  ಹೀಗಾಗಲೇ ಮಾಡಲಾಗಿದ್ದೂ ಈಗ ಕೊಪ್ಪಳ ತಾಲೂಕಾ ಮಟ್ಟದ ಪದಾಧಿಕಾರಿಗಳ ಸಮಿತಿ ರಚಿಸಿ ಸಂಘಟಿತವಾಗಿ ರಚನಾತ್ಮಕವಾಗಿ  ಕೆಲಸ ಮಾಡುವಂತೆ ಕರೆ ನೀಡಿದರು.
ಮತ್ತೋರ್ವ ಮುಖಂಡರಾದ ಕೊಪ್ಪಳ ಜಿಲ್ಲಾ ನೇಕಾರರ ಸಮುದಾಯದ ಅಧ್ಯಕ್ಷರಾದ ಕೆ. ಕಾಳಪ್ಪ ಮಾತನಾಡಿ ನೇಕಾರ ಸಮುದಾಯದ ಉಪಪಂಗಡಗಳು ಒಂದಾಗಿ ಸರಕಾರವನ್ನೇ ಇತ್ತ ಮುಖ ಮಾಡಿ ನೋಡುವಂತೆ ನಾವೆಲ್ಲ ಸಂಘಟಿತವಾಗಿ ಹೋರಾಡಬೇಕಾಗಿದೆ. ಈ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕೆಂದು ಕರೆ ನೀಡಿದರು. ಹಲವಾರು ಉಪ ಪಂಗಡಗಳ ಪ್ರಮುಖರು ಉಪಸ್ಥಿತರಿದ್ದು ಮಾತನಾಡಿದರು. ಈ ಸಭೆಯಲ್ಲಿ ಕೊಪ್ಪಳ ತಾಲೂಕಾ ನೇಕಾರ ಸಮುದಾಯದ ಒಕ್ಕೂಟ ರಚನೆ ಮಾಡಲಾಗಿದ್ದು, ಈ ಒಕ್ಕೂಟಗಳ ಜಿಲ್ಲಾ ಗೌರವಾಧ್ಯಕ್ಷರಾದ ಎಂ. ಮಲ್ಲಿಕಾರ್ಜುನ ನಾಗಪ್ಪನವರ ಆದೇಶದ ಮೇರೆಗೆ ಶೀಘ್ರದಲ್ಲಿಯೇ ತಾಲೂಕಾ ಒಕ್ಕೂಟದ ಪಟ್ಟಿ ಹೊರಬರಲಿದೆ.
ಸ್ವಾಗತ ನಾಗರಾಜ ಬಳ್ಳಾರಿ, ಪ್ರಾಸ್ತಾವಿಕ ವಿಠ್ಠಪ್ಪ ಗೋರಂಟ್ಲಿ, ನಿರೂಪಣೆ ಡಾ. ಕೊಟ್ರೇಶ ಶೇಡ್ಮಿ ಮತ್ತು ವಂದನಾರ್ಪಣೆ ದೇವಪ್ಪ ಬೆಟಗೇರಿ ನೆರವೇರಿಸಿದರು. 

Advertisement

0 comments:

Post a Comment

 
Top