ಮಾನ್ಯರೆ,
ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು ಇದರ ನೇತೃತ್ವದಲ್ಲಿ ಕಳೆದ 22 ವರ್ಷಗಳಿಂದ ಕೇರಳ ರಾಜ್ಯದಲ್ಲಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ, ಇತಿಹಾಸ, ಪರಂಪರೆಯನ್ನು ಅಂತಾರಾಜ್ಯಾದ್ಯಂತ ಕನ್ನಡ ಜನತೆಗೆ ತಲುಪಿಸುವ ಉದ್ದೇಶದಿಂದ ಕೇರಳ, ಕರ್ನಾಟಕ ಹಾಗೂ ಅಖಿಲಾ ಭಾರತ ಮತ್ತು ಅನಿವಾಸಿ ಭಾರತೀಯ ಕನ್ನಡಿಗರು, ಕಲಾವಿದರು, ಸಾಹಿತಿಗಳನ್ನು ಆಮಂತ್ರಿಸಿ ರಾಜ್ಯ,ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹಿಸುವ ಉದ್ದೇಶದಿಂದ ಸಾಂಸ್ಕೃತಿಕ ವಿನಿಮಯಕ್ಕಾಗಿ ಕಾಸರಗೋಡು ನಗರದಲ್ಲಿ 2012 ದಶಂಬರ್ 29 ಮತ್ತು 30 ರಂದು ಎರಡು ದಿನಗಳ ಕಾಲ ಐತಿಹಾಸಿಕ ಕೇರಳ ರಾಜ್ಯ ೫ನೆಯ ಕನ್ನಡ ಸಮ್ಮೇಳನ-2012 ಮತ್ತು ಕೇರಳ ಕರ್ನಾಟಕ ಉತ್ಸಾಹವನ್ನು ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ ಉದ್ಘಾಟನೆ ಹಾಗೂ ವಿವಿಧ ಕಲಾ, ಪುಸ್ತಕ, ವಸ್ತು ಪ್ರದರ್ಶನಗಳ ಉದ್ಘಾಟನೆ, ಹೊಸ ಕೃತಿಗಳು, ಸ್ಮರಣ ಸಂಚಿಕೆ ಬಿಡುಗಡೆ, ಕವಿಗೋಷ್ಠಿ, ಅಂತಾರಾಜ್ಯ ಮಟ್ಟದ ಕೇರಳ ರಾಜ್ಯ ಚುಟುಕು ಕವಿ ಸಮ್ಮೇಳನ, ಭಾಷಾ ಭಾಂದವ್ಯಗೋಷ್ಠಿ, ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ, ಗಡಿನಾಡು - ಹೊರನಾಡು - ಅನಿವಾಸಿ ಭಾರತೀಯ ಕನ್ನಡಿಗರು - ಕನ್ನಡ ಸಂಘಟನೆಗಳು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ರಾಷ್ಟ್ರೀಯ ಪ್ರಶಸ್ತಿ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾವ್ಯ ಪ್ರಶಸ್ತಿ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಕಾವ್ಯ ಪ್ರಶಸ್ತಿ, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ರಾಷ್ಟ್ರೀಯ ಪ್ರಶಸ್ತಿ, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.
ಕೇರಳ ಮತ್ತು ಕರ್ನಾಟಕ ರಾಜ್ಯದ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಹಾಗೂ ಪ್ರಸಿದ್ಧ ಚಿತ್ರ ಕಲಾವಿದರಿಂದ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ನಡೆಯಲಿದೆ. ಕೇರಳ ಮತ್ತು ಕರ್ನಾಟಕ ರಾಜ್ಯದ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಹಾಗೂ ಪ್ರಸಿದ್ಧ ಚಿತ್ರ ಕಲಾವಿದರಿಂದ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ನಡೆಯಲಿದೆ. ಸಮೂಹ ನೃತ್ಯ, ಜಾನಪದ ನೃತ್ಯ, ಸುಗಮ ಸಂಗೀತ, ದಾಸ ಸಂಕೀರ್ತನೆ, ಜಾನಪದ ಭಾವಗೀತೆ, ದೇಶಭಕ್ತಿಗೀತೆಗಳ ಸಮೂಹ ಗಾಯನಕ್ಕೆ ಅವಕಾಶವಿದೆ. ಆಸಕ್ತ ತಂಡಗಳು, ಸಂಘ ಸಂಸ್ಥೆಗಳು ಪತ್ರ ಮುಖೇನ ಕೂಡಲೇ ಸಂಪರ್ಕಿಸಬಹುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ರಾಜ್ಯದ ವಿಶೇಷ ಜನಪದ ಕಲೆ, ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಕಿರು ನಾಟಕ ಹಾಗೂ ವಿವಿಧ ಜಾನಪದ ಕಲೆಗಳ ಪ್ರದರ್ಶನಗೊಳ್ಳಲಿರುವುದು. ಅಖಿಲ ಕರ್ನಾಟಕ ಕಲೆ ಮತ್ತು ಸಂಸ್ಕೃತಿಯನ್ನು ಕಾಸರಗೋಡಿನಲ್ಲಿ ಪ್ರತಿಬಿಂಬಿಸಲಿದೆ. ಸಮ್ಮೇಳನ ಸಭಾಂಗಣದ ಅಂಗಣದಲ್ಲಿ ವಿಶೇಷವಾಗಿ ವಸ್ತು ಪ್ರದರ್ಶನ, ಪುಸ್ತಕ ಮೇಳ, ವ್ಯಂಗ್ಯ ಚಿತ್ರ, ಛಾಯಾಚಿತ್ರ, ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ವಿವಿಧ ಉದ್ಯಮ ಸಂಸ್ಥೆಗಳಿಂದ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರುತ್ತದೆ.
ಗಡಿನಾಡಾದ ಕಾಸರಗೋಡಿಗೆ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡಿಗರು, ಕನ್ನಡ ಅಭಿಮಾನಿಗಳು, ಸಾಂಸ್ಕೃತಿಕ ರಾಯಭಾರಿಗಳು, ಸಾಹಿತಿಗಳು, ಕಲಾವಿದರು, ಮಾಧ್ಯಮದವರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ಮತ್ತು ಭಾರತದ ಇತರ ಭಾಗಗಳಿಂದ ಸುಮಾರು 250 ಕ್ಕೂ ಹೆಚ್ಚು ಪ್ರತಿನಿಧಿಗಳ ಸಾಂಸ್ಕೃತಿಕ ನಿಯೋಗವು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಗಲ್ಫ್ ರಾಷ್ಟ್ರ, ವಿದೇಶಗಳ ಅನಿವಾಸಿ ಭಾರತೀಯ ಕನ್ನಡಿಗರು, ಕೇರಳ ಕರ್ನಾಟಕ ಹಾಗೂ ವಿವಿಧ ರಾಜ್ಯಗಳ ಕನ್ನಡ ಸಂಘಟನೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳು, ಸಚಿವರು, ವಿವಿಧ ಇಲಾಖೆಗಳ ಸರಕಾರದ ಕಾರ್ಯದರ್ಶಿಗಳು, ನಿರ್ದೇಶಕರು, ವಿವಿಧ ಅಕಾಡಮಿ, ಪ್ರಾಧಿಕಾರ, ನಿಗಮಗಳ ಅಧ್ಯಕ್ಷ, ಕಾರ್ಯದರ್ಶಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕವಿ, ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಎರಡು ದಿನ ಊಟ ಉಪಹಾರದ ವ್ಯವಸ್ಥೆ ಇರುತ್ತದೆ. ಪ್ರತ್ಯೇಕವಾಗಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುವವರು ಮುಂಚಿತವಾಗಿ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಸ್ಥಳೀಯವಾಗಿ ಲಭ್ಯವಿರುವ ಸಭಾಂಗಣದಲ್ಲಿ ಸಾಮಾನ್ಯ ವಸತಿ ವ್ಯವಸ್ಥೆಯಿದೆ.
ಕನ್ನಡಿಗರು ಸದಾ ನೆನಪಿಸುವ ಸಂಭ್ರಮದ ಐತಿಹಾಸಿಕ ಕೇರಳ ರಾಜ್ಯ ೫ನೆಯ ಕನ್ನಡ ಸಮ್ಮೇಳನ - 2012 ಮತ್ತು ಕೇರಳ ಕರ್ನಾಟಕ ಉತ್ಸವದ ಸವಿನೆನಪಿಗಾಗಿ ನಮ್ಮೆಲ್ಲಾ ಆಶಯಗಳನ್ನು ಹೊತ್ತ ಲೇಖನಗಳು, ಕಾಸರಗೋಡು ಜಿಲ್ಲೆ ಸಹಿತ ಕೇರಳ ರಾಜ್ಯದಲ್ಲಿರುವ ಕನ್ನಡ ಸಂಘಟನೆಗಳ ವಿಳಾಸಗಳು, ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ವಿಳಾಸಗಳು, ಭಜನಾ ಸಂಘಗಳು, ದೇವಸ್ಥಾನಗಳ ವಿಳಾಸಗಳು, ಕಾಸರಗೋಡು ಮತ್ತು ಮಂಗಳೂರಿನ ಪತ್ರಿಕಾ, ದೃಶ್ಯ ಮಾಧ್ಯಮಗಳ ವಿಳಾಸಗಳು, ಕಾಸರಗೋಡು ಜಿಲ್ಲೆಯ ಸರಕಾರಿ ಕಾಲೇಜುಗಳ ವಿಳಾಸಗಳು, ಕಾಸರಗೋಡು ಜಿಲ್ಲೆಯ ರಾಷ್ಟ್ರೀಕೃತ, ಖಾಸಗಿ, ಸಹಕಾರಿ ಬ್ಯಾಂಕ್‌ಗಳ ವಿಳಾಸಗಳು, ಆಸ್ಪತ್ರೆಗಳು, ವಸತಿ ಗೃಹಗಳು, ಹೊಟೇಲ್, ಉಪಹಾರ ಗೃಹಗಳ ವಿಳಾಸಗಳು, ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳ ಪರಿಚಯ ಮತ್ತು ಇತರ ಸಂಗ್ರಹಯೋಗ್ಯ ಮಾಹಿತಿಗಳನ್ನೊಳಗೊಂಡ ಸ್ಮರಣ ಸಂಚಿಕೆ ಪ್ರಕಟವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು, ಪಾರೆಕಟ್ಟೆ ರಸ್ತೆ, ಅಂಚೆ ರಾಮದಾಸ ನಗರ, ಕಾಸರಗೋಡು - 671124, ಕೇರಳ ರಾಜ್ಯ, ದೂರವಾಣಿ : 04994 227911 ವೊಬೈಲ್ 09448572016, 095679991241 ಈ ವಿಳಾಸಕ್ಕೆ ಕಳುಹಿಸಬಹುದು.
0 comments:
Post a Comment
Click to see the code!
To insert emoticon you must added at least one space before the code.