PLEASE LOGIN TO KANNADANET.COM FOR REGULAR NEWS-UPDATES


  ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸಭೆ ನ. ೨೩ ರಂದು ಮಧ್ಯಾಹ್ನ ೨.೩೦ ಘಂಟೆಗೆ ಮುನಿರಾಬಾದ್ ಕಾಡಾ ಕಛೇರಿ ಸಭಾಂಗಣದಲ್ಲಿ ನಡೆಯಲಿದೆ. 
ಸಭೆಯಲ್ಲಿ ೨೦೧೨-೧೩ನೇ ಸಾಲಿನ ಹಿಂಗಾರು ಹಂಗಾಮಿಗೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ವಿವಿಧ ಕಾಲುವೆಗಳಿಗೆ ನೀರನ್ನು ಒದಗಿಸುವ ಬಗ್ಗೆ ಮತ್ತು ಅಧಿಸೂಚನೆಯನ್ನು ಹೊರಡಿಸುವ ಕುರಿತು, ತುಂಗಭದ್ರಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಡಿ ಹಳ್ಳಿಗಳಿಗೆ / ಪಟ್ಟಣಗಳಿಗೆ ಬೇಸಿಗೆಯಲ್ಲಿ ಕುಡಿಯುವ ಸಲುವಾಗಿ ನೀರನ್ನು ಒದಗಿಸುವುದು ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ  ಅಧೀಕ್ಷಕ ಅಭಿಯಂತರ ಎಸ್.ಹೆಚ್. ಮಂಜಪ್ಪ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top