ಕೊಪ್ಪಳ :- ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ (ರಿ) ಕಿನ್ನಾಳ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೇದ ಸಂಗೀತ ಕಾರ್ಯಕ್ರಮದಲ್ಲಿ ದಿ. ೨೩/೧೨/೨೦೧೨ ರವಿವಾರದಂದು ಆಯೋಜಿಸಿದ್ದ ಸಂಗೀತ ಕ್ಷೇತ್ರದಲ್ಲಿ ತಮ್ಮದೆ ಛಾಪ ಮೂಡಿಸುದಂತಹ ದಿ. ಹನುಮಂತರಾವ್ ಬಂಡಿಯವರ ೨ನೇ ವರ್ಷದ ಸ್ವರ ಶ್ರದ್ದಾಂಜಲಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲೆಯ ಹಿರಿಯ ಸಂಗೀತ ಕಲಾವಿದರಾದ ಮಾಧುರಾವ್ ಇನಾಮದಾರ್ ಅಧ್ಯಕ್ಷತೆಯನ್ನು ನಗರಸಭೆಯ ಅಧ್ಯಕ್ಷರಾದ ಸುರೇಶ ದೇಸಾಯಿ ಅತಿಥಿಗಳಾಗಿ ಜಿಲ್ಲಾ ಪಂಚಾಯತಿಯ ರಾಜರಾಮ್ ಸಿ.ಇ.ಓ ಕೊಪ್ಪಳ, ಡಾ|| ವಿ.ಬಿ.ರಡ್ಡೇರ್, ಡಾ|| ಡಿ.ಆರ್. ಬೆಳ್ಳಟ್ಟಿ ನೀವೃತ್ತ ಪ್ರಾಂಶುಪಾಲರು ಖ್ಯಾತ ಅಂತರಾಷ್ಟ್ರೀಯ ಕಲಾವಿದರಾದ ಪಂಡಿತ ವಿಧ್ಯಾಭೂಷಣ ಬೆಂಗಳೂರು ಹಾಗೂ ರಾಜೇಂದ್ರ ಬಾಬು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಥಮದಲ್ಲಿ ಪ್ರಾರ್ಥನೆ ಗೈದಂತಹ ಸಂಸ್ಥೆಯ ವಿದ್ಯಾರ್ಥಿಗಳು ಇವರ ಸಾಥಿಗಾಗಿ ಹಾರ್‍ಮೋನಿಯಂ ಲಚ್ಚಣ್ಣ ಕಿನ್ನಾಳ, ತಬಲಾ ಶಿವಲಿಂಗಪ್ಪ ಕಿನ್ನಾಳ, ತಾನಪೂರ ವಿಜಯ ಬಂಡಿ, ತಾಳ ರಂಗಪ್ಪ ಕಿನ್ನಾಳ, ವೀರಭದ್ರಪ್ಪ ಮಾದಿನೂರು, ವಿನಾಯಕ ಕಿನ್ನಾಳ, ಡಾ. ಬಿ.ಆರ್.ಬೆಳ್ಳಟ್ಟಿಯವರು ಪ್ರಾಸ್ತಾವಿಕ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದಂತಹ ಶ್ರೀ ಸುರೇಶ ದೇಸಾಯಿ ಇವರು ಶ್ರೀಯುತ ಬಂಡಿಯವರು ಬಹಳ ಕಷ್ಟ ಜೀವಿಯಾಗಿದ್ದು ಸಂಗೀತ ಕೊಪ್ಪಳ ಜಿಲ್ಲೆಯಲ್ಲಿ ಬೆಳಸುವಲ್ಲಿ ಬಹಳ ಕಷ್ಠ ಪರಿಶ್ರಮ ಪಟ್ಟಿರಿವರು ಮತ್ತು ರಾಷ್ಟ್ರೀಯ - ಅಂತರಾಷ್ಟ್ರೀಯ ಮಟ್ಟದ ಕಲಾವಿದರನ್ನು ನಮ್ಮ ಕೊಪ್ಪಳ ನಗರಕ್ಕೆ ಪರಿಚಯ ಮಾಡಿಸಿದವರು. ಎಂದು ಮಾತನಾಡಿದರು.
ನಂತರ ಸಂಗೀತ ಕಾರ್ಯಕ್ರಮದಲ್ಲಿ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೇದ ಪಂಡಿತ ವಿದ್ಯಾ ಭೂಷಣ ಬೆಂಗಳೂರು ಇವರಿಂದ ಕರ್ನಾಟಕ ಸಂಗೀತ ಶೈಲಿಯಲ್ಲಿ ಹಲವಾರು ದಾಸವಾಣಿಗಳಲ್ಲಿ ಸಿರಿ ಕಂಠಗಳಿಂದ ಹೊರ ಸೂರಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶೋತೃ ವರ್ಗದ ಸಾಲಿನಲ್ಲಿ ಶ್ರೀ ಮ.ನಿ.ಪ್ರ.ಜ ಶ್ರೀ ಗವಿಮಠದ ಶ್ರೀಗಳವರು ಈ ಕಾರ್ಯಕ್ರಮವನ್ನು ಆಲಿಸಿದರು. ವಿಶೇಷ ಮೆರಗು ತಂದು ಕೊಟ್ಟವರು
ಈ ಕಾರ್ಯಕ್ರಮದ ನಿರೂಪಣೆಯನ್ನು ವಾದಿರಾಜ ಪಾಟೀಲ, ಹಾಗೂ ಶ್ರೀಮತಿ ಅಕ್ಕಮಹಾದೇವಿ ಇಟಗಿ ವಂದನಾರ್ಪಣೆಯನ್ನು ಶ್ರೀನಿವಾಸ ಜೋಶಿ ನಿರ್ವಹಿಸಿದರು.
0 comments:
Post a Comment